fbpx
ಸಮಾಚಾರ

‘ಲವ್ ಯೂ ರಚ್ಚು ತಂಡದ ಜತೆ ನಾನು ಕಾಣಿಸಿಕೊಳ್ಳಲ್ಲ, ನಿರ್ಮಾಪಕರಿಂದ ಅವಮಾನ ಆಗಿದೆ’ ಪ್ರೊಡ್ಯುಸರ್ ವಿರುದ್ಧವೇ ಅಜೇಯ್ ರಾವ್ ಅಸಮಾಧಾನ

ಅಜಯ್​ ರಾವ್ ಮತ್ತು ರಚಿತಾ ರಾಮ್​ ನಟನೆಯಲ್ಲಿ ಮೂಡಿಬಂದಿರುವ ‘ಲವ್ ಯೂ ರಚ್ಚು’ ಸಿನಿಮಾ ಇದೆ ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿದೆ. ಇದೆ ಅಂಗವಾಗಿ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ಆದರೆ, ನಾಯಕ ಅಜಯ್​ ರಾವ್​ ಮಾತ್ರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

ಚಿತ್ರದ ಕುರಿತಾದ ಸುದ್ದಿಗೋಷ್ಠಿಗೆ ನಾಯಕನೇ ಬರಲಿಲ್ಲ ಎಂದರೆ ಹೇಗೆ? ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಚಿತ್ರತಂಡದ ಜತೆಗೆ ಅಜಯ್ ರಾವ್ ಅವರಿಗೆ ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇಷ್ಟು ದಿನ ನಿರ್ಮಾಪಕ ಹಾಗೂ ನಟನ ಮುನಿಸಿನ ಹಿಂದೆ ನೂರೆಂಟು ಕಥೆಗಳು ಹುಟ್ಟಿಕೊಂಡಿತ್ತು.ಈ ಬಗ್ಗೆ ಅಜಯ್​ ರಾವ್​ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ.

ಮಾಧ್ಯಮದವರ ಬಳಿ ಈ ಬಗ್ಗೆ ಮಾತನಾಡಿದ ಅಜೋವ್ ರಾವ್ ಅವ್ರು ‘ಖಂಡಿತವಾಗಿಯೂ ನಿರ್ಮಾಪಕರ ನಡುವೆ ಮನಸ್ತಾಪ ಇದೆ. ಅವರಿಂದ ನನಗೆ ಅವಮಾನ ಆಗಿದೆ. ಅದೇನು ಎಂದು ನಾನು ಹೇಳೋಕೆ ಇಷ್ಟಪಡಲ್ಲ. ನಾನು ಚಿತ್ರತಂಡದ ಜೊತೆ ಕಾಣಿಸಿಕೊಳ್ಳಲ್ಲ. ವೈಯಕ್ತಿಕವಾಗಿ ಮಾತ್ರ ಪ್ರಚಾರ ಮಾಡ್ತಿನಿ’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top