fbpx
ಸಮಾಚಾರ

ಕೋವಿಡ್ ಸಂಕಷ್ಟದಲ್ಲೂ ಮೋದಿ ಸರ್ಕಾರ ತೆಗೆದುಕೊಂಡ ೬ ದಿಟ್ಟ ನಿರ್ಧಾರಗಳಿಂದ ದೇಶದ ಪ್ರಗತಿ ಸಾಧ್ಯನಾ?

ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿ0ದ ಹೊಸ ಹೊಸ ಪ್ರಯೋಗಗಳನ್ನು, ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ೨೦೨೧ ಅದರಲ್ಲೂ ಸರ್ಕಾರಕ್ಕೆ ಅನೇಕ ಸವಾಲುಗಳನ್ನು ಒಡ್ಡಿತ್ತು. ಕೋವಿಡ್ ಅವಧಿಯಲ್ಲೂ ಮೋದಿ ಸರ್ಕಾರ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ವರ್ಷ ಮೋದಿ ಸರ್ಕಾರ ತೆಗೆದುಕೊಂಡಿರುವ ೬ ಪ್ರಮುಖ ನಿರ್ಧಾರಗಳನ್ನು ನೋಡೋಣ.

 

 

೧. ಕೃಷಿ ಕಾಯ್ದೆಗಳ ಹಿಂತೆಗೆತ :
ಕಳೆದ ವರ್ಷ ನವೆಂಬರ್ ತಿಂಗಳಿನಿAದ ಮುಖ್ಯವಾಗಿ ಪಂಜಾಬ್ ಹಾಗೂ ಹರ್ಯಾಣದ ಸಾವಿರಾರು ರೈತರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಮೋದಿ ಸರ್ಕಾರ ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಲು ಮನಸ್ಸು ಮಾಡಿರಲಿಲ್ಲ. ಒಂದೊಮ್ಮೆ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು ನವೆಂಬರ್ ೧೯ರಂದು ತಮ್ಮ ಸರ್ಕಾರ ಈ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ಬಳಿಕ ವರ್ಷವಿಡೀ ನಡೆಯುತ್ತಿದ್ದ ಪ್ರತಿಭಟನೆ ಕೊನೆಗೊಂಡಿತು.

೨. ಕೋವಿಡ್ ೧೯ ಲಸಿಕೆಗಳ ಉಚಿತ ವಿತರಣೆ :
ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಸಹಜವಾಗಿ ಕೊರೋನಾ ಎರಡನೇ ಅಲೆಯಿಂದ ತತ್ತರಿಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಲಸಿಕೆ ಅಭಿಯಾನವನ್ನು ವಿಸ್ತರಿಸಲಾಯಿತು. ಕೆಲವು ಕಡೆಗಳಲ್ಲಿ ಲಸಿಕೆಗಳ ಕೊರತೆಯಿಂದಾಗಿ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ಅಭಿಯಾನವನ್ನು ನಿಲ್ಲಿಸಿದ್ದವು. ಇದು ದೇಶದ್ಯಾಂತ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸರ್ಕಾರವನ್ನು ಪ್ರಶ್ನಿಸಿದ ಬಳಿಕ ಜೂನ್ ೭ ರಂದು ಪ್ರಧಾನಿ ಮೋದಿ ಅವರು ಎಲ್ಲಿರಿಗೂ ಉಚಿತ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದರು. ತಯಾರಕರಿಂದ ಶೇ.೭೫ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಿದ ಮೋದಿ ಸರ್ಕಾರದ ನಡೆ ನಿಜಕ್ಕೂ ಅಭಿನಂದನೀಯ.

೩. ಹೊಸ ೭ ರಕ್ಷಣಾ ಕಂಪನಿಗಳು :
ರಕ್ಷಣಾ ವಲಯದ ಶಸ್ತ್ರಾಸ್ತ್ರಗಳನ್ನು, ಸಾಧನಗಳನ್ನು ತಯಾರಿಸುವ ಸಾರ್ವಜನಿಕ ವಲಯದ ೭ ಹೊಸ ರಕ್ಷಣಾ ಕಂಪನಿಗಳನ್ನು ಅಕ್ಟೋಬರ್ ೧೫ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಸಚಿವಾಲಯದಿಂದ ಈ ಉದ್ದಿಮೆಗಳಿಗೆ ೬೫,೦೦೦ ಕೋಟಿ ರೂ. ಮೊತ್ತದ ಆರ್ಡರ್‌ಗಳು ಸಿಗಲಿದೆ. ಹಳೆಯ ಶಸ್ತ್ರಾಸ್ತç ಕಾರ್ಖಾನೆಗಳ ಮಂಡಳಿಯನ್ನು (ಒಎಫ್‌ಬಿ) ವಿಸರ್ಜಿಸಿ, ಹೊಸ ೭ ಸಾರ್ವಜನಿಕ ವಲಯದ ಕಂಪನಿ (ಪಿಎಸ್‌ಯು)ಗಳನ್ನು ಸ್ಥಾಪಿಸಲಾಗುತ್ತಿದೆ. ಶಸ್ತ್ರಾಸ್ತ್ರ ಉತ್ಪಾದನೆಯ ಹೊಸ ಕಾರ್ಖಾನೆಗಳಿಗೆ ಸರಕಾರ ಮುಂಗಡವನ್ನೂ ಪಾವತಿಸಲಿದೆ. ರಕ್ಷಣಾ ಇಲಾಖೆ, ಕೇಂದ್ರ ಮೀಸಲು ಪೆuಟಿಜeಜಿiಟಿeಜಲೀಸ್ ಪಡೆ ಮತ್ತು ರಾಜ್ಯ ಸರಕಾರಗಳು ಅವುಗಳಿಗೆ ಹೊಸ ಕಾರ್ಪೊರೇಟ್ ಸ್ವರೂಪವನ್ನು ನೀಡಲು ಸಹಕರಿಸಲಿವೆ. ಶಸ್ತ್ರಾಸ್ತ್ರಗಳ ಉತ್ಪಾದನಾ ಕಾರ್ಖಾನೆಗಳಿಗೆ ಕಾರ್ಪೊರೇಟ್ ಸ್ವರೂಪ ನೀಡುವುದಕ್ಕಾಗಿ ಈ ಹೊಸ ಕಾರ್ಖಾನೆಗಳನ್ನು ಆರಂಭಿಸಲಾಗಿದೆ. ಸಿಎಪಿಎಫ್, ರಾಜ್ಯ ಪೋಲಿಸ್ ಇತ್ಯಾದಿ ಸಂಸ್ಥೆಗಳ ಗುತ್ತಿಗೆಗಳನ್ನು ಸಂಯೋಜಿಸಿ ೬೬ ಒಪ್ಪಂದಗಳಾಗಿಸಿ ೬೫,೦೦೦ ಕೋಟಿ ರೂ.ಗಳ ಆರ್ಡರ್‌ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಹೊಸ ಕಂಪನಿಗಳಿಗೆ ೭,೧೦೦ ಕೋಟಿ ರೂ ಮುಂಗಡ ಹಣವನ್ನು ಪಾವತಿಸಲಾಗಿದೆ. ಸೇನೆಯ ಕಾರ್ಯಾಚರಣೆಗೆ ಬೇಕಾಗುವ ನೂತನ ಅವನಿ ಶಸ್ತ್ರಾಸ್ತ್ರ ವಾಹನಗಳ ಉತ್ಪಾದನೆಗೆ ದೊಡ್ಡ ಮೊತ್ತದ ಆರ್ಡರ್ ನೀಡಲಾಗುತ್ತದೆಯಂತೆ. ಸೇನೆ ಮತ್ತು ಪೋಲಿಸ್ ಇಲಾಖೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಕೂಡ ತಯಾರಿಸಲಾಗುವುದು. ಆತ್ಮನಿರ್ಭರ್ ಪ್ಯಾಕೇಜ್ ಅಂಗವಾಗಿ ಒಎಫ್‌ಬಿಯನ್ನು ವಿಸರ್ಜಿಸಿ ೭ ಪಿಎಸ್‌ಯುಗಳಾಗಿಸಲಾಗಿದೆ. ಅವುಗಳಿಗೆ ಸ್ವಾಯತ್ತತೆ ನೀಡಲಾಗುತ್ತಿದೆ. ರಕ್ಷಣಾ ಉತ್ಪಾದನೆಯಲ್ಲಿ ಉತ್ತರದಾಯಿತ್ವ, ದಕ್ಷತೆ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ರಕ್ಷಣಾ ವಲಯಕ್ಕೆ ಮೋದಿ ಹೆಚ್ಚಿನ ಆದ್ಯತೆ ಕೊಡ ಬಯಸುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.

 

 

೪. ಸಚಿವ ಸಂಪುಟ ಪುನಾರಚನೆ:
ಜುಲೈನಲ್ಲಿ ಮೋದಿ ಸರ್ಕಾರವು ಕೋವಿಡ್ ಅಲೆ, ಐಟಿ ನಿಯಮಗಳು ಹಾಗೂ ರೈತರ ಪ್ರತಿಭಟನೆ ಸೇರಿದಂತೆ ಹಲವು ಟೀಕೆಗಳನ್ನು ಎದುರಿಸುತ್ತಿತ್ತು. ಈ ವೇಳೆ ಸರ್ಕಾರದ ಸಚಿವ ಸಂಪುಟದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಈ ಸವಾಲುಗಳನ್ನು ಎದುರಿಸಲು ಮೋದಿ ಸರ್ಕಾರ ತನ್ನ ಸಂಪುಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿತು. ಡಾ. ಹರ್ಷವರ್ಧನ್, ರವಿಶಂಕರ್ ಪ್ರಸಾದ್, ರಮೇಶ್ ಪೋಖ್ರಿಯಾಲ್ ನಿಶಾಂಕ್, ಪ್ರಕಾಶ್ ಜಾವಡೇಕರ್ ಸೇರಿದಂತೆ ಹಲವು ಸಚಿವರನ್ನು ಕೈಬಿಟ್ಟಿತ್ತು. ಜುಲೈ ೭ ರಂದು ಸಂಪುಟ ಪುನಾರಚನೆ ನಡೆಯಿತು. ಜ್ಯೋತಿರಾದಿತ್ಯ ಸಿಂಧಿಯಾ, ಮನ್ಸುಖ್ ಮಾಂಡವೀಯಾ ಸೇರಿದಂತೆ ಹಲವಾರು ಪ್ರಮುಖರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಆ ಮೂಲಕ ಮೋದಿ ಸರ್ಕಾರ ಈ ವರ್ಷದಲ್ಲಿ ಮತ್ತೊಂದು ನಿರ್ಧಾರ ತೆಗೆದುಕೊಂಡು ಜನರ ಮನ್ನಣೆಗೆ ಪಾತ್ರವಾಗಿದೆ.

೫. ಗತಿ ಶಕ್ತಿ ಯೋಜನೆ:
ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದ್ದು ಕೊರೋನ. ಇದರಿಂದಾಗಿ ಬಿದ್ದ ಆರ್ಥಿಕತೆ ಮತ್ತೆ ಹಳಿಗೆ ಮರಳುತ್ತಿದೆ. ಇದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ತೆಗೆದುಕೊಂಡ ಪ್ರಮುಖ ನಿರ್ಧಾರವೇ ಗತಿ ಶಕ್ತಿ ಯೋಜನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ವರ್ಷ ಆಗಸ್ಟ್ ೧೫ ರಂದು ದೆಹಲಿಯ ಕೆಂಪು ಕೋಟೆಯ ಮೂಲಕ ಮಾಡಿದ ತಮ್ಮ ಭಾಷಣದಲ್ಲಿ “ಗತಿ ಶಕ್ತಿ ಯೋಜನೆ” ಯನ್ನು ಘೋಷಿಸಿದ್ದರು. ೧೦೦ ಲಕ್ಷ ಕೋಟಿಯ ಈ ಯೋಜನೆಗೆ ನಾಳೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯನ್ನು ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸುಧಾರಿಸಲು ಪ್ರಾರಂಭಿಸಲಾಗಿದೆ. ದೇಶದಲ್ಲಿ ೧೦೦ ಲಕ್ಷ ಕೋಟಿ ರೂಪಾಯಿಗಳ ಈ ಯೋಜನೆಯನ್ನು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬಳಸಲಾಗುತ್ತಿದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೆ ಕಾರಣವಾಗಲಿದೆ. ಈ ಯೋಜನೆಯಲ್ಲಿ ರೈಲ್ವೆ, ರಸ್ತೆಗಳು ಮತ್ತು ಹೆದ್ದಾರಿಗಳು, ಪೆಟ್ರೋಲಿಯಂ ಮತ್ತು ಅನಿಲ, ವಿದ್ಯುತ್, ದೂರಸಂಪರ್ಕ, ಹಡಗು, ವಾಯುಯಾನ ಮತ್ತು ಕೈಗಾರಿಕಾ ಪಾರ್ಕ್ ಇಲಾಖೆಗಳು ಸೇರಿದಂತೆ ಕೇಂದ್ರ ಸರ್ಕಾರದ ೧೬ ಇಲಾಖೆಗಳು ಒಳಗೊಳ್ಳಲಿದೆ. ಕೇಂದ್ರದ ಎಲ್ಲಾ ೧೬ ಇಲಾಖೆಗಳ ಉನ್ನತ ಅಧಿಕಾರಿಗಳ ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ ರಚಿಸಲಾಗುವುದು ಎಂದು ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಯುವಕರಲ್ಲಿ ಅತೀ ದೊಡ್ಡ ಸಮಸ್ಯೆಯಾಗಿರುವ ಉದ್ಯೋಗ ಸಮಸ್ಯೆಗೆ ಮೋದಿ ಸರ್ಕಾರ ಪರಿಹಾರ ಕಲ್ಪಿಸುವ ಮಹತ್ತರ ನಿರ್ಧಾರ ಇದಾಗಿದೆ.

೬. ಐಟಿ ನಿಯಮ ೨೦೨೧:
ಕೇಂದ್ರ ಸರ್ಕಾರ ಫೆಬ್ರವರಿ ೨೫ರಂದು ಹೊಸ ಐಟಿ ನಿಯಮವನ್ನು ರೂಪಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್ಗಳು ಹಾಗೂ ಡಿಜಿಟಲ್ ಪೋರ್ಟಲ್‌ಗಳ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ರೂಪಿಸಲು ಅದನ್ನು ಕಡ್ಡಾಯಗೊಳಿಸಿತು. ಈ ಹೊಸ ನಿಯಮ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಹೇಳುವ ಕೆಲವು ಡಿಜಿಟಲ್ ಪೋರ್ಟಲ್‌ಗಳು ಮತ್ತು ಕೇಂದ್ರದ ನಡುವಿನ ಬಿಕ್ಕಟ್ಟಿಕ್ಕೆ ಕಾರಣವಾಯಿತು. ಆದರೆ ಕೇಂದ್ರ ಸರ್ಕಾರವು ಹೊಸ ಕಾನೂನುಗಳ ಬಗ್ಗೆ ದೃಢವಾಗಿದೆ. ಅವುಗಳನ್ನು ಅನುಸರಿಸಲು ಒಟಿಟಿ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್ಗಳನ್ನು ಕೇಳುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top