ರಾಜಕೀಯ ನಾಯಕರು ಸದಾ ಒಂದಿಲ್ಲಒಂದು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟು ಟ್ರೋಲ್ ಆಗುವುದು ಸರ್ವೇ ಸಾಮಾನ್ಯ. ಪ್ರಧಾನಿ ಮೋದಿಯೂ ಇದಕ್ಕೆ ಹೊರತಾಗಿಲ್ಲ. ಇದೀಗ ಮತ್ತೊಮ್ಮೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಸುಳ್ಳು ಹೇಳುವ ಭರದಲ್ಲಿ ಶಾಸಕ ಸಿಟಿ ರವಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸ್ವಾತಂತ್ರ್ಯತರಲು ಜೈಲಿಗೆ ಹೋಗಿದ್ರು ಅಂತ ಬಾಂಬ್ ಸಿಡಿಸಿ ಇದೀಗ ನೆಟ್ಟಿಗರ ಆಹಾರವಾಗುತ್ತಿದ್ದಾರೆ. ಸದಾ ಒಂದಿಲ್ಲಒಂದು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಈಶ್ವರಪ್ಪ ಅನೇಕ ವಿಚಾರಗಳಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದವರು. ಡಿ.ಕೆ ಶಿವಕುಮಾರ್ ಸಾಚಾ ಅಲ್ಲ, ಉದ್ದವ್ ಠಾಕ್ರೆ ದೇವರಲ್ಲ ಎಂಬ ಅವರ ಇತ್ತೀಚಿನ ಪ್ರೆಸ್ ಮೀಟ್ ಕೂಡ ವೈರಲ್ ಆಗಿತ್ತು. ಈಗ ಮತ್ತೊಂದು ಹೇಳಿಕೆಯೊಂದಿಗೆ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ.
ತುರ್ತು ಪರಿಸ್ಥಿತಿ 1975 ರಲ್ಲಿ ನಡೆದಿದ್ದು ಇಂದಿರಾಗಾಂಧಿಯವರು ನ್ಯಾಷನಲ್ ಎಮರ್ಜೆನ್ಸಿ ಘೋಷಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಈ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಬಂದು ಇವತ್ತಿಗೆ 46 ವರ್ಷಗಳಾಗಿದೆ. ಸದ್ಯ ಸಿ.ಟಿ ರವಿಗೆ 54 ವರ್ಷ ವಯಸ್ಸಾಗಿದ್ದು ಜುಲೈ 18 1967ರಲ್ಲಿ ಅವರು ಜನಿಸಿದ್ದಾರೆ. ಹಾಗೆ ನೋಡಲು ಹೋದರೆ ತುರ್ತು ಪರಿಸ್ಥಿತಿ ಹೊತ್ತಲ್ಲಿ ಸಿ.ಟಿ ರವಿ ಕೇವಲ 8 ವರ್ಷದ ಬಾಲಕ. ಈ 8 ವರ್ಷದ ಬಾಲಕ ಜೈಲು ಸೇರಿದ್ದಾದ್ರೂ ಹೇಗೆ? ಹೋರಾಟಕ್ಕೆ ಹೋಗಿದ್ದಾದ್ರೂ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.
ರಾಜಕೀಯ ನಾಯಕರ ಸುಳ್ಳುಗಳ ಕಂತೆಗಳಿಗೆ ಇದೂ ಸೇರಿಕೊಳ್ಳಬಹುದೇನೋ. ಈಶ್ವರಪ್ಪರಂಥಹ ಹಿರಿಯ ರಾಜಕೀಯ ಮತ್ಸದ್ದಿ ಅದರಲ್ಲೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿರುವ ಘನವೆತ್ತ ವ್ಯಕ್ತಿ ಆ ಸ್ಥಾನಕ್ಕಾದರೂ ಕಿಂಚಿತ್ ಗೌರವ ಕೊಡಬೇಕಲ್ಲಾ. ನಿಮಗೇನನಿಸುತ್ತೆ ಬಾಲಕ ಸಿ.ಟಿ ರವಿ ಜೈಲಿಗೆ ಹೋಗಿದ್ದರಾ? ಕಮೆಂಟ್ ಮಾಡಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
