ಸೋಮವಾರ ಸಂಜೆ ಆಕಾಶದಲ್ಲಿ ಸಾಲಾಗಿ ಬಲ್ಪ್ ಜೋಡಿಸಿದ ರೀತಿಯಲ್ಲಿ ಉಪಗ್ರಹಗಳು ಹಾದುಹೋಗಿವೆ ಜನ ಕುತೂಹಲದಿಂದ ವೀಕ್ಷಿಸಿದ್ದಾರೆ ಕೆಲವರು ತಮ್ಮ ಮೊಬೈಲ್ ಗಳಲ್ಲಿ ದೃಶ್ಯ ಸೆರೆಹಿಡಿದು ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಫಳಫಳ ಹೊಳೆಯುವ ಬೆಳಕಿನ ಸರ ಇದು ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಉಪಗ್ರಹಗಳ ಸರಮಾಲೆಯಾಗಿದೆ. ಸ್ಟಾರ್ ಲಿಂಕ್ ಯೋಜನೆಯಡಿ 1804 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ಅವುಗಳಲ್ಲಿ 1732 ಕಕ್ಷೆಗಳಲ್ಲಿ ಭೂಮಿಯನ್ನು ಸುತ್ತುತ್ತಿವೆ. ಇದು ಸ್ಟಾರ್ಲಿಂಕ್ ಕಂಪನಿಯ 34ನೇ ಉಡಾವಣೆಯಾಗಿದ್ದು, ಭೂಮಿಯ ಕೆಳಹಂತದ ಕಕ್ಷೆಗೆ 2,000 ಉಪಗ್ರಹಗಳನ್ನು ಸೇರಿಸುವ ಗುರಿಯನ್ನು ಸ್ಟಾರ್ಲಿಂಕ್ ಇಟ್ಟುಕೊಂಡಿದೆ.
ಭೂಮಿಯಿಂದ ಸುಮಾರು 290 ಕಿಲೋಮಿಟರ್ ಎತ್ತರದ ಕಕ್ಷೆಯಲ್ಲಿ ಇವು ಸಂಚರಿಸುತ್ತವೆ. ಬಳಿಕ ಸುಮಾರು 340ರಿಂದ 550 ಕಿಲೋಮೀಟರ್ ಎತ್ತರದ ಕಕ್ಷೆಗೆ ಸಾಗಲಿವೆ. ಅದಕ್ಕೆ ಹಲವು ತಿಂಗಳು ಬೇಕಾಗಬಹುದು. ಹೀಗೆ ಹೋಗುವಾಗ ಬೆಳಕು ಬೀರುತ್ತ ನಿಶ್ಶಬ್ದವಾಗಿ ಸಾಗಿದ ಉಪಗ್ರಹಗಳ ದೃಶ್ಯಗಳು ನೋಡುಗರನ್ನು ಅಚ್ಚರಿಗೊಳಿಸದೆ. ಎರಡು ವಾರದ ಹಿಂದೆ ಪಂಜಾಬ್ನ ಕೆಲ ಪ್ರದೇಶಗಳಲ್ಲಿ ಇದೇ ರೀತಿ ಆಕಾಶದಲ್ಲಿ ದೀಪಗಳ ಸಾಲು ಪತ್ತೆಯಾಗಿದೆ. ಪಂಜಾಬ್, ಹಿಮಾಚಲ ಪ್ರದೇಶ ಭಾಗದಲ್ಲಿ ದೀಪಗಳ ಸಾಲು ಅಲ್ಲಿಯೂ ಕೂಡ ಕಾಣಿಸಿಕೊಂಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
