fbpx
ಸಮಾಚಾರ

ಈ ಐವರು ವಿದೇಶಿ ವಿಕೇಟ್ ಕೀಪರ್‌ಗಳ ಮೇಲೆ ಕಣ್ಣಿಟ್ಟಿದೆ ಐಪಿಎಲ್ ಫ್ರಾಂಚೈಸಿಗಳು

ಟಿ-20 ಕ್ರಿಕೆಟ್‌ನ ರೋಚಕ ಆಟ ಐಪಿಎಲ್ 2022ರ ಹರಾಜಿಗೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನಲೆಯಲ್ಲಿ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನು ತಮ್ಮ ಬಲೆಗೆ ಹಾಕಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದಾರೆ. ಈಗಿನಿಂದಲೇ ಅದಕ್ಕಾಗಿ ಬಲೆ ಬೀಸಿರುವ ಫ್ರಾಂಚೈಸಿಗಳು ಒಂದಿಷ್ಟು ವಿದೇಶಿ ಕೀಪರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಾದರೆ ಯಾವೆಲ್ಲಾ ಆಟಗಾರರು ಆ ಪಟ್ಟಿಯಲ್ಲಿದ್ದಾರೆ? ಈ ಸ್ಟೋರಿ ನೋಡಿ.

1. ಕ್ವಿಂಟನ್ ಡಿ ಕಾಕ್: ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಟವಾಡುತ್ತಿದ್ದ ಈ ಸ್ಪೋಟಕ ಬ್ಯಾಟ್ಸ್ಮನ್ ಉತ್ತಮ ಕೀಪರ್ ಕೂಡ ಹೌದು. ಗಿಲಕ್ರಿಸ್ಟ್ ನಂತರ ಈ ಮಾದರಿಯಲ್ಲಿ ಅತೀ ಹೆಚ್ಚು ಸ್ಟಾಂಪಿಂಗ್  ಮಾಡಿರುವ ಈ ಪ್ರತಿಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಬ್ಯಾಟಿಂಗ್ ನಲ್ಲೂ ಪರಿಣಾಮಕಾರಿ ಆಟವಾಡಿರುವ ಕ್ವಿಂಟನ್ ಕಳೆದ ಮೂರು ಸೀಸನ್‌ಗಳಲ್ಲಿ 529, 503, 297ರನ್ ಕೊಡುಗೆಯನ್ನು ಕೊಟ್ಟಿದ್ದಾರೆ.

2. ಜಾನಿ ಬೇರ್ ಸ್ಟೊ: ಇಂಗ್ಲೆಂಡ್  ತಂಡದ ಜಾನ್ ಬೇರ್ ಸ್ಟೋ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್. ಸನ್ ರೈಸಸ್ ಹೈದರಾಬಾದ್ ಪರ ಬ್ಯಾಟ್ ಬೀಸುತ್ತಿದ್ದ ಈ ಪ್ರತಿಭೆ ಸ್ಪೋಟಕ ಓಪನಿಂಗ್ ಬ್ಯಾಟ್ಸ್ಮನ್ ಆಗಿ ತಂಡದ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್  ಪರವಾಗಿಯೂ ಈ ಬಾರಿಯ ವಿಶ್ವಕಪ್‌ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿರುವ ಬೇರ್ ಸ್ಟೊ ಮೇಲೆ ಫ್ರಾಂಚೈಸಿಗಳು ಕಣ್ಣು ಹಾಕಿವೆ.

3. ಮ್ಯಾಥ್ಯೂ ವೇಡ್: ಡೆಲ್ಲಿ ಪರವಾಗಿ ಐಪಿಎಲ್ ಆಡುತ್ತಿದ್ದ ಆಸ್ಟ್ರೇಲಿಯಾ ಪ್ರತಿಭೆ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿ ಅಷ್ಟೊಂದು ಹೆಸರಿಲ್ಲದ ಈ ಕೀಪರ್ ಪಾಕ್ ವಿರುದ್ದದ ಪಂದ್ಯದಲ್ಲಿ ಇನ್ನೇನು ಸೋಲುತ್ತದೆ ಎನ್ನುವ ಕೊನೆಯ ಘಟ್ಟದಲ್ಲಿ ಮೂರು ಸಿಕ್ಸ್ ಹೊಡೆದು ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಹಾಗಾಗಿ ಈ ಬಾರಿ ಹರಾಜಿನಲ್ಲಿ ಈ ಆಟಗಾರನ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟೇ ಇರುತ್ತವೆ.

4. ಅಲೆಕ್ಸ್ ಕ್ಯಾರಿ: ಆಸ್ಟ್ರೇಲಿಯದ ಬರೆ ಈ ವಿಕೆಟ್ ಕೀಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೂ ಪಂತ್ ಕಾರಣಕ್ಕಾಗಿ ಅವರಿಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಆದರೆ ಈ ಬಾರಿಯ ವಿಶ್ವಕಪ್ ಪಂದ್ಯದಲ್ಲಿ ಅವರು ತೊರಿದ ಪ್ರದರ್ಶನ ಅದ್ವಿತೀಯ. ಹಾಗಾಗಿ ಈ ಬಾರಿ ಅವರೂ ಈ ಬಿಡ್ಡಿಂಗ್ ರೇಸಿನಲ್ಲಿದ್ದಾರೆ.

5. ಡೆವೋನ್ ಕಾನ್ವೆ: ಇಲ್ಲಿಯವರೆಗೆ ಈ ಕೀವಿಸ್ ದಾಂಡಿಗನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಕಳೆದ ವಿಶ್ವಕಪ್ ಪಂದ್ಯದ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ಪರ ಬ್ಯಾಟ್ ಬೀಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದೀಚೆಗೆ ಈ ಕೀವಿಸ್ ದಾಂಡಿಗನ ಬಗ್ಗೆ ಎಲ್ಲರೂ ಒಂದು ಕಣ್ಣು ನೆಟ್ಟಿದ್ದರು. ಈ ಬಾರಿ ಫ್ರಾಂಚೈಸಿಗಳು ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top