fbpx
ಸಮಾಚಾರ

ಸಂತಾಕ್ಲಾಸ್ ಬಳಿ ಮಗನಿಗಾಗಿ ಮೇಘನಾ ಕೇಳಿದ ಗಿಫ್ಟ್ ಏನು ಗೊತ್ತಾ?

ಕನ್ನಡ ಚಿತ್ರರಂಗದ ಮುದ್ದಾದ ಜೋಡಿಗಳಲ್ಲಿ ಮೇಘನಾ- ಚಿರಂಜೀವಿ ಸರ್ಜಾ ಕೂಡ ಒಂದಾಗಿತ್ತು. ಇಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಇಬ್ಬರೂ ಒಟ್ಟಾಗಿ ಬಾಳಿ ಬದುಕಿ ಜೀವನ ನಡೆಸಬೇಕಾದ ದಂಪತಿಗೆ ಮೇಲೆ ಅದ್ಯಾವ ಕೆಟ್ಟ ಕಣ್ಣು ಬಿತ್ತೋ ಅರ್ಧದಲ್ಲೇ ಮೇಘನಾಳನ್ನು ಒಂಟಿ ಮಾಡಿ ಚಿರು ಇಹಲೋಕ ಯಾತ್ರೆ ಮಾಡಿದರು..

ಈ ಮದ್ಯೆ ಚಿರು ನಿಧನದ ಮೂರ್ನಾಲ್ಕು ತಿಂಗಳ ನಂತ್ರ ಚಿರು ಮತ್ತು ಮೇಘನಾ ದಾಂಪತ್ಯದ ಸಂಕೇತವಾಗಿ ಒಂದು ಗಂಡು ಮಗು ಜನಿಸಿತು. ಪತಿಯ ಅಕಾಲಿಕ ಮರಣದ ನೋವನ್ನ ಪುಟ್ಟ ಕಂದಮ್ಮನಲ್ಲಿ ಮರೆಯುವ ಪ್ರಯತ್ನ ಮಾಡುತ್ತ ಮೇಘನಾ ಸದ್ಯ ಆ ಮಗುವಿನ ಹಾರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಮೇಘನಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಮುದ್ದು ಮಗ ರಾಯನ್ ಕುರಿತಾದ ಅನೇಕ ಫೋಟೋ ವಿಡಿಯೊಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಮೇಘನಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಶ್ನಾವಳಿಯಲ್ಲಿ ಹಮ್ಮಿಕೊಂಡಿದ್ದರು. ಅಂದರೆ ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವುದು. ಹೀಗೆ ಮೇಘನಾಗೆ ಹಲವು ಪ್ರಶ್ನೆಗಳು ಎದುರಾಗಿವೆ. ಹಾಗೆ ಮಗನಿಗಾಗಿ ಸಂತಾ ಕ್ಲಾಸ್ ಬಳಿ ಏನು ಗಿಫ್ಟ್ ಕೇಳುತ್ತೀರಿ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.

 

 

ಈ ಪ್ರಶ್ನೆಗೆ ಮೇಘನಾ ಒಂದು ಫೋಟೊ ಹಂಚಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಈ ಫೋಟೊದಲ್ಲಿ ಒಂದು ಕಡೆ ಚಿರಂಜೀವಿ ಸರ್ಜಾ ಮತ್ತೊಂದು ಕಡೆ ರಾಯನ್‌ ರಾಜ್‌ ಇದ್ದು ಇಬ್ಬರೂ ಥೇಟ್ ಒಂದೇ ರೀತಿ ನಗುತ್ತಿರುವ ಫೋಟೋ ಇದಾಗಿದೆ. ಈ ಫೋಟೋಗೆ “ಸಂತಾ ಕ್ಲಾಸ್ ಕಡೆಯಿಂದ ರಾಯನ್ ಗೆ ಯಾವುದೇ ಗಿಫ್ಟ್ ಸಿಕ್ಕರೂ ಖುಷಿ” ಎಂದು ಮೇಘನಾ ಬರೆದುಕೊಂಡಿದ್ದಾರೆ.

ಅಂದಹಾಗೆ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಿಂದೂ ಆಗಿದ್ದು, ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮೇಘನಾ ಮನೆಯಲ್ಲಿ ಯಾವುದೇ ಹಿಂದೂ ಹಾಗೂ ಕ್ರಿಶ್ಚಿಯನ್ ಹಬ್ಬಗಳು ಬಂದಾಗ ಎರಡು ಹಬ್ಬವನ್ನು ಸಮನಾಗಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top