fbpx
ಕ್ರಿಕೆಟ್

ಅಂದು ಕಿತ್ತು ತಿನ್ನುವ ಬಡತನವಿದ್ದರೂ ಇಂದು ಕೋಟಿ ಗಳಿಸಿದ ಕ್ರಿಕೆಟಿಗರಿವರು

ಈ ಸ್ಟಾರ್ ಕ್ರಿಕೆಟ್ ಆಟಗಾರರಿಗೆ ಒಂದೊತ್ತಿನ ಊಟಕ್ಕೂ ಕಷ್ಟವಿತ್ತು.
ಕ್ರಿಕೆಟ್ ಅಂದರೇನೆ ಹಾಗೆ. ಅದು ಮೈದಾನದಲ್ಲಿ ಹೇಗೆ ರೋಚಕ ಆಟವಾಗಿ ಹೇಗೆ ಬೇಕಾದರೂ ರೋಚಕ ತಿರುವುಗಳನ್ನು ಪಡೆದುಕೊಳ್ಳಬಲ್ಲದೋ ಹಾಗೆ ಅನೇಕರ ಬದುಕಿನಲ್ಲೂ ರೋಚಕ ತಿರುವುಗಳನ್ನು ಕೊಟ್ಟಿದೆ. ಸಾಮಾನ್ಯರಾಗಿದ್ದವರನ್ನು ಹೀರೋಗಳನ್ನಾಗಿಸಿದೆ. ಕಡು ಬಡವರಾಗಿದ್ದ ಒಂದಿಷ್ಟು ಕ್ರಿಕೆಟಿಗರನ್ನು ಒಮ್ಮಿಂದೊಮ್ಮೆಲೇ ಅಗರ್ಭ ಶ್ರೀಮಂತರನ್ನಾಗಿಸಿದ ಉದಾಹರಣೆಯೂ ಕ್ರಿಕೆಟ್‌ನಲ್ಲಿದೆ. ಹೀಗೆ ಕ್ರಿಕೆಟ್ ಜಗತ್ತಿಗೆ ಕಷ್ಟ ಪಟ್ಟು ಬಂದು ಈಗ ಸಾಧನೆ ಮಾಡಿರುವ ಒಂದಿಷ್ಟು ಕ್ರಿಕೆಟಿಗರ ಬಗ್ಗೆ ನೋಡೋಣ.

 


ಜಸ್‌ಪ್ರೀತ್ ಬುಮ್ರಾ :

ಒಂದು ಕಾಲದಲ್ಲಿ ಶೂ ಖರೀದಿಸಲೂ ಹಣವಿಲ್ಲದಷ್ಟು ಬಡತನ ಬುಮ್ರಾ ಮನೆಯಲ್ಲಿತ್ತು. ಆದರೆ ಆಗ ಟೀಮ್ ಇಂಡಿಯಾದ ಸ್ಟಾರ್ ಬೌಲರ್. ಕ್ಷಮತೆ ಕಾಯ್ದುಕೊಳ್ಳುವ ಬುಮ್ರಾ ಎಲ್ಲಾ ಮಾದರಿಯ ಕ್ರಿಕೆಟ್ ಗೂ ಸೈ ಅನಿಸಿಕೊಂಡಿದ್ದಾರೆ. ಕಷ್ಟ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಬುಮ್ರಾ ಸ್ಪಷ್ಟ ನಿದರ್ಶನ.

ಮಹಮ್ಮದ್ ಸಿರಾಜ್ :
ಮನೆಯಲ್ಲಿ ಕಿತ್ತು ತಿನ್ನುವಷ್ಟು ಬಡತನ. ತಂದೆಯ ಆಟೋ ಜೊತೆಗೇ ಜೀವನ ಬಂಡಿ ಓಟ ಅನ್ನುವಂತಿದ್ದ ಸಿರಾಜ್ ಇಂದು ತಮ್ಮ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ :
ಪಾಂಡ್ಯ ಬ್ರದರ್ಸ್ ಇಂದು ಕೋಟ್ಯಾಂತರ ಆಸ್ತಿಯ ಒಡೆಯರು. ಆದರೆ ಈ ಇಬ್ಬರು ಅಣ್ಣತಮ್ಮಂದಿರು ಬಡತನದಿಂದ ಬಂದ ಪ್ರತಿಭೆಗಳು. ಒಂದು ವೇಳೆ ಕ್ರಿಕೆಟ್ ನನ್ನ ಕೈ ಹಿಡಿಯದಿದ್ದರೆ ನಾನೀಗಲೂ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹೊಯ್ಯುತ್ತಿದ್ದೆ ಎಂದು ಹಾರ್ದಿಕ್ ಹೇಳಿಕೊಳ್ಳುತ್ತಾರೆಂದರೆ ಎಷ್ಟು ಬಡತನವಿತ್ತು ಎಂಬುದನ್ನು ನೀವೇ ಅಂದಾಜಿಸಿ.

ರವೀಂದ್ರ ಜಡೇಜ :
ಭಾರತದ ಶ್ರೇಷ್ಟ ಆಲ್‌ರೌಂಡ್‌ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜ ಒಂದು ಕಾಲದಲ್ಲಿ ಬಡತನದಲ್ಲಿದ್ದರು. ಅವರ ತಂದೆ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ರವೀಂದ್ರ ಜಡೇಜ ಅವರ ಕಠಿಣ ಪರಿಶ್ರಮದಿಂದ ಬಡತನ ದೂರವಾಗಿದೆ.

ಮಹೇಂದ್ರ ಸಿಂಗ್ ಧೊನಿ ;
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿರುವ ಮತ್ತು ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಕೂಡ ತೀರ ಸಾಮಾನ್ಯ ಕುಟುಂಬದಿAದ ಬಂದವರು. ಇಂದು ಐಷರಾಮಿ ಮನೆ ಕಾರು, ಬಂಗಲೆಗಳನ್ನು ಹೊಂದಿರುವ ಧೋನಿ ಒಂದು ಕಾಲದಲ್ಲಿ ಮನೆಯ ಆರ್ಥಿಕ ಸ್ಥಿತಿ ಸುಧಾರಣೆಕಾಗಿ ಭಾರತಯೀಯ ರೈಲ್ವೇಯಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.

ಟಿ. ನಟರಾಜನ್ :
ತಮಿಳುನಾಡು ಮೂಲದ ಟಿ. ನಟರಾಜನ್ ಕುಟುಂಬ ತೀರ ಸಂಕಷ್ಟದಲ್ಲಿತ್ತು. ಐವರು ಮಕ್ಕಳಿದ್ದ ನಟರಾಜನ್ ಕುಟುಂಬ ನಂತರದ ದಿನಗಳಲ್ಲಿ ಸಾಕಷ್ಟು ಸಂಕಷ್ಟವನ್ನು ಎದುರಿಸಿತ್ತು. ಅವರ ತಂದೆಗೆ ಮಕ್ಕಳನ್ನು ಸಾಕುವುದೂ ಸಾಕಷ್ಟು ತ್ರಾಸ ಉಂಟು ಮಾಡಿತ್ತು. ಇದೀಗ ನಟರಾಜನ್ ಟೀಮ್ ಇಂಡಿಯಾದ ಸ್ಟಾರ್ ಬೌಲರ್. ಇದರ ಜೊತೆಗೆ ಅವರ ಕುಟುಂಬದ ಅದೃಷ್ಟವೂ ಖುಲಾಯಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top