fbpx
ಸಮಾಚಾರ

ಮೋದಿ ಅಧಿಕಾರಕ್ಕೆ ಬಂದ ಬಳಿಕ ತಂದ ಹತ್ತು ಪ್ರಮುಖ ಸುಧಾರಣೆಗಳು ಯಾವುದು ಗೊತ್ತಾ?

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿತು. ಇಲ್ಲಿಯವರೆಗೆ ಯಾವ ಸರ್ಕಾರಗಳೂ ಮಾಡದ ಕೆಲವು ಅಪರೂಪದ ಯೋಜನೆಗಳನ್ನು ತೆಗೆದುಕೊಂಡು ಬಂದು ದೇಶದಲ್ಲಿ ನೆನೆಗುದಿಗೆ ಬಿದ್ದಿದ್ದ ಅದೆಷ್ಟೋ ವಿಚಾರಗಳಿಗೆ ಜೀವ ಕೊಟ್ಟಿದ್ದು ಮೋದಿ ಸರ್ಕಾರ. ಹಿಂದುಳಿದ ವರ್ಗಗಳಿಂದ ಬಂದ ಎರಡನೇ ಪ್ರಧಾನಿ ಮೋದಿಯಾಗಿರುವುದರಿಂದ ಜನ ಸಾಮಾನ್ಯರ ಕಷ್ಟಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು ಎಂದೇ ಹೇಳಬಹುದು. ಹಾಗಾಗಿ ಮೋದಿ ಮತ್ತೆ ಎರಡನೇ ಅವಧಿಗೆ ಗೆದ್ದು ಬಂದರು. ಮೋದಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಮಾಡಿದ ೧೦ ವಿಭಿನ್ನ ಪ್ರಯೋಗಗಳು ಇಲ್ಲಿವೆ.

1. ಮನ್ ಕೀ ಬಾತ್ : ಜನ ಸಾಮಾನ್ಯ ಮತ್ತು ಪ್ರಧಾನಿಯ ನಡುವೆ ನಿರಂತರ ಸಂವಹನ ಏರ್ಪಡಬೇಕೆಂದು ಮೋದಿ ಸರ್ಕಾರ ಜಾರಿಗೆ ತಂದ ರೇಡಿಯೋ ಮಾತುಕತೆಯೇ ಮನ್ ಕೀ ಬಾತ್. ತಿಂಗಳಿಗೊಮ್ಮೆ ನಡೆಯುತ್ತದ್ದ ಈ ರೇಡಿಯೋ ಸಂವಹನಕ್ಕಾಗಿ ಆಕಾಶವಾಣಿ ಭಾನುಲಿ ರೇಡಿಯೋಗಳನ್ನು ಪ್ರಧಾನಿಗಳು ಬಳಸಿಕೊಂಡರು. ಸ್ವಾತಂತ್ರ್ಯ ದಿನ ಸೇರಿದಂತೆ ಕೆಲವು ವಿಶೇಷ ದಿನಗಳಲ್ಲಿ ದೇಶದ ಜನರೊಂದಿಗೆ ಅವರು ಸಂವಹನ ನಡೆಸುತ್ತಾರೆ. ಆಲ್ ಇಂಡಿಯಾ ರೇಡಿಯೋ, ದೂರದರ್ಶನದಂತಹ ಸರ್ಕಾರಿ ಚಾನೆಲ್‌ಗಳ ಪ್ರಾಮುಖ್ಯತೆಯನ್ನು ತಿಳಿಸುವುದೂ ಒಂದು ಪ್ರಮುಖ ಉದ್ದೇಶವಾಗಿತ್ತು. 20 ನಿಮಿಷಗಳ ಕಾರ್ಯಕ್ರಮ ಇದಾಗಿದ್ದು ಅಕ್ಟೋಬರ್ 2014ರಲ್ಲಿ ಸ್ವಚ್ಚತೆಗೆ ಸಂಬಂಧಿಸಿದ  ಭಾಷಣದೊಂದಿಗೆ ಪ್ರಾರಂಭವಾಗಿತ್ತು. ಇಲ್ಲಿಯವರೆಗೆ ಅನೇಕ ವಿಚಾರಗಳು ಚರ್ಚೆಗೆ ಒಳಪಟ್ಟಿದ್ದು ಸರ್ಕಾರದ ವರದಿಯನ್ವಯ ಇಲ್ಲಿಯವರೆಗೆ 70ಸಾವಿರಕ್ಕೂ ಅಧಿಕ ವಿಚಾರಗಲು ಈ ಕಾರ್ಯಕ್ರಮದ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದೆ.

 

 

2. ಸ್ವಚ್ಚ ಭಾರತ್ ಮಿಷನ್: ಅಕ್ಟೋಬರ್ 2014ರ ಗಾಂಧಿ ಜಯಂತಿಯ ದಿನ ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದ್ದ ಮೋದಿಯವರು ಅಂದು ಸ್ವಚ್ಚಭಾರತ ಮಿಷನ್ ಎನ್ನುವ ಯೋಜನೆಗೆ ಚಾಲನೆ ನೀಡಿದ್ದರು. ದೇಶದ ಪ್ರಧಾನಿಯೊಬ್ಬ ಸ್ವತಃ ಪೊರಕೆ ಹಿಡಿದು ಬಂದಿದ್ದು ಮೊದಲ ಬಾರಿಯಾದ್ದರಿಂದ ಈ ಪ್ರಯೋಗ ಅಮೋಘ ಯಶಸ್ವಿಯನ್ನು ಪಡೆದುಕೊಂಡಿತ್ತು. ಸ್ವಚ್ಚತೆ ಮತ್ತು ಅದರ ನಿರ್ವಹಣೆ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿದ್ದು ಈ ಸಮಸ್ಯೆಗೆ ಉತ್ತರವಾಗಿ ಸರ್ಕಾರ ಸ್ವಚ್ಚ ಭಾರತ ಮಿಷನ್ ಪ್ರಾರಂಭಿಸಿ ಯಶಸ್ವಿಯಾಗಿತ್ತು.

 

 

3. ಮೇಕ್ ಇನ್ ಇಂಡಿಯಾ, ವಿದೇಶಿ ನೇರ ಹೂಡಿಕೆ, ಮುದ್ರಾ ಯೋಜನೆ: ಭಾರತದಲ್ಲಿ ವಿದೇಶಿಯರು ಹೂಡಿಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸರ್ಕಾರ ತಂದಿತ್ತು. ಭಾರತವನ್ನು ಒಂದು ಬ್ರಾಂಡ್ ಆಗಿ ಮಾಡಲು ನಿರ್ಧರಿಸಿದ್ದ ಯೋಜನೆಯದು. ಇನ್ನು ವಿದೇಶಿ ನೇರ ಹೂಡಿಕೆಗೂ ವ್ಯಾಪಕ ಪ್ರೋತ್ಸಾಹ ನೀಡಿ 1991ರಲ್ಲಿ ಬಂದಿದ್ದ ಉದಾರೀಕರಣ ನೀತಿಗೆ ಹೊಸ ಭಾಷ್ಯ ಬರೆಯಿತು. ಭಾರತದಲ್ಲಿ ಸದ್ಯ ನಿರುದ್ಯೋಗ ಹೆಚ್ಚಿದ್ದು ಈ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ನವ ಉದ್ಯಮಗಳನ್ನು ಪ್ರಾರಂಭಿಸಲು ಸುಲಭವಾಗಿ ಲೋನ್ ದೊರೆಯುವಂತೆ ಮಾಡಲು ಪ್ರಾರಂಭಿಸಿದ ಯೋಜನೆಯೇ ಮುದ್ರಾ ಯೋಜನೆ. 20 ಸಾವಿರಕ್ಕೂ ಮಿಕ್ಕಿ ಉದ್ಯಮಗಳು ಇದು ಪ್ರಾರಂಭವಾದ 5 ವರ್ಷಗಳಲ್ಲಿ ಪ್ರಾರಂಭಗೊoಡಿದ್ದವು.

4. ಜನಧನ ಯೋಜನೆ ಮತ್ತು ಉಜ್ವಲ್ ಯೋಜನಾ: ದೇಶದ ಜನರನ್ನು ಔಪಚಾರಿಕವಾಗಿ ಆರ್ಥಿಕವಾಗಿ ಸದೃಢತೆ ತರಬೇಕು ಎಂದು ತಂದಿರುವ ಯೋಜನೆ ಜನಧನ್ ಯೋಜನೆ. ದೇಶದ ಜನರನ್ನು ಬ್ಯಾಂಕ್ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಕಾರಣಕ್ಕಾಗಿ ಎಲ್ಲರನ್ನೂ ಬ್ಯಾಂಕ್ ಅಕೌಂಟ್ ಹೊಂದುವoತೆ ಮಾಡುವುದು ಈ ಯೋಜನೆಯ ಗುರಿಯಾಗಿತ್ತು. ಇದರಲ್ಲಿ ಸರ್ಕಾರ ಯಶಸ್ವಿಯಾದರು ಕೂಡ. ಅದೆಷ್ಟೋ ಜನ ಬ್ಯಾಂಕ್ ಮೆಟ್ಟಿಲೇರದವರೂ ಕೂಡ ಈ ಯೋಜನೆಯ ಮೂಲಕ ಬ್ಯಾಂಕ್‌ನಲ್ಲಿ ವ್ಯವಹರಿಸಲು ಕಲಿತರು. ಸೊನ್ನೆ ರೂಪಾಯಿ ಜಮಾವಣೆಯಲ್ಲಿ ತೆರೆದ ಒಟ್ಟು ಜನಧನ್ ಬ್ಯಾಂಕ್ ಖಾತೆಗಳ ಸಂಖ್ಯೆ 138 ಮಿಲಿಯನ್. ಹಳ್ಳಿಯ ಜನರು ಒಲೆ ಊದುವುದು ಮತ್ತು ಆರೋಗ್ಯ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಬೇಕೆಂದು ಮೋದಿ ಸರ್ಕಾರ ಉಜ್ವಲ್ ಯೋಜನೆ ಘೋಷಿಸಿತ್ತು. ೫ ಕೋಟಿಗೂ ಮಿಕ್ಕಿದ ಬಡತನ ರೇಖೆಗಿಂತ ಕೆಳಗಿದ್ದ ಜನರು ಅಡುಗೆ ಅನಿಲವನ್ನು ಸಬ್ಸಿಡಿ ಮೂಲಕ ಪಡೆಯುವಂತಾಯಿತು.

 

 

5. ಕೈಗೆಟಕುವ ಆರೋಗ್ಯ ಯೋಜನೆ : ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆರೋಗ್ಯ ಸುಧಾರಣೆಗಾಗಿ ಸರ್ಕಾರ ಹಲವು ಆರೋಗ್ಯ ಯೋಜನೆಗಳನ್ನು ತಂದಿದೆ. ಆಯುಷ್ಮಾನ್ ಭಾರತ ಎಂದು ಕರೆಯಲ್ಪಡುವ ಈ ಆರೋಗ್ಯ ಯೋಜನೆ 5 ಲಕ್ಷದವರೆಗಿನ ಮೆಡಿಕಲ್ ಇನ್ಸುರೆನ್ಸ್ ಅನ್ನು 50ಕೋಟಿ ಜನ ಕಡಿಮೆ ಆದಾಯ ಹೊಂದಿರುವ ನಾಗರಿಕರಿಗೆ ಉಪಕಾರವಾಗುವಂತೆ ರೂಪಿಸಿದೆ. ಹತ್ತು ಸಾವಿರ ಕೋಟಿ ಅಂದಾಜು ಹೊಂದಿರುವ ಈ ಪ್ರಾಜೆಕ್ಟ್ ವಿಶ್ವದ ಅತೀ ದೊಡ್ಡ ಆರೋಗ್ಯ ಸುಧಾರಣಾ ಯೋಜನೆಯಾಗಿದೆ.

6. ಜಿ.ಎಸ್.ಟಿ. : ಸರಕು ಮತ್ತು ಸೇವೆಗಳ ತೆರಿಗೆಯನ್ನು ಜಾರಿಗೊಳಿಸಿ ಒಂದೇ ದೇಶ ಒಂದೇ ತೆರಿಗೆ ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿತು. ಇದೂ ಕೂಡ ಮೋದಿ ಸರ್ಕಾರ ಜಾರಿಗೊಳಿಸಿದ ಮಹತ್ವದ ಯೋಜನೆಗಳಲ್ಲೊಂದು. ಆರಂಭದಲ್ಲಿ ಸಾಕಷ್ಟು ಗೊಂದಲಗಳಿದ್ದರೂ, ಸರ್ಕಾರವು ಸರಕು ಮತ್ತು ಸೇವಾ ತೆರಿಗೆ ಪಾವತಿಸುವ ಸ್ಲ್ಯಾಬ್‌ಗಳು ಮತ್ತು ವಿಧಾನಗಳನ್ನು ಸರಳೀಕರಿಸಿತು. ತೆರಿಗೆ ಮರುಪರಿಶೀಲನೆಯ ಪರಿಣಾಮಕಾರಿತ್ವವನ್ನು ನಿಯತಕಾಲಿಕವಾಗಿ ಪರಿಶೀಲಿಸಲು ಸರ್ಕಾರವು ಜಿ.ಎಸ್.ಟಿ. ಕೌನ್ಸಿಲ್ ಅನ್ನು ಸ್ಥಾಪಿಸಿತು. ದೇಶದಾದ್ಯಂತ ಒಂದೇ ಬೆಲೆಯನ್ನು ತರುವ ಈ ಯೊಜನೆ ಅಭೂತಪೂರ್ವ ಯಶಸ್ವಿ ಕಂಡಿದೆ.

 

 

7. ವಿದ್ಯುತ್ ಮತ್ತು ರಸ್ತೆಗಳ ವಿಸ್ತರಣೆ: ಮೋದಿ ಸರ್ಕಾರದ ಅಡಿಯಲ್ಲಿ ಗ್ರಾಮೀಣ ವಿದ್ಯುದೀಕರಣವು ವೇಗವನ್ನು ಪಡೆದುಕೊಂಡಿತು ಮತ್ತು ಹೆಚ್ಚಿನ ಸಂಖ್ಯೆಯ ಹಳ್ಳಿಗಳು ವಿದ್ಯುತ್ ಗ್ರಿಡ್‌ಗೆ ಸಂಪರ್ಕ ಹೊಂದಿದ್ದವು. ಅಂತೆಯೇ ರಸ್ತೆ ನಿರ್ಮಾಣದ ವೇಗವೂ ಹೆಚ್ಚಿದೆ. ಈಗ, ಪ್ರತಿ ದಿನ 40 ಕಿ.ಮೀ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ, ಇದು ಹಿಂದಿನ ಸರ್ಕಾರದಲ್ಲಿ (17 ಕಿ.ಮೀ) ಎರಡು ಪಟ್ಟು ಹೆಚ್ಚು. ದೇಶದ ಹಲವಾರು ಪ್ರತ್ಯೇಕ ಪ್ರದೇಶಗಳು ಈಗ ಪ್ರವೇಶಿಸಬಹುದಾಗಿದೆ.

8. ತ್ರಿವಳಿ ತಲಾಕ್ ಮಸೂದೆ: ಧರ್ಮ, ಜಾತಿ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರ ಬದ್ಧವಾಗಿದೆ. ಈ ಉದ್ದೇಶಕ್ಕಾಗಿಯೇ ಮೋದಿ ಸರ್ಕಾರವು ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ನಿಷೇಧವಾಗಿರುವ ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಪರವಾಗಿತ್ತು. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧದ ತೀರ್ಪು ಪ್ರಕಟಿಸಿದಾಗ ಸ್ವತಃ ಮೋದಿ ಅವರೇ ಮುಂದೆ ಬಂದು ಸಾಮಾಜಿಕ ನ್ಯಾಯದ ಹೋರಾಟದ ಬಗ್ಗೆ ತಮ್ಮ ಸಂತೋಷವನ್ನು ತೋರಿಸಿದರು. ಅಪರಾಧಿಗಳಿಗೆ ಶಿಕ್ಷೆಯನ್ನು ಪರಿಚಯಿಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಲು ಸರ್ಕಾರವು ಮಸೂದೆಯನ್ನು ಸಹ ತಂದಿತು. ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊoಡಿದ್ದರೂ, ಪ್ರತಿಪಕ್ಷಗಳ ಸಂಖ್ಯಾಬಲದಿoದ ರಾಜ್ಯಸಭೆಯಲ್ಲಿ ಮಸೂದೆ ಸ್ಥಗಿತಗೊಂಡಿದೆ.

9. ಜೀವನಕ್ಕಾಗಿ ಯೋಗ : ಭಾರತದಿಂದ ಹುಟ್ಟಿಕೊಂಡ ಸಾಂಪ್ರದಾಯಿಕ ಯೋಗ, ದೈಹಿಕ ಮತ್ತು ಮಾನಸಿಕ ಶಿಸ್ತನ್ನು ಪ್ರಪಂಚದಾದ್ಯoತ ಹರಡಿದೆ. ನಿತ್ಯ ಯೋಗ ಪಟುವಾಗಿರುವ ಮೋದಿ ಅವರು ಯೋಗವನ್ನು ವಿಶ್ವಾದ್ಯಂತ ಪ್ರಚಾರ ಮಾಡಿದ್ದಾರೆ. ಭಾರತದ ಒತ್ತಾಯದಿಂದ ವಿಶ್ವಸಂಸ್ಥೆಯು ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಆಚರಿಸಿಕೊಂಡು ಬರುತ್ತಿದೆ. ಇಂದಿಗೂ ಮೋದಿ ಅವರೇ ಯೋಗ ದಿನಾಚರಣೆ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆರೋಗ್ಯಕರ ಜೀವನ ನಡೆಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ವೈರಲ್ ವರ್ಕೌಟ್ ಚಾಲೆಂಜ್‌ನಲ್ಲಿಯೂ ಮೋದಿ ಭಾಗವಹಿಸಿದ್ದರು.

10. ಡಿಜಿಟಲ್ ಇಂಡಿಯಾ : ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ವೇಗವಗಿ ಬೆಳೆಯುತ್ತಿರುವುದರಿಂದ, ಮೋದಿ ಸರ್ಕಾರವು ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ಈ ಬೆಳವಣಿಗೆಯನ್ನು ಉತ್ತೇಜಿಸಿತು. ಕಡಿಮೆ-ವೆಚ್ಚದ ಇಂಟರ್ನೆಟ್ ಸೇವೆಗಳ ಪರಿಚಯವು ಸುಮಾರು 500 ಮಿಲಿಯನ್ ಜನರಿಗೆ ಇಂಟರ್ನೆಟ್ ಅನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡಿದೆ.

 

 

ಮೋದಿ ಸರ್ಕಾರವು ನಾಗರಿಕರಿಗೆ ಸೇವೆ ಸಲ್ಲಿಸಲು ವಿವಿಧ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಪ್ರಾರಂಭಿಸುವ ಮೂಲಕ ಡಿಜಿಟಲ್ ಉಪಕ್ರಮವನ್ನು ಮುಂದಿಟ್ಟಿದೆ. ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ ಮತ್ತು ಕಾರ್ಡ್ ಸ್ಕೀಮ್ ರುಪೇ ದೇಶದಲ್ಲಿ ಆನ್‌ಲೈನ್ ವಹಿವಾಟುಗಳ ಬೆಳವಣಿಗೆಯನ್ನು ಉತ್ತೇಜಿಸಿದೆ. ಹೀಗೆ ಮೋದಿ ಸರ್ಕಾರ ಪ್ರಗತಿಗೆ ಕೊಡುಗೆಗಳನ್ನು ಕೊಡುತ್ತಾ ಗ್ರಾಮೀಣ ಭಾರತವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದೆ. ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಜನಸಾಮಾನ್ಯರು ಅಭಿವೃದ್ದಿ ಹೊಂದಬೇಕಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top