fbpx
ಸಮಾಚಾರ

ಚಾಕೋಲೆಟ್​ನಲ್ಲಿ ಅರಳಿದ ಪುನೀತ್: ರಾಜಕುಮಾರನ ಪುತ್ಥಳಿ ಕಂಡು ಫ್ಯಾನ್ಸ್​ ಭಾವುಕ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ 50 ದಿನಗಳಿಗಿಂತ ಜಾಸ್ತಿ ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ. . ಪ್ರತಿದಿನ ಪ್ರತಿಕ್ಷಣ ಅಪ್ಪು ಅಪ್ಪು ಅಂತ ಕನವರಿಸುತ್ತಿದ್ದಾರೆ . ಶುಗರ್ ಸ್ಕಲ್ಪ್ಟ್ ಪ್ರೀತಿಯ ಅಪ್ಪುಗೆ ಸಿಹಿಯಾದ ಚಾಕಲೇಟ್​ನಲ್ಲಿ ನೆನಪಿನ ನಮನ ಸಲ್ಲಿಸಿದ್ದಾರೆ.

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿ ಕೇಕ್​ ಶೋ ನಡೆಯುತ್ತಿದೆ. ನಗರದ ಸೆಂಟ್​ ಜೋಸೆಫ್​ ಶಾಲಾ ಆವರಣದಲ್ಲಿ ಕೇಕ್​ ಶೋ ಆಯೋಜನೆ ಮಾಡಲಾಗಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿ ಕೇಕ್​ ಶೋ ನಡೆಯುತ್ತಿದೆ. ನಗರದ ಸೆಂಟ್​ ಜೋಸೆಫ್​ ಶಾಲಾ ಆವರಣದಲ್ಲಿ ಕೇಕ್​ ಶೋ ಆಯೋಜನೆ ಮಾಡಲಾಗಿದೆ. ಈ ಶೋಗೆ ಪುನೀತ್​ ರಾಜ್​ಕುಮಾರ್​ ಎಂಟ್ರಿ ಕೊಟ್ಟಿದ್ದಾರೆ.

ಕಸ್ತೂರಿ ನಿವಾಸ ಕನ್ನಡಿಗರ ಮನೆಮಾತಾಗಿದೆ. ಜೊತೆಗೆ ರಾಜಕುಮಾರ ಸಿನಿಮಾದಲ್ಲಿ ಅಪ್ಪು ಹೆಗಲ ಮೇಲೆ ಪಾರಿವಾಳ ಕೂತಿರುವ ಚಿತ್ರ ಸಖತ್​ ಟ್ರೆಂಡ್​ ಆಗಿತ್ತು. ಹೀಗಾಗಿ ಅದರಂತೆಯೇ ಅಪ್ಪು ಪ್ರತಿಮೆ ಅನಾವರಣಗೊಂಡಿದೆ. ಎಂದೆಂದಿಗೂ ನೀವು ನಮ್ಮ ಹೃದಯದಲ್ಲಿ ಜೀವಂತ ಎಂದು ಈ ಪ್ರತಿಮೆ ಕೆಳಗಡೆ ಬರೆಯಲಾಗಿದೆ. ಕೇಕ್​ ಶೋಗೆ ಬಂದ ಪ್ರತಿಯೊಬ್ಬರು ಅಪ್ಪು ಕೇಕ್​ ಪ್ರತಿಮೆ ಜೊತೆ ಫೋಟೋ ತೆಗಿಸಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top