fbpx
ಸಮಾಚಾರ

ಪ್ರಿಯಾಂಕಾ ಹಾಗೂ ಉಪೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ

ಸ್ಯಾಂಡಲ್ ವುಡ್ ನ ತಾರಾಜೋಡಿಗಳು ತಮ್ಮ ಸಂತೋಷವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ಉಪೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷದ ವಿವಾಹ ವಾರ್ಷಿಕೋತ್ಸವನ್ನು ಒಂದು ರೆಸಾರ್ಟ್‍ವೊಂದರಲ್ಲಿ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.

 

 

2003ರಲ್ಲಿ ಮದುವೆಯಾದ ಈ ತಾರಾಜೋಡಿ ಕಷ್ಟ-ಸುಖವನ್ನ ಸಮನಾಗಿ ಸ್ವೀಕರಿಸಿ ಈಗ 18 ವರ್ಷಗಳು ಯಶಸ್ವಿಯಾಗಿ ಪೂರೈಸಿದೆ. ಉಪೇಂದ್ರ ಅವರು ಕನ್ನಡದಲ್ಲಿ ಹೊಸ ರೀತಿಯ ಬಗೆ ಬಗೆಯ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಸದಾ ಸಿನಿಮಾ ಶೂಟಿಂಗ್, ರಾಜಕೀಯ ಎಂದೆಲ್ಲಾ ಬ್ಯುಸಿಯಾಗಿರುವ ಉಪೇಂದ್ರ ಅವರು ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ತಾವೂ ಎಷ್ಟೇ ಬ್ಯೂಸಿಯಾಗಿದ್ದರೂ ಈ ಮಧ್ಯೆ ಪತ್ನಿ, ಮಕ್ಕಳಿಗೂ ಕೂಡ ಅಷ್ಟೇ ಸಮಯ ಕೊಡುತ್ತಾರೆ.

 

 

ಮದುವೆ ವಾರ್ಷಿಕೋತ್ಸವ ಸಂಭ್ರಮದ ಖುಷಿಯಲ್ಲಿ ದಂಪತಿ ಕೇರಳದಲ್ಲಿರುವ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಿ ಇಬ್ಬರು ಏಕಾಂತವಾಗಿ ಕಾಲ ಕಳೆದಿದ್ದಾರೆ. ಜೊತೆಗೆ ತಮ್ಮ ವಿವಾಹವಾರ್ಷಿಕೋತ್ಸವವನ್ನು ಕೇಕ್ ಕಟ್ ಮಾಡಿ ಸಖತ್ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ. ಇನ್ನೂ ಈ ಫೋಟೋಗಳನ್ನು ಪ್ರಿಯಾಂಕಾ ತಮ್ಮ ಇನ್‍ಸ್ಟಾಗ್ರಾಮ್ ಅಪ್ಲೋಡ್ಹಂ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top