ಯಾವುದೇ ವಿಚಾರಗಳ ಬಗ್ಗೆಯೂ ಗೊಂದಲಗಳಿದ್ದರೆ ಗೂಗಲ್‌ನಲ್ಲಿ ಹುಡುಕಿಬಿಡುತ್ತೇವೆ. ಕೆಲವೊಮ್ಮೆ ನಾವು ತಪ್ಪಿ ಮಾಡುವ ಎಡವಟ್ಟುಗಳಿಂದಾಗಿ ಕ್ರಿಮಿನಲ್ ಕೇಸ್ ಆಗುವ ಸಾಧ್ಯತೆಗಳಿವೆ ಹಾಗಾಗಿ ಸರ್ಚ್ ಮಾಡುವಾಗಲೂ ಅತ್ಯಂತ ಎಚ್ಚರಿಕೆಯಿಂದ ಇರುವುದು ಅನಿವಾರ್ಯ. ಅಷ್ಟಕ್ಕೂ ನಾವು ಹುಡುಕಲೇ ಬಾರದು ಅನ್ನುವ ಸಂಗತಿ ಇದೆಯಾ? ಹೌದು ಯಾವುದೇ ಕಾರಣಕ್ಕೂ ಈ 5 ಸಂಗತಿಗಳನ್ನು ಗೂಗಲ್‌ನಲ್ಲಿ ಹುಡುಕಬಾರದು. ಆ 5 ಸಂಗತಿಗಳು ಯಾವುವು? ಕಂಪ್ಲೀಟ್ ಮಾಹಿತಿಗಾಗಿ ಪೂರ್ತಿ ಸ್ಟೋರಿ ಓದಿ.
ಚಲನಚಿತ್ರ ಪೈರಸಿ :
ಯಾವುದೇ ಚಿತ್ರಗಳನ್ನು ಪೈರಸಿ ಮಾಡುವುದು ಅಥವಾ ಸೋರಿಕೆ ಮಾಡುವುದು ಭಾರತದಲ್ಲಿ ಅಪರಾಧ. ಚಿತ್ರ ಬಿಡುಗಡೆಗೂ ಮುನ್ನ ಈ ರೀತಿ ಸೋರಿಕೆ ಮಾಡಲಾದ ವಿಡಿಯೋಗಳನ್ನು ಡೌನ್ಲೋಡ್ ಮಾಡಿದ್ದು ತಿಳಿದು ಬಂದರೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಭಾರತದಲ್ಲಿ ಈ ರೀತಿ ಸೋರಿಕೆಯಾದ ವಿಡಿಯೋ ಡೌನ್ಲೋಡ್ ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಗಳನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ಬಾಂಬ್ ತಯಾರಿಸುವುದು ಹೇಗೆ?
ಅನೇಕ ಸಲ ಜನರಿಗೆ ಕ್ಯೂರಿಯಾಸಿಟಿ ತಡೆಯಲಾಗದೆ ತಮಗೆ ಅಗತ್ಯವೇ ಇಲ್ಲದ ಹಲವು ವಿಷಯಗಳ ಕುರಿತು ಹುಡುಕಾಡುತ್ತಾರೆ. ಹಾಗೆಯೇ ನೀವೇನಾದರೂ ಬಾಂಬ್ ತಯಾರಿಸುವ ಬಗ್ಗೆ ಹುಡುಕಲು ಹೋಗದಿರಿ. ಬಾಂಬ್ ತಯಾರಿಕೆ ಎಂಬುದು ದೇಶದ ಭದ್ರತಾ ವಿಷಯಕ್ಕೆ ಸಂಬoಧಿಸಿದ್ದರಿoದ ಈ ವಿಷಯಗಳನ್ನು ಸರ್ಚ್ ಮಾಡುವವರ ಬಗ್ಗೆ ಸಕಾರ ಕಣ್ಣಿಟ್ಟಿರುತ್ತದೆ. ನೀವೊಂದು ವೇಳೆ ಇಂತಹ ವಿಚಾರಗಳನ್ನು ಸರ್ಚ್ ಮಾಡಿದ್ದೀರಿ ಎಂದು ಗೊತ್ತಾದರೆ ನಿಮ್ಮನ್ನು ಬಂಧಿಸುವ ಸಾಧ್ಯತೆಗಳಿವೆ.
ಗರ್ಭಪಾತ ಮಾಡುವುದು ಹೇಗೆ?
ಭಾರತೀಯ ಕಾನೂನಿನ ಪ್ರಕಾರ ವೈದ್ಯರ ಸಲಹೆ ಇಲ್ಲದೆ ಗರ್ಭಪಾತಕ್ಕೆ ಅವಕಾಶವಿಲ್ಲ. ಹಾಗಾಗಿ ನೀವೇನಾದರೂ ಈ ವಿಚಾರವನ್ನು ಗೂಗಲ್ನಲ್ಲಿ ಸರ್ಚ್ ಮಾಡಿ ಬಿಟ್ಟೀರಿ. ಇಂತಹ ವಿಚಾರಗಲ ಬಗ್ಗೆ ಸರ್ಚ್ ಮಾಡುವಾಗ ಎಚ್ಚರದಿಂದಿರಿ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳು ಯಾವುದೇ ವ್ಯಕ್ತಿಯ ಖಾಸಗಿ ಫೋಟೋಗಳನ್ನು ಗೂಗಲ್ನಲ್ಲಿ ಹಂಚಿಕೊಳ್ಳುವುದು ಅಪರಾಧ. ಹಾಗಾಗಿ ಯಾವುದೇ ವ್ಯಕ್ತಿಯ ಖಾಸಗಿ ಫೋಟೋಗಳನ್ನು ಹಂಚಿಕೊಳ್ಳದಿರಿ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ವ್ಯಕ್ತಿಯ ಖಾಸಗಿ ಫೋಟೋಗಲನ್ನು ಹಂಚಿಕೊಳ್ಳುವಾಗ ಎಚ್ಚರ.
ಚೈಲ್ಡ್ ಪೋರ್ನ್: ಚೈಲ್ಡ್ ಪೋರ್ನ್ ಬಗ್ಗೆ ಭಾರತ ಸರ್ಕಾರ ಕಠಿಣವಾದ ನಿಲುವುಗಳನ್ನು ಹೊಂದಿದೆ. ಇಲ್ಲಿ ಚೈಲ್ಡ್ ಪೋರ್ನ್ ಬಗ್ಗೆ ಹುಡುಕುವುದು ಮತ್ತು ಮಾಹಿತಿ ಕಲೆ ಹಾಕುವುದೂ ಅಪರಾಧವೆಂದು ಕರೆಸಿಕೊಳ್ಳುತ್ತದೆ. ಹಾಗಾಗಿ ನೀವೂ ಈ ರೀತಿ ಸರ್ಚ್ ಕೊಟ್ಟರೆ ಜೈಲು ಸೇರಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
