fbpx
ಕ್ರಿಕೆಟ್

ಮ್ಯಾಕ್ಸ್ ವೆಲ್ ಗೆ ಕೂಡಿಬಂತು ಕಂಕಣ ಭಾಗ್ಯ: ಸದ್ಯದಲ್ಲೇ ಭಾರತದ ಅಳಿಯನಾಗಲಿದ್ದಾರೆ ಮ್ಯಾಕ್ಸಿ

ಆಸ್ಟ್ರೇಲಿಯಾ ತಂಡದ ಸ್ಪೋಟಕ ಆಲ್‌ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಅವರು ವಿನ್ನಿ ರಾಮನ್​ ಅವರನ್ನು ಪ್ರೀತಿಸುತ್ತಿದ್ದು ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ.ಕಳೆದ ಕೆಲ ವರ್ಷಗಳಿಂದ ಆಸೀಸ್ ಕ್ರಿಕೆಟಿಗನ ಜೊತೆ ಪಾರ್ಟಿ ಪಬ್​ಗಳಲ್ಲಿ ಕಾಣಿಸಿಕೊಂಡರು. ಮ್ಯಾಕ್ಸ್‌ವೆಲ್ ವಿನ್ನಿಯೊಂದಿಗೆ ಬಹಳ ಸಮಯದಿಂದ ಡೇಟಿಂಗ್ ಕೂಡ ಮಾಡುತ್ತಿದ್ದರು.

2019 ರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನಿಂದ ದುರಾ ಇದ್ದರು. ಮತ್ತೆ ಅವರನ್ನು ಮೊದಲಿನ ಸ್ಥಿತಿಗೆ ಮರಳುವಂತೆ ಮಾಡಿರುವುದರಲ್ಲಿ ವಿನ್ನಿ ಪಾತ್ರ ಬಹಳಷ್ಟಿದೆ. ಆದರೆ ನಂತರ ಮ್ಯಾಕ್ಸ್‌ವೆಲ್ ಅವರು ವಿನಿ ರಾಮನ್‌ನಿಂದಾಗಿ ಮತ್ತೆ ಕ್ರಿಕೆಟ್‌ಗೆ ಮರಳುವಂತಾಯಿತು.

 

ಕಳೆದ ವರ್ಷ ಮಾರ್ಚ್‌ನಲ್ಲಿ ಮ್ಯಾಕ್ಸ್‌ವೆಲ್ ಭಾರತೀಯ ಸಂಪ್ರದಾಯದ ಪ್ರಕಾರ ವಿನಿ ರಾಮನ್ ಅವರೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಮ್ಯಾಕ್ಸ್‌ವೆಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದ ಅಳಿಯನಾಗುವ ಎರಡನೇ ಆಸ್ಟ್ರೇಲಿಯಾದ ಆಟಗಾರನಾಗಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಭಾರತೀಯ ಮೂಲದ ಮಾಸೂಮ್ ಸಿಂಘಾ ಅವರನ್ನು ವಿವಾಹವಾದರು.

 

 

ವಿನಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮ್ಯಾಕ್ಸ್‌ವೆಲ್ ಜೊತೆಗಿನ ಅನೇಕ ಫೋಟೋಗಳ್ಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಜೋಡಿಯ ಫೋಟೋಗಳು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಶೀಘ್ರದಲ್ಲೇ ಆಸ್ಟ್ರೆಲಿಯನ್ ಆಟಗಾರ ಭಾರತದ ಅಳಿಯನಾಗಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top