fbpx
ಸಮಾಚಾರ

ಜಾಸ್ತಿ ಮೊಬೈಲ್ ಬಳಸಿದ್ರೆ ಚರ್ಮಕ್ಕಿದೆ ದೊಡ್ಡ ಮಟ್ಟಿನ ಹಾನಿ ಹುಷಾರ್

ಮೊಬೈಲ್ ಬಂದಾಗಿನಿಂದ  ಅದನ್ನು ಬಳಸುವ ಬಳಕೆದಾರರಂತೂ ಅದಕ್ಕೆ ಕಡಿಮೆಯೇ ಆಗಿಲ್ಲ. ದಿನೇ ದಿನೇ ಹೆಚ್ಚುತ್ತಲೇ ಇದ್ದಾರೆ. ಮೊಬೈಲ್ ಅತಿಯಾದ ಬಳಕೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಮೊಬೈಲ್ ಬಳಸುವ ಮೊಬೈಲ್ ಪ್ರೇಮಿಗಳಿಗೆ ಈಗ ಹೊಸ ಆಘಾತ ಕಾದಿದೆ. ನೀವು ಅತಿಯಾಗಿ ಮೊಬೈಲ್ ಬಳಸಿದರೆ ನಿಮ್ಮ ಕಣ್ಣಿಗೆ ಹಾನಿಯಾಗುವುದರ ಜೊತೆಗೆ ಚರ್ಮಕ್ಕೂ ಹಾನಿಯಾಗಲಿದೆ.

ಮೊಬೈಲ್ ಅತಿಯಾಗಿ ಬಳಸಿದರೆ ಮಾರಕ ಎನ್ನುವ ವಿಚಾರ ಗೊತ್ತಿದ್ದರೂ ಮತ್ತೆ ಮತ್ತೆ ಅದನ್ನು ಣಾವು ತುಸು ಹೆಚ್ಚೇ ಬಳಸುತ್ತೇವೆ ವಿನಃ ಕಡಿಮೆ ಮಾಡಲಾರೆವು. ಆದರೆ ಈಗ ಇದರಿಂದಾಗಿ ಚರ್ಮಕ್ಕೂ ಹಾನಿ ಇದೆ ಎಂಬ ಆತಂಕಕಾರಿ ಅಂಶ ಹೊರ ಬಿದ್ದಿದೆ. ಸೌಂದರ್ಯ ಶಾಸ್ತ್ರದ  ಕಾಸ್ಮೆಟಿಕ್ ಸರ್ಜನ್ ಡಾ. ಕರೀಶ್ಮಾ ಕಾಗೋಡು ಈ ಬಗ್ಗೆ ಮಾತನಾಡಿದ್ದು ಕಂಪ್ಯೂಟರ್, ಟಿ.ವಿ, ಲ್ಯಾಪ್‌ಟಾಪ್‌ಗಳಲ್ಲಿ ನೀಲಿ ಬಣ್ಣದ ಬೆಳಕು ಕಾಣಿಸಿಕೊಳ್ಳುತ್ತಿದ್ದು ಈ ನೀಲಿ ಬಣ್ಣದ ಬೆಳಕು ಮಾನವನ ದೇಹಕ್ಕೆ ತೀವ್ರವಾದ ಹಾನಿಯನ್ನುಂಟು ಮಾಡಲಿದೆ ಎಂದವರು ತಿಳಿಸಿದ್ದಾರೆ.

ಚರ್ಮರೋಗ ತಜ್ಞ ಡಾ. ಕಿರಣ್ ಲೋಹಿಯಾ ಅವರ ಪ್ರಕಾರ ನೀಲಿ ಬೆಳಕು ವರ್ಣ ದ್ರವ್ಯ. ಇದು ಫ್ಲೆಕ್ಲಿಂಗ್ ಟ್ಯಾನಿಂಗ್ ಮತ್ತು ಸುಕ್ಕು ಮುಖವನ್ನಾಗಿ ಮಾಡುತ್ತದೆ. ಇದರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದಂತೆ ಕಾಣಬಹುದು ಎನ್ನುತ್ತಾರೆ ತಜ್ಞರು. ಇನ್ನು ಈ ನೀಲಿ ಬೆಳಕು ಆಕ್ಸಿಡೇಟಿವ್ ಅನ್ನು ಉಂಟು ಮಾಡುತ್ತದೆ. ಚರ್ಮವು ಫ್ರೀ ರಾಡಿಕಲ್‌ಗಳಿಂದ ಪ್ರಚೋದಿಸಲ್ಪಟ್ಟಾಗ ಆರೋಗ್ಯಕರ ಚರ್ಮದ ಜೀವಕೋಶಗಳನ್ನು ನಾಶಪಡಿಸುವ ಅಸ್ಥಿರ ಆಮ್ಲಜನಕ ಉಂಟಾಗುತ್ತದೆ. ಹಾಗಾಗಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಎಂಬುದು ಈ ತಜ್ಞರ ಅಭಿಪ್ರಾಯ. ಅತಿಯಾದ ಬಳಕೆ ಎಲ್ಲಾ ವಿಚಾರಗಳಲ್ಲೂ ಒಳ್ಳೆಯದಲ್ಲ. ಅತಿಯಾದ ಬಳಕೆ ಮಾಡದೆ ಬೇಕಾದಷ್ಟೇ ಬಳಸಿ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳುವ ಅಗತ್ಯತೆ ಮಾನವನಿಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top