fbpx
ಸಮಾಚಾರ

ಗೋಲ್ಡನ್ ಗರ್ಲ್ ಪಿಟಿ ಉಷಾ ವಿರುದ್ಧ ದೂರು ದಾಖಲು; ಏಕೆ ಗೊತ್ತಾ?

ಭಾರತದ ಅಥ್ಲೀಟ್, ಚಿನ್ನದ ಪದಕ ವಿಜೇತೆ ಪಿಟಿ ಉಷಾ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಿ. ಟಿ ಉಷಾ ವಿರುದ್ಧ ಕೇರಳದ ಕೋಝೀಕ್ಕೋಡ್ ಪೊಲೀಸರು ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಫ್ ನೀಡಿದ ದೂರಿನ ಮೇರೆಗೆ ಉಷಾ ಸೇರಿದಂತೆ ಇತರ ಆರು ಮಂದಿ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ ಹೊಸ ಅಪಾಟ್ಮೆರ್ಂಟ್ ಹೊಂದುವ ನಿರೀಕ್ಷೆಯಲ್ಲಿ ಜೆಮ್ಮಾ ಜೋಸೆಫ್ ಅವರು 46 ಲಕ್ಷ ರೂ.ಗಳನ್ನು ಪಿಟಿ ಉಷಾ ಅವರ ಖಾತರಿಯಂತೆ , ಜೆಮ್ಮಾ ಜೋಸೆಫ್ ಕೇರಳದ ಕೋಝಿಕ್ಕೋಡ್‍ನಲ್ಲಿ 1,012 ಚದರ ಅಡಿ ಫ್ಲಾಟ್ ಅನ್ನು ಬಿಲ್ಡರ್ ಒಬ್ಬರಿಂದ ಖರೀದಿಸಿದ್ದಾರೆ. ಆದರೆ ನಿಗದಿತ ಸಮಯದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವುದಾಗಿ ಉಷಾ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಜೋಸೆಫ್ ದೂರಿನಲ್ಲಿ ವಿವರಿಸಿದ್ದಾರೆ.

ಈ ಕ್ರಮವಾಗಿ ಜೋಸೆಫ್ ಕಂತುಗಳ ರೂಪದಲ್ಲಿ ರೂ. 46 ಲಕ್ಷ ರೂ ಪಾವತಿಸಿದ್ದಾರೆ. ಹಣ ಪಾವತಿಸಿದ್ದರೂ ಬಿಲ್ಡರ್ ಜೋಸೆಫ್ ಗೆ ಫ್ಲಾಟ್ ಬರೆದುಕೊಟ್ಟಿರಲಿಲ್ಲ. ಇದರೊಂದಿಗೆ ಜೋಸೆಫ್ ಕೋಝಿಕ್ಕೋಡ್ ಪೊಲೀಸರ ಮೊರೆ ಹೋಗಿದ್ದಾರೆ. ಪಿ.ಟಿ. ಉಷಾ ನೀಡಿದ ಖಾತರಿಯಂತೆ ಬಿಲ್ಡರ್ ಗೆ ಹಣ ಪಾವತಿಸಿದ್ದರೂ ಬಿಲ್ಡರ್ ಫ್ಲಾಟ್ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಜೋಸೆಫ್ ದೂರಿನ ಸಂಬಂಧ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎವಿ ಜಾರ್ಜ್ ಅವರು ತನಿಖೆಗೆ ಆದೇಶಿಸಿದ್ದು, ಪ್ರಕರಣವನ್ನು ವೆಲ್ಲೂರು ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top