fbpx
ಸಮಾಚಾರ

ವಾಟ್ಸಾಪ್ ​ ನಲ್ಲಿ ನಂಬರ್ ಸೇವ್ ಮಾಡದೇ ಮೆಸೇಜ್ ಮಾಡುವುದು ಹೇಗೆ?

ವಾಟ್ಸ್​ಆ್ಯಪ್​​ನಲ್ಲಿ ಯಾರಿಗಾದರೂ ಮೆಸೇಜ್ ಕಳುಹಿಸಲು ಬಯಸಿದರೆ ಅವರ ನಂಬರ್ ಸೇವ್ ಮಾಡಲೇ ಬೇಕು. ವ್ಯಕ್ತಿಯೊಬ್ಬರ ನಂಬರ್ ನಮಗೆ ಮುಂದೆಂದೂ ಅಗತ್ಯ ಬೀಳುವುದಿಲ್ಲ ಅಥವಾ ಅನಗತ್ಯ ಎಂದಾದರೆ, ಆ ಸಂಖ್ಯೆಯನ್ನು ಫೋನ್‌ನಲ್ಲಿ ಸೇವ್ ಮಾಡದೆಯೇ ಅವರಿಗೆ ಸಂದೇಶ ಕಳುಹಿಸಬಹುದು. ಇದು ತೀರಾ ಸುಲಭವಿದೆ. ಆದರೆ, ನಿಮ್ಮ ಡೆಸ್ಕ್‌ಟಾಪ್ ಮತ್ತು ಮೊಬೈಲ್ ವೆಬ್ ಬ್ರೌಸರ್‌ಗಳಲ್ಲಿನ ವೈಶಿಷ್ಟ್ಯದ ಮೂಲಕ ಬಳಸಬಹುದು.

ಇದಕ್ಕಾಗಿ ಮೊದಲು ನೀವು ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಡೇಟಾ ಆನ್ ಮಾಡಿ. ಅದರಲ್ಲಿರುವ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಅಥವಾ ಯಾವುದೇ ವೆಬ್ ಬ್ರೌಸರ್ ಅನ್ನು ತೆರೆಯಿರಿ ಅಡ್ರೆಸ್ ಬಾರ್‌ನಲ್ಲಿ https://wa.me/91 ಅಂತ ಬರೆದು ನಂತರ ಆ ವ್ಯಕ್ತಿಯ ಹತ್ತು ಮೊಬೈಲ್ ಸಂಖ್ಯೆಯನ್ನು ಸ್ಪೇಸ್ ಇಲ್ಲದೆ ಟೈಪ್ ಮಾಡಿ.

ಇಷ್ಟು ಅದಾ ನಂತರ ಎಂಟರ್ ಕೊಟ್ಟ ನಂತರ ಅದು ನೇರವಾಗಿ ಫೋನ್‌ನಲ್ಲಿರುವ ವಾಟ್ಸ್ಆ್ಯಪ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಈ ನಂಬರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಬೇಕೇ ಅಂತ ಕೇಳುತ್ತದೆ. ‘ಮೆಸೇಜ್’ ಎಂಬುದನ್ನು ಕ್ಲಿಕ್ ಮಾಡಿದರೆ ವಾಟ್ಸ್ಆ್ಯಪ್ ವಿಂಡೋ ತೆರೆದುಕೊಳ್ಳುತ್ತದೆ ಮತ್ತು ಸಂದೇಶವನ್ನು ಅಲ್ಲೇ ಟೈಪ್ ಮಾಡಿ ಕಳುಹಿಸಬಹುದು ಇಲ್ಲವೇ ಯಾವುದೇ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಶೇರ್ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top