fbpx
ಸಮಾಚಾರ

ಬಾಕ್ಸ್ ಆಫೀಸ್ ನಲ್ಲಿ ಕಿಚ್ಚ ಸುದೀಪ್ V/S ಪವನ್ ಕಲ್ಯಾಣ್: ಭೀಮ್ಲಾ ನಾಯಕ್ ವಿರುದ್ಧ ವಿಕ್ರಾಂತ್ ರೋಣ ಗೆಲ್ತಾನಾ?

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಮತ್ತೆ ಪೈಪೋಟಿಗೆ ರಂಗೇರುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಲಾಕ್ ಡೌನ್ ಕಾರಣಕ್ಕಾಗಿ ಬಿಡುಗಡೆಗೆ ಸಿದ್ಧವಿದ್ದ ಚಿತ್ರಗಳೆಲ್ಲಾ ಈಗ ಒಮ್ಮೆಲೇ ರಿಲೀಸ್ ಗೆ ಮುಗಿ ಬೀಳುತ್ತಿವೆ,. ಅಂತೆಯೇ ಕನ್ನಡದ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಕೂಡ ಫೆಬ್ರವರಿ 24ರಂದು ಬಿಡುಗಡೆಯಾಗುವುದಾಗಿ ಘೋಷಿಸಿಕೊಂಡಿತ್ತು. ಇದೀಗ ಅದೇ ದಿನಾಂಕದಂದು ಮತ್ತೊಂದು ದೊಡ್ಡ ಸಿನಿಮಾ ತೆರಿಗೆ ಬರುವುದಾಗಿ ಘೋಷಿಸಿದೆ.

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಭೀಮ್ಲಾ ನಾಯಕ್ ಸಿನಿಮಾ ಫೆಬ್ರವರಿ 25ರಂದು ತೆರೆಗೆ ಬರುವುದಾಗಿ ಅನೌನ್ಸ್ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿ 12 ರಂದು ‘ಭೀಮ್ಲಾ ನಾಯಕ್’ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದ್ರೆ ಟಾಲಿವುಡ್​ನ ಎರಡು ಬಿಗ್​ ಬಜೆಟ್​ ಸಿನಿಮಾಗಳಾದ ‘RRR’ ಜನವರಿ 7ಕ್ಕೆ ಮತ್ತು ಪ್ರಭಾಸ್​ ನಟನೆಯ ‘ರಾಧ್ಯೆ ಶ್ಯಾಮ್’​ ಚಿತ್ರ 14ರಂದು ರಿಲೀಸ್​ ಆಗುತ್ತಿರುವ ಕಾರಣ ‘ಭೀಮ್ಲಾ ನಾಯಕ್’ ಚಿತ್ರದ ನಿರ್ಮಾಪಕರು ಚಿತ್ರದ ರಿಲೀಸ್​ ದಿನಾಂಕ ಮೂಂದೂಡಿದ್ದಾರೆ.

ಭೀಮ್ಲಾ ನಾಯಕ್ ಚಿತ್ರತಂಡ ಫೆಬ್ರವರಿ 25 ರಂದು ತೆರೆಗೆ ಬರುವುದಾಗಿ ಘೋಷಿಸಿದ್ದು ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಸುದ್ದಿಯಾಗುತ್ತಿದೆ. ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಸಿನಿಮಾ ‘ವಿಕ್ರಾಂತ್​ ರೋಣ’ ಚಿತ್ರ ಫೆಬ್ರವರಿ 24 ರಂದು ರಿಲೀಸ್​ ಆಗುತ್ತಿದ್ದು, ಒಂದು ದಿನ ಅಂತರದಲ್ಲಿ ಬಿಗ್ ಪವನ್​ ಕಲ್ಯಾಣ್​ ಹಾಗೂ ಸುದೀಪ್​ ಸಿನಿಮಾ ರಿಲೀಸ್​ ಆಗುತ್ತಿದೆ.

ವಿಕ್ರಾಂತ್ ರೋಣಾ ಸಿನಿಮಾ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ಒಳ್ಳೆಯ ನಿರೀಕ್ಷೆ ಮೂಡಿದೆ. ಅತ್ತ ಭೀಮ್ಲಾ ನಾಯಕ್ ಚಿತ್ರ ಮಲೆಯಾಳಂನ ಅಯ್ಯಪ್ಪನುಮ್ ಕೊಶಿಯಮ್ ಚಿತ್ರದ ರೀಮೇಕ್ ಆಗಿದ್ದು ಅದಕ್ಕೂ ತೆಲುಗು ರಾಜ್ಯಗಳಲ್ಲಿ ಒಳ್ಳೆಯ ಬೇಡಿಕೆಯಿದೆ. ಹೀಗೆ ಎರಡು ಚಿತ್ರಗಳೂ ದೊಡ್ಡ ಚಿತ್ರಗಳಲಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಯಾವ ಚಿತ್ರ ಗೆಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top