fbpx
ಸಮಾಚಾರ

ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿದವರ ಬಗ್ಗೆ ನಟ ವಿನೋದ್ ರಾಜ್ ಹೇಳಿದ್ದೇನು ಗೊತ್ತಾ?

ಬೆಳಗಾವಿಯಲ್ಲಿ MES ಪುಂಡರ ಪುಂಡಾಟಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನಟ ವಿನೋದ್ ರಾಜ್ ಆಕ್ರೋಶ ಹೊರಹಾಕಿದ್ದಾರೆ. ಕನ್ನಡ ಧ್ವಜ ಸುಟ್ಟು ಸಂಗೊಳ್ಳಿರಾಯಣ್ಣ ರಾಯಣ್ಣ ಅವರ ಪ್ರತಿಮೆ ಹೊಡೆದುಹಾಕಿದ್ದ ಪೋಲಿಗಳ ವಿರುದ್ಧ ಕಿಡಿಕಾರಿರುವ ವಿನೋದ್ ರಾಜ್ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

“ಸಂಗೊಳ್ಳಿ ರಾಯಣ್ಣ ಓರ್ವ ಕನ್ನಡಿಗ ಹಾಗೂ ಸ್ವಾತಂತ್ರ್ಯ ಹೊರಾಟಗಾರರು ಅವರ ಪ್ರತಿಮೆಯನ್ನು ಧ್ವಂಸ ಮಾಡಿರುವುದು ದೇಶದ್ರೋಹ ಮಾಡಿದಂತೆ, ಅಂತಹವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಕ್ರಮಕೈಗೊಳ್ಳಿ ಎಂದು ವಿನೋದ್​ ರಾಜ್​ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಹೋರಾಟಗಾರರಿಗೆ ಬೆಂಬಲವನ್ನು ಸೂಚಿಸಿದರು. ಕನ್ನಡಿಗರು ದಂಗೆಗೆ ಮುಂದಾದರೆ ಏನಾಗುತ್ತದೆ ಎಂದು ಹಿರಿಯರು ಗೋಕಾಕ್ ಚಳುವಳಿಯಿಂದ ತೋರಿಸಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುವಂತೆ ಕೆಲವು ಕೆಲಸ ಆಗುತ್ತಿದೆ. ಅದನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಎಂಇಎಸ್ ಪುಂಡಾಟಿಕೆಯಿಂದ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಜನರನ್ನು ಬಲಿಪಶು ಮಾಡಿ ಹೋರಾಟ ಮಾಡುವ ಸಂಕಷ್ಟಕ್ಕೆ ಸರ್ಕಾರ ದೂಡುತ್ತಿದೆ. ಪ್ರತಿಮೆ ಧ್ವಂಸ, ಸರ್ಕಾರಿ ವಾಹನಗಳಿಗೆ ದಾಳಿ ಮಾಡುವ ಮಟ್ಟಕ್ಕೆ ಬಿಟ್ಟುಕೊಂಡಿರುವುದು ತಪ್ಪು. ಈ ಘಟನೆ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಿರುವುದು ತಿಳಿಯುತ್ತಿದೆ ಎಂದು ಕಿಡಿಕಾರಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top