ಸಾಮಾನ್ಯವಾಗಿ ಮಕ್ಕಳು ತಪ್ಪು ಮಾಡಿದ್ದಾರೆ ಎಂದಾಗ ಹೆತ್ತವರು ಅದನ್ನು ತಿದ್ದುತ್ತಾರೆ. ಆದರೆ ಇಲ್ಲೊಬ್ಬ ಮಹಾತಾಯಿ ಮಗಳ ಜೊತೆಗೆ ಸೇರಿ ಕಳ್ಳತನ ಮಾಡಿದ್ದಾಳೆ. ಇದೆಂತಾ ಕಾಲ ಬಂತಪ್ಪಾ ಅಂತ ಮುಗಿನ ಮೇಲೆ ಬೆರಳಿಟ್ಟು ನೊಡಿಕೊಳ್ಳುವ ಈ ಘಟನೆ ನಡೆದಿದ್ದು ಗಣಿ ನಾಡು ಬಳ್ಳಾರಿಯಲ್ಲಿ.
ಹೌದು, ಗಣಿನಾಡು ಬಳ್ಳಾರಿಯಲ್ಲಿ ಇಂಥಹದೊಂದು ಘಟನೆ ಬೆಳಕಿಗೆ ಬಂದಿದೆ. ತಾಯಿಯೊಬ್ಬಳು ತನ್ನ ಮಗಳೊಂದಿಗೆ ಸೇರಿ ಕಳ್ಳತನ ನಡೆಸುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾಯಿ ಮಗಳ ಈ ಕೈಚಳಕ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ ಆಗಿ ಹೊರಹೊಮ್ಮುತ್ತಿದ್ದು ಬೆರಗುಗಣ್ಣಿನಿಂದ ನೋಡುವಂತಾಗಿದೆ.
ಸಿಸಿಟಿವಿ ಬಂದ ಬಳಿಕ ಅನೇಕ ಕಳ್ಳತನದ ವಿಡಿಯೋಗಳು ವೈರಲ್ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಅದೇ ರೀತಿಯ ವಿಡಿಯೋ ಇದಾಗಿದ್ದು ಬಳ್ಳಾರಿಯ ಇನ್ಫ್ರಾಂಟಿ ರಸ್ತೆಯ ಸೂಪರ್ ಮಾರ್ಕೆಟ್ ಒಂದರಲ್ಲಿ ಈ ಅಮ್ಮ ಮಗಳ ಜೋಡಿ ಕಳ್ಳತನ ಮಾಡಿದ್ದಾರೆ. ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಒಳ ಹೊಕ್ಕ ಇಬ್ಬರು ನಂತರ ಅನೇಕ ವಸ್ತುಗಳನ್ನು ಹುಡುಕಾಡಿದ್ದಾರೆ. ಹುಡುಕುವ ನೆಪ ಮಾಡಿ ಅಮ್ಮ ಒಂದಿಷ್ಟು ವಸ್ತುಗಳನ್ನು ಕದ್ದು ಮಗಳ ಕೈಗಿಡುತ್ತಾಳೆ. ಅಮ್ಮ ಕದ್ದು ಕೊಡುವ ವಸ್ತುಗಳನ್ನು ತನ್ನ ಬಟ್ಟೆಯೊಳಗೆ ಮಗಳು ಹಾಕಿಕೊಳ್ಳುತ್ತಾಳೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.ಇದು ಮೊದಲನೇ ಬಾರಿ ನಡೆದ ಕಳ್ಳತನವಲ್ಲ. ಡಿಸೆಂಬರ್ 17 ರಂದು ಇದೇ ಅಂಗಡಿಯಿಂದ ಬಂದು ಕಳ್ಳತನ ಮಾಡಿದ್ದ ಇವರು ಮರುದಿವಸ ಮತ್ತೆ ಅದೇ ಅಂಗಡಿಗೆ ಬಂದು ಕಳ್ಳತನ ಮಾಡಿದ್ದಾರೆ. ಅಂಗಡಿ ಮಾಲಿಕರು ಬಳ್ಳಾರಿ ಪೋಲಿಸ್ ಠಾಣೆಗೆ ದೂರು ನೀಡಿದ್ದು ಈ ಇಬ್ಬರು ಚಾಲಕಿ ಅಮ್ಮ ಮಗಳನ್ನು ಹಿಡಿಯಲು ಪೋಲಿಸರು ಬಲೆ ಬೀಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
