fbpx
ಸಮಾಚಾರ

ಶಾಕಿಂಗ್: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು? ನಿಮ್ಮಲ್ಲೂ ಐಫೋನ್ ಇದ್ರೆ ಟ್ರ್ಯಾಪ್ ಆಗಿರ್ಬೋದು ಚೆಕ್ ಮಾಡ್ಕೊಳಿ

ಆಪಲ್ ಐಫೋನ್‌ಗಳಲ್ಲಿ ಗೊತ್ತೇ ಆಗದಂತೆ ವೈಶಿಷ್ಟ್ಯವೊಂದನ್ನು ಬಳಸಿದ್ದು ಇಂಟರ್ನೆಟ್ ಲೋಕವನ್ನೇ ಬೆಚ್ಚಿಬೀಳಿಸಿದೆ. ಆಪಲ್ ಐಫೋನ್ ಲೈವ್ ಲಿಸನ್ ಎನ್ನುವ ಈ ವೈಶಿಷ್ಟ್ಯವನ್ನು ಬಳಸಿ ಯಾವುದೇ ಖಾಸಗಿ ಸಂಭಾಷಣೆಯ ಮೇಲೆ ರಹಸ್ಯವಾಗಿ ಕಣ್ಣಿಡಬಹುದು. ಈ ಐಫೋನ್‌ಗಳ ವೈಶಿಷ್ಟ್ಯವನ್ನು ಇತ್ತೀಚೆಗೆ ಟಿಕ್‌ಟಾಕ್ ಬಳಕೆದಾರ ದಲಿಲಮೌಹಿಬ್ ಕಂಡುಹಿಡಿದಿದ್ದಾರೆ, ತನ್ನ ಜೊತೆಗಾರರು ಮತ್ತು ಸ್ನೇಹಿತರು ಏನು ಹೇಳುತ್ತಾರೆಂದು ರಹಸ್ಯವಾಗಿ ಕೇಳಲು ಐಫೋನ್ ಲೈವ್ ಲಿಸನ್ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಇತ್ತೀಚೆಗೆ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ.

ಪೋಸ್ಟ್ ಅನ್ನು ಹಂಚಿಕೊAಡ ಟಿಕ್‌ಟಾಕರ್ ತನ್ನ ಕ್ಲಿಪ್‌ನಲ್ಲಿ, “ನೀವು ಎಲ್ಲವನ್ನೂ ನಿಮ್ಮ ಏರ್‌ಪಾಡ್‌ಗಳ ಮೂಲಕ ಕೇಳಬಹುದು.” ಜನರು ಮಾತನಾಡುವ ಕೋಣೆಯಲ್ಲಿ ತಮ್ಮ ಐಫೋನ್ ಅನ್ನು ಮರೆತುಬಿಟ್ಟು ಇನ್ನೊಂದು ಕೋಣೆಗೆ ಹೋಗಿ ಮತ್ತು ಆ ಕೋಣೆಯಲ್ಲಿ ಅವರು ಏನು ಮಾತನಾಡುತ್ತಿದ್ದಾರೆಂದು ಕೇಳಬಹುದು ಎಂದು ಅವಳು ತನ್ನ ಅನುಯಾಯಿಗಳಿಗೆ ಹೇಳಿದ್ದಾಳೆ. ಇದು ಏರ್‌ಪಾಡ್‌ಗಳ ಮೂಲಕ ಜೋರಾಗಿ ಮತ್ತು ಸ್ಪಷ್ಟವಾಗಿ ಬರುತ್ತದೆ. ಇದು ಸಂಪೂರ್ಣವಾಗಿ ರಹಸ್ಯವಾಗಿದೆ. ಅವಳು ವಿವರಿಸುತ್ತಾಳೆ. ಇದು ಎದುರಿನಲ್ಲಿದ್ದವರಿಗೆ ಸುಳಿವನ್ನೂ ಕೊಡಲಾರದೆಂದು ಅವರು ವಿವರಿಸುತ್ತಾರೆ.

ಲೈವ್ ಲಿಸನ್ ವೈಶಿಷ್ಟ್ಯದ ಮೂಲಕ ಮತ್ತೊಂದು ಕೋಣೆಯಲ್ಲಿದ್ದಾಗ ಸಂಭಾಷಣೆಗಳನ್ನು ರಹಸ್ಯವಾಗಿ ಕೇಳಲು ಆಪಲ್ ಐಫೋನ್‌ಗಳನ್ನು ಮೈಕ್ರೋಫೋನ್ ಆಗಿ ಬಳಸಬಹುದು. ಆಪಲ್ ವೆಬ್‌ಸೈಟ್ ಪ್ರಕಾರ, ಬಳಕೆದಾರರು ಗದ್ದಲದ ಪ್ರದೇಶದಲ್ಲಿ ಸಂಭಾಷಣೆಯನ್ನು ಕೇಳಲು ಅಥವಾ ನಾಲ್ಕು ಗೋಡೆಯೊಳಗೆ ಯಾರಾದರೂ ಮಾತನಾಡುವುದನ್ನು ಕೇಳಲು ಇದು ಸಹಾಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಲೈವ್ ಲಿಸನ್ ಬಳಕೆದಾರರಿಗೆ ತಮ್ಮ ಐಫೋನ್‌ಗಳು, ಐಪ್ಯಾಡ್‌ಗಳು ಅಥವಾ ಐಪಾಡ್‌ಗಳನ್ನು ಮೈಕ್ರೊಫೋನ್ ಆಗಿ ಪರಿವರ್ತಿಸಲು ಅನುಮತಿಸುತ್ತದೆ, ಅದು ಸಂಪರ್ಕಿತ ಏರ್‌ಪಾಡ್ಸ್, ಏರ್‌ಪಾಡ್ಸ್ ಪ್ರೊ, ಏರ್‌ಪಾಡ್ಸ್ ಮ್ಯಾಕ್ಸ್, ಪವರ್‌ಬೀಟ್ಸ್ ಪ್ರೊ ಅಥವಾ ಬೀಟ್ಸ್ ಫಿಟ್ ಪ್ರೊಗೆ ಸಂಭಾಷಣೆಗಳನ್ನು ಕಳುಹಿಸುತ್ತದೆ.

ಐಫೋನ್‌ಗಳ ಲೈವ್ ಲಿಸನ್ ವೈಶಿಷ್ಟ್ಯವನ್ನು ಬಳಸುವುದು ಹೇಗೆ?
ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಒಬ್ಬ ವ್ಯಕ್ತಿಯು ಕಂಟ್ರೋಲ್ ಸೆಂಟರ್ ಆಯ್ಕೆಗೆ ಹೋಗಬೇಕಾಗುತ್ತದೆ. ಅಲ್ಲಿರುವ ಹಿಯರಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿ ಲೈವ್ ಲಿಸನ್ ಆಯ್ಕೆಯನ್ನು ಆನ್ ಮಾಡಬೇಕಾಗುತ್ತದೆ. ಒಮ್ಮೆ ಆನ್ ಮಾಡಿದ ನಂತರ, ಸಾಧನವನ್ನು ಕೋಣೆಯಲ್ಲಿ ಇಟ್ಟು ಅಲ್ಲಿ ನಡೆದಿದ್ದನ್ನು ಕೇಳಿಸಿಕೊಳ್ಳಬಹುದು.
ಈ ವೈಶಿಷ್ಟ್ಯವು ಬ್ಲೂಟೂತ್ ಸಂಪರ್ಕ ಇರುವವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.
ಒಂದು ವೇಳೆ ಈ ಲೈವ್ ಲಿಸನ್ ಆಯ್ಕೆ ನಿಮ್ಮನ್ನು ಚಿಂತೆಗೀಡುಮಾಡಿದರೆ ಮತ್ತು ಈ ಆಯ್ಕೆಯನ್ನು ನಿಮ್ಮ ವಿರುದ್ಧವೇ ಬಳಸಲಾಗಿದೆಯೇ? ಎನ್ನುವ ಅನುಮಾನ ಬಂದರೆ ಅದನ್ನು ಕಂಡುಹಿಡಿಯುವುದು ಹೇಗೆ ಎಂಬುದೂ ಇಲ್ಲಿದೆ.
ಲೈವ್ ಲಿಸನ್ ಆನ್ ಆಗಿದ್ದರೆ ಐಫೋನ್ ಪರದೆಯ ಮೇಲಿನ ಎಡಭಾಗದಲ್ಲಿ ಕಿತ್ತಳೆ ಬಣ್ಣದ ಮೈಕ್ರೊಫೋನ್ ಐಕಾನ್ ಕಂಡುಬರುತ್ತದೆ.
ಟಿಕ್‌ಟಾಕ್‌ನಲ್ಲಿ ದಲಿಲಮೌಹಿಬ್ ಅವರ ವೀಡಿಯೊವನ್ನು ೩ ಮಿಲಿಯನ್‌ಗಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top