ಹಾವು ಕಚ್ಚಿ ಬಿಟ್ಟರೆ ಅಂತೂ ಅರ್ಧ ಜನ ಭಯಕ್ಕೆ ಜೀವ ಬಿಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ಮಾರುದ್ದದ ಹಾವನ್ನು ಕೈಯಲ್ಲಿ ಹಿಡಿದ ಯುವಕನೊಬ್ಬ ರಸ್ತೆಯ ಮೇಲೆ ಸ್ಕಿಪ್ಪಿಂಗ್ ಮಾಡುತ್ತಿದ್ದಾನೆ. ಇದನ್ನು ಇನ್ನೊಬ್ಬರು ವಿಡಿಯೋ ಮಾಡಿದ್ದಾರೆ. ಸ್ಕಿಪ್ಪಿಂಗ್ ಮಾಡಿದ ಬಳಿಕ ಯುವಕ ಹಾವನ್ನು ಕಸದ ರಾಶಿಯಲ್ಲಿ ಬಿಸಾಡಿದ್ದಾನೆ. ಈತ ಈ ವಿಷ ಜಂತುವಿನ ಜತೆಗೆ ಆಡಿದ ಆಟದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ.
This is horrible!!! #snake pic.twitter.com/Idcd0611kf
— Diwakar Sharma (@DiwakarSharmaa) December 16, 2021
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ಯುವಕನ ನಡೆಯನ್ನು ಟೀಕಿಸಿದ್ದಾರೆ. ಈ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಆದರೆ ಹಾವನ್ನು ಯುವಕರೇ ಸಾಯಿಸಿ, ಸ್ಕಿಪ್ಪಿಂಗ್ ಮಾಡಿದ್ದಾರಾ ಅಥವಾ ಮೊದಲೇ ಅತ್ತು ಹೂಗಿತ್ತಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಯುವಕನ ಕೃತ್ಯದ ವಿರುದ್ಧ ಪ್ರಾಣಿ ದಯಾ ಸಂಘದವರು ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
