fbpx
ಸಮಾಚಾರ

ರಶ್ಮಿಕಾ, ಅಲ್ಲು ಅರ್ಜುನ್ ನಡುವಿನ ಹಸಿಬಿಸಿ ದೃಶ್ಯಗಳಿಗೆ ಚಿತ್ರತಂಡ ಕತ್ತರಿ

ಸುಕುಮಾರ್ ನಿರ್ದೇಶನದ ‘ಪುಷ್ಪ–ದಿ ರೈಸ್ ಭಾಗ-1’ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ರೊಮ್ಯಾಂಟಿಕ್ ಸೀನ್‌ಗೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಪುಷ್ಪ ಸಿನಿಮಾದಲ್ಲಿ ಪುಷ್ಪರಾಜ್ (ಅಲ್ಲು ಅರ್ಜುನ್) ಹಾಗೂ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ನಡುವೆ ಕಾರಿನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವು ವಿವಾದಕ್ಕೀಡಾಗಿತ್ತು.

‘ಪುಷ್ಟ’ ಸಿನಿಮಾದಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಭಾರೀ ವಿವಾದ ಸೃಷ್ಟಿಸುತ್ತಿದ್ದು, ಈ ಸಿನಿಮಾದಲ್ಲಿ ನಾಯಕ, ನಾಯಕಿಯ ಎದೆಯನ್ನು ಮುಟ್ಟುವ ದೃಶ್ಯವಿದೆ. ಅದನ್ನು ನೋಡಿದ ಪ್ರೇಕ್ಷಕರು ಈ ದೃಶ್ಯ ಸಿನಿಮಾಗೆ ಅವಶ್ಯಕತೆ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಈ ಪರಿಣಾಮ ಆ ದೃಶ್ಯವನ್ನೇ ಚಿತ್ರದಿಂದ ತೆಗೆಯಬೇಕು ಎಂದು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಚಿತ್ರವು ಮೂರು ಗಂಟೆಗಳ ಕಾಲ ಓಡುವುದರಿಂದ, ಒಂದು ದೃಶ್ಯವನ್ನು ತೆಗೆದುಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಒಂದು ದೃಶ್ಯದಲ್ಲಿ, ಪುಷ್ಪಾ ರಾಜ್ ಮತ್ತು ಶ್ರೀವಲ್ಲಿ ಕಾರಿನಲ್ಲಿ ಕುಳಿತು ರೋಮ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಸಂಭಾಷಣೆಯ ಸಮಯದಲ್ಲಿ, ಪುಷ್ಪಾ ಶ್ರೀವಲ್ಲಿಯ ಎದೆಯನ್ನು ಮುಟ್ಟುತ್ತಾನೆ ಮತ್ತು ಅವರು ಅದರ ಬಗ್ಗೆ ಸಂಭಾಷಣೆ ನಡೆಸುತ್ತಾರೆ. ಈ ದೃಶ್ಯವನ್ನು ಕುಟುಂಬಸ್ಥರೆಲ್ಲಾರು ಕುಳಿತು ನೋಡಲು ಸಾಧ್ಯವಿಲ್ಲ. ಹಾಗಾಗಿ ನಿರ್ಮಾಪಕರು ಈ ದೃಶ್ಯವನ್ನು ತೆಗೆದು ಹಾಕಿದ್ದಾರೆ ಎನ್ನಲಾಗ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top