fbpx
ಕ್ರಿಕೆಟ್

ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಕೋಹ್ಲಿಗೆ ರ‍್ಯಾಂಕಿಂಗ್ನಲ್ಲೂ ಬಿತ್ತು ಕುಸಿತದ ಬರೆ!

ಕಳೆದ ಕೆಲ ದಿನಗಳಿಂದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಹಾಗೂ ಕ್ಯಾಪ್ಟನ್ ಕೋಹ್ಲಿಗೆ ಟೈಮ ಕೆಟ್ಟಿದೆ ಎಂದೇ ಹೇಳಬಹುದು. ಮೇಲಿಂದ ಮೇಲೆ ವಿವಾದಗಳನ್ನು ಎಳೆದುಕೊಂಡಿರುವ ವಿರಾಟ್ ಇದೀಗ ರ‍್ಯಾಂಕಿಂಗ್ನಲ್ಲೂ ಕುಸಿತ ಕಂಡಿದ್ದಾರೆ. 6ನೇ ಸ್ಥಾನದಲ್ಲಿದ್ದ ಕೋಹ್ಲಿ ಇದೀಗ 7ನೇ ಸ್ಥಾನಕ್ಕೆ ಕುಸಿದಿದ್ದು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಕಳೆದ ಸೋಮವಾರ ಅಂತ್ಯವಾಗಿದ್ದ ಅಡಿಲೇಡ್ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಮಾರ್ನಸ್ ಲಾಬುಶೇನ್ ಆಷಸ್ ಸರಣಿಯ ಮೊದಲ ಶತಕ ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ(103 ಮತ್ತು 51) ಅರ್ಧಶತಕ ಸಿಡಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡದ 275 ರನ್‌ಗಳ ಭರ್ಜರಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಆ ಮೂಲಕ ಲಾಬುಶೇನ್ ರ‍್ಯಾಕಿಂಗ್‌ನಲ್ಲೂ ಅಗ್ರಸ್ಥಾನಕ್ಕೇರಿದರು.

900ಕ್ಕೂ ಹೆಚ್ಚು ರನ್ ಕಲೆ ಹಾಕುವ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 9ನೇ ಬ್ಯಾಟ್ಸ್ಮನ್ ಅವರೆನಿಸಿಕೊಂಡರು. ಸರ್ ಡೊನಾಲ್ಡ್ ಬ್ರಾಡ್‌ಮನ್, ರಿಕಿ ಪಾಂಟಿoಗ್, ಮ್ಯಾಥ್ಯೂ ಹೇಡನ್, ಸ್ಟೀವನ್ ಸ್ಮಿತ್ ಹಾಗೂ ಮೈಕಲ್ ಕ್ಲಾರ್ಕ್ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಲಾಬುಶೇನ್ ಅವರೂ ಸೇರ್ಪಡೆಗೊಂಡರು. ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ತೀವ್ರ ನಿರಾಸೆ ಮೂಡಿಸಿದ್ದರು. ಕಳೆದ ಬಾರಿ ಬಿಡುಗಡೆಯಾಗಿದ್ದ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 6ನೇ ಸ್ಥಾನಲ್ಲಿಯೇ ಉಳಿದಿದ್ದ ಕೊಹ್ಲಿ ಇದೀಗ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆೆ ರೋಹಿತ್ ಶರ್ಮಾ 5ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.

ಇನ್ನು ಟಿ-20  ರ‍್ಯಾಂಕಿಂಗ್ನನಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಹಾಗೂ ಇಂಗ್ಲೆಂಡ್  ತಂಡದ ಡೇವಿಡ್ ಮಲಾನ್ ಅಗ್ರಸ್ಥಾನವನ್ನು ಹಂಚಿಕೊoಡಿದ್ದಾರೆ. ಮೂರನೇ ಸ್ಥಾನವನ್ನೂ ಅಜಮ್ ಜೊತೆಗಾರ ರಿಜ್ವಾನ್ ಪಡೆದುಕೊಂಡಿದ್ದಾರೆ. ಭಾರತದ ಕೆ.ಎಲ್ ರಾಹುಲ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೋಹ್ಲಿ ಉತ್ತಮ ಬ್ಯಾಟ್ಸ್ ಮನ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸಿಕ್ಕ ಅವಕಾಶಗಳನ್ನು ಕೋಹ್ಲಿ ಸರಿಯಾಗಿ ಬಳಸಿಕೊಳ್ಳಬೇಕಿದೆ. ಮೈದಾನದ ಹೊರಗೆ ನಡೆಯುತ್ತಿರುವ ವಿವಾದಗಳು, ಕೆಲವೊಂದು ಘಟನೆಗಳನ್ನು ಮರೆತು ವಿರಾಟ್ ನೈಜ ಆಟದತ್ತ ಗಮನ ಹರಿಸಿದರೆ ಖಂಡಿತಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೆಲೇರಲು ಸಾಧ್ಯವಿದೆ. ಅವರು ಹಾಗೆ ಆಡಲಿ ಎಂಬುದೇ ಭಾರತೀಯರ ಬಯಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top