ದುಬೈನ ಈಡನ್ ಗಾರ್ಡನ್ಸ್ ಗ್ರೌಂಡ್ನಲ್ಲಿ ನಡೆದ ಕರ್ವಾಲ್ ಗ್ಲೋಬಲ್ ಟ್ವೆಂಟಿ20 ಜೂನಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮೂಲದ ಹರ್ಷಿತ್ ಸೇಠ್ ಒಂದೇ ಓವರ್ನಲ್ಲಿ 6 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಅಜ್ಮನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಿಯಲ್ಲಿ ದುಬೈ ಕ್ರಿಕೆಟ್ ಕೌನ್ಸಿಲ್ನ ಅಂಡರ್-19 ತಂಡದ ಪರ ಆಡಿದ ಹರ್ಷಿತ್ ಸೇಠ್ ಪಾಕಿಸ್ತಾನದ ಹೈದರಾಬಾದ್ ಹಾಕ್ಸ್ ಅಕಾಡೆಮಿ ತಂಡದ ವಿರುದ್ಧ ಪಂದ್ಯದಲ್ಲಿ ಈ ದಾಖಲೆ ಬೌಲಿಂಗ್ ಮಾಡಿದ್ಧಾರೆ.
“A Perfect Over”.
Harshit created a history in the U19 Cricket yesterday when he took 6 wickets in 6 balls in a U19 league match against U19 team from Pakistan. The match held in Ajman Oval approved by Ajman Cricket Council organized by Karwan called Karwan Global League!!!!! pic.twitter.com/dGoQuynDIc
— Harshit Seth (@Harshit_seth04) December 5, 2021
ದುಬೈ ಕ್ರಿಕೆಟ್ ಕೌನ್ಸಿಲ್ ಸ್ಟಾರ್ಲೆಟ್ಸ್ ಪರ ಆಡುತ್ತಿರುವ ಸೇಠ್ ಪಾಕಿಸ್ತಾನದ ಹೈದರಾಬಾದ್ ಹಾಕ್ಸ್ ಅಕಾಡೆಮಿ RCG ವಿರುದ್ಧ ಒಂದು ಓವರ್ನಲ್ಲಿ ಆರು ವಿಕೆಟ್ಗಳನ್ನು ಉರುಳಿಸಿದರು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಒಟ್ಟು 8 (4-0-4-8) ವಿಕೆಟ್ಗಳನ್ನು ಕಬಳಿಸಿದರು. ಇನ್ನು ಹರ್ಷಿತ್ ಸೇಠ್ ದಾಳಿಗೆ ತತ್ತರಿಸಿದ ಹೈದರಾಬಾದ್ ಹಾಕ್ಸ್ ಅಕಾಡೆಮಿ ತಂಡವು ಕೇವಲ 44 ರನ್ಗಳಿಗೆ ಆಲೌಟ್ ಆಯಿತು.
ಪ್ರಸಕ್ತ ಕ್ರಿಕೆಟ್ನಲ್ಲಿ ಬಹುತೇಕ ಅಸಾಧ್ಯವಾದ ಡಬಲ್ ಹ್ಯಾಟ್ರಿಕ್ ದಾಖಲೆಯನ್ನು ಎಡಗೈ ಸ್ಪಿನ್ನರ್ ಹರ್ಷಿತ್ ಮಾಡಿದ್ದಾರೆ. ಇದೇ ವರ್ಷದ ನ.28ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂತಹ ಘಟನೆ ಇನ್ನೂ ನಡೆದಿಲ್ಲ. ದುಬೈ ಜೆಮ್ಸ್ ಮಾಡರ್ನ್ ಅಕಾಡೆಮಿಯಲ್ಲಿ 11ನೇ ತರಗತಿ ವಿದ್ಯಾರ್ಥಿಯಾಗಿರುವ ಹರ್ಷಿತ್ 16 ವರ್ಷದೊಳಗಿನವರ ವಿಭಾಗದಲ್ಲಿ ಯುಎಇಯನ್ನು ಪ್ರತಿನಿಧಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
