fbpx
ಸಮಾಚಾರ

೨೦೨೨ಕ್ಕೆ ವಾಟ್ಸಪ್ ತನ್ನ ಬಳಕೆದಾರರಿಗೆ ಕೊಡುತ್ತಿದೆ ಭರ್ಜರಿ ಗಿಫ್ಟ್! ಏನೇನಿರಲಿದೆ ಅಂತ ಈ ಸ್ಟೋರಿ ನೋಡಿ.

ಮೆಟಾ ಮಾಲಿಕತ್ವದ ಜಗತ್ತಿನ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್ ಆಗಾಗ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ೨೦೨೨ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹೊಸ ವರ್ಷಕ್ಕೆ ಮತ್ತೊಮ್ಮೆ ಅಪ್ಡೇಟ್ ಮಾಡಿರುವ ವಾಟ್ಸಪ್ ಸಂಸ್ಥೆ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ನೀಡಲಿದೆ. ಹಾಗಾದರೆ ಅಪ್ಡೇಟ್ ಆಗಿರುವ ಆ ಹೊಸ ಫೀಚರ್‌ಗಳೇನು? ಅವುಗಳನ್ನು ಬಳಕೆದಾರ ಹೇಗೆ ಬಳಸಬಹುದು? ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.

ಕಮ್ಯುನಿಟಿ ಫೀಚರ್ :
ಈ ಫೀಚರ್ ಅನ್ವಯ ಈಗಾಗಲೇ ಆಸ್ಥಿತ್ವದಲ್ಲಿರುವ ಗುಂಪಿನೊಳಗೆ ಇನ್ನೊಂದು ಉಪಗುಂಪನ್ನು ಸೇರಿಸುವ ಆಯ್ಕೆ ನೀಡಲಾಗಿದ್ದು ಅಲ್ಲಿ ಒಂದಿಷ್ಟು ಸೀಮಿತ ಸದಸ್ಯರು ಮಾತ್ರ ಪ್ರವೇಶ ಪಡೆದುಕೊಳ್ಳುತ್ತಾರೆ. ಅಲ್ಲಿ ಖಾಸಗಿಯಾಗಿ ಒಂದಿಷ್ಟು ಜನ ಮಾತ್ರ ಚಾಟಿಂಗ್ ನಡೆಸಬಹುದಾಗಿದೆ. ಈ ಉಪಗುಂಪಿನ ಚಾಟ್‌ಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.

ಲಾಸ್ಟ್ ಸೀನ್ ಹಾಗೂ ಪ್ರೊಫೈಲ್ ಫೋಟೋ ಪ್ರೈವಸಿ :
ಈ ಹೊಸ ಆವೃತ್ತಿಯ ವಾಟ್ಸಪ್‌ನಲ್ಲಿ ಲಾಸ್ಟ್ ಸೀನ್ ಮತ್ತು ಪ್ರೈವಸಿಯನ್ನು ಮರೆಮಾಚುವ ಆಯ್ಕೆ ಇದ್ದು ಕೇವಲ ಸೀಮಿತ ಸಂಪರ್ಕಗಳಿಗೆ ಮಾತ್ರ ಇದನ್ನು ತೆರೆದಿಡಬಹುದಾಗಿದೆ. ಇದರಿಂದಾಗಿ ನಮ್ಮ ಆತ್ಮೀಯರಿಗೆ ಮಾತ್ರ ನಮ್ಮ ಲಾಸ್ಟ್ ಸೀನ್ ಮತ್ತು ಪ್ರೊಫೈಲ್ ಫೋಟೋ ಕಾಣಸಿಗುತ್ತದೆ.

ಸಂದೇಶ ಅಳಿಸಲು ಸಮಯದ ಮಿತಿ :
ಈ ಹಿಂದಿನ ಆವೃತ್ತಿಯಲ್ಲಿ ಸಂದೇಶಗಳನ್ನು ಸಂಪೂರ್ಣವಾಗಿ ಅಳಿಸಲು ೧ ಗಂಟೆ ೮ ನಿಮಿಷಗಳ ಸಮಯದ ಮಿತಿ ಅಳವಡಿಸಲಾಗಿತ್ತು. ಈ ಸಮಯದ ಮಿತಿಯನ್ನು ಹೊಸ ಆವೃತ್ತಿಯಲ್ಲಿ ೭ ದಿನ ೮ ನಿಮಿಷಗಳವರೆಗೆ ಹೆಚ್ಚಿಸಲು ಕಂಪೆನಿ ಯೋಚಿಸಿದೆ.

ಮೆಸೇಜ್ ರಿಯಾಕ್ಷನ್ :
ಇನ್ಸ್ಟಾಗ್ರಾಮ್ಹಾ ಹಾಗು ಫೇಸ್‌ಬುಕ್ ಬಳಕೆದಾರರಿಗೆ ಇಮೇಜಿಯ ಪ್ರತಿಕ್ರಿಯೆ ನೀಡುವ ಆಯ್ಕೆ ಇದೆ. ಇನ್ನು ಮುಂದೆ ಈ ಫೀಚರ್ ವಾಟ್ಸಾಪ್‌ನಲ್ಲೂ ಕಾಣಿಸಿಕೊಳ್ಳಲಿದೆ.

ಫೋಟೋ ಎಡಿಟಿಂಗ್ ಫೀಚರ್ :
ಈಗಾಗಲೇ ಇನ್ಸ್ಟಾಗ್ರಾಮ್ ಖಾತೆಗಳಿಗೆ ದೊರೆಯುತ್ತಿರುವಂತೆ ವಾಟ್ಸಪ್‌ನಲ್ಲಿಯೂ ಫೋಟೋ ಎಡಿಟಿಂಗ್ ಆಯ್ಕೆಯನ್ನು ಇಡುವ ನಿಟ್ಟಿನಲ್ಲಿ ಕಂಪೆನಿ ಯೋಚಿಸುತ್ತಿದೆ. ಈ ಮೂಲಕ ಹೊಸ ಆವೃತ್ತಿಯ ಬಳಕೆದಾರರಿಗೆ ಈ ಫೀಚರ್ ಕೂಡ ದೊರೆಯಲಿದೆ. ಇನ್ನು ಮುಂದೆ ಫೋಟೋಗಳನ್ನು ಅಂದವಾಗಿ ಸಂಕಲನ ಮಾಡಿ ಸ್ಟೇಟಸ್ ಹಾಕಬಹುದು.

ಈ ಮೂಲಕ ವಾಟ್ಸಪ್ ಬಳಕೆದಾರರನ್ನು ಮತ್ತಷ್ಟು ಸೆಳೆದು ಇನ್ನಷ್ಟು ಸೇವೆ ಕೊಡಲು ಬಯಸುತ್ತಿದೆ. ೨೦೨೨ರಲ್ಲಿ ನಿಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ಅಪ್‌ಡೇಟ್ ಮಾಡಿದ ಬಳಿಕ ಈ ಫೀಚರ್‌ಗಳನ್ನು ಪಡೆಯಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top