fbpx
ಸಮಾಚಾರ

ಗೂಗಲ್ ಕ್ರೋಮ್ ಬಳಕೆದಾರರೆ ಇನ್ಮುಂದೆ ಹುಷಾರ್!

ಇಂಟರ್ನೆಟ್ ಬಳಕೆಯು ಅವಶ್ಯಕವಾಗಿರುವ ಇಂದಿನ ದಿನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ನಾವು ತಿಳಿಯದೆ ತಪ್ಪು ಮಾಡಿ ಭಾರೀ ದಂಡವನ್ನು ತರೆಬೇಕಾಗುತ್ತಿದೆ. ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ, ಆಪ್‌ ಬಳಕೆಮಾಡಿಕೊಳ್ಳುವ ಸಂದರ್ಭದಲ್ಲಿ, ಇಲ್ಲವೇ ಚಾಟ್ ಮಾಡುವಾಗ ನಮ್ಮ ಅರಿವಿಗೆ ಬಾರದೆ ಮಾಡುವ ತಪ್ಪುಗಳು ಮುಂದೆ ನಮಗೆ ಮಾರಕವಾಗುವ ಸಾಧ್ಯತೆ ಇದೆ. ಗೂಗಲ್ ಕ್ರೋಮ್ ಬಳಕೆ ಮಾಡುವಾಗ ಪ್ರತಿದಿನವೂ ಸ್ಕ್ಯಾಮ್‌ಗೆ ಒಳಗಾಗುವವರ ಸಂಖ್ಯೆ ಮೀರುತ್ತಿದೆ. ಐಟಿ ಸಚಿವಾಲಯದ ಭಾಗವಾಗಿರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್  ಗೂಗಲ್ ಕ್ರೋಮ್ ಇಂಟರ್ನೆಟ್ ಬ್ರೌಸರ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ.

ಗೂಗಲ್ ಕ್ರೋಮ್ ಸರ್ಚ್ ಬಳಕೆ ಮಾಡುವಾಗ ಯಾವುದೇ ಕಾರಣಕ್ಕೂ ಪಾಪ್ ಆಪ್ ವಿಂಡೋ ಓಪನ್ ಮಾಡಲೇಬೇಡಿ. ಅತೀ ಹೆಚ್ಚಿನ ಮಾಲ್ವೇರ್‌ಗಳು ನೀವು ಬ್ರೌಸ್ ಮಾಡುವ ವೆಬ್‌ ತಾಣಗಳಿಂದಲೇ ಬರತ್ತಿರುವುದು ನಿಮಗೆ ತಿಳಿದಿರಲಿ. ನೀವು ಮಾಡುವ ಒಂದೇ ಒಂದು ತಪ್ಪಿನಿಂದ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವೈರಸ್‌ಗಳು ಸೇರಿಕೊಳ್ಳುತ್ತಿವೆ. ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಹಲವಾರು ದೋಷಗಳು ಕಂಡುಬಂದಿದ್ದು ಇದರಿಂದ ಹ್ಯಾಕರ್​ಗಳು ನಿಮ್ಮ ಪಿಸಿ ಒಳಗಡೆ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದಿದೆ. ನಿಮ್ಮ ಡೇಟಾ ಖದಿಯುವ ಸಾಧ್ಯತೆ ಕೂಡ ಇದ್ದು ಪಿಸಿಯಲ್ಲಿ ನಿಮಗೆ ತಿಳಿಯದಂತೆ  ವೈರಸ್ ಅನ್ನು ಸೇರಿಸಬಹುದು ಎಂದು ಎಚ್ಚರಿಕೆ ನೀಡಿದೆ.

ಹೀಗಾಗಿ ಆದಷ್ಟು ಬೇಗ ಅಪ್ಡೇಟ್ ಮಾಡುವಂತೆ ಸರ್ಕಾರ ಸೂಚಿಸಿದೆ. ಕ್ರೋಮ್ ತನ್ನ ವಿಂಡೋಸ್ ಮ್ಯಾಕ್ ಮತ್ತು ಲೈನಕ್ಸ್ ಬಳಕೆದಾರರಿಗೆ 96.0.4664.93 ಅಪ್ಡೇಟ್ ನೀಡಿದೆ. ಎಲ್ಲಾ ಕ್ರೋಮ್ ಬಳಕೆದಾರರು ತಮ್ಮ ಕ್ರೋಮ್ ಬ್ರೌಸರ್‌ಗಳನ್ನು ಅಪ್‌ಡೇಟ್ ಮಾಡುವ ಮೂಲಕ ದೋಷಗಳಿಗೆ ಹೊಸ ಭದ್ರತಾ ಫಿಕ್ಸ್ ಅನ್ನು ಅನ್ವಯಿಸಬೇಕು ಎಂದು ಗೂಗಲ್ ಎಚ್ಚರಿಸಿದೆ. ಉಚಿತ ವೈಫೈ ಮೂಲಕವೇ ನಿಮ್ಮ ಸ್ಮಾರ್ಟ್‌ಫೋನ್ ಅಥಾವ ಲ್ಯಾಪ್ ಟಾಪ್ ಪ್ರವೇಶವನ್ನು ಹ್ಯಾಕರ್ಸ್ ಪಡೆದುಕೊಳ್ಳಬಹುದು. ಹಾಗಾಗಿ, ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top