fbpx
ಕ್ರಿಕೆಟ್

ಕಳೆದ 28ತಿಂಗಳಲ್ಲಿ ಕೋಹ್ಲಿ ಒಂದೇ ಒಂದು ಶತಕ ಹೊಡೆದಿಲ್ಲ. ಸಚಿನ್ ದಾಖಲೆ ಸನಿಹದಲ್ಲಿರುವ ಕೋಹ್ಲಿಗೆ ಇನ್ನೆಷ್ಟು ಶತಕ ಬೇಕು?

2008ರ ಆಗಸ್ಟ್ ತಿಂಗಳಲ್ಲಿ ಶ್ರೀಲಂಕಾ ವಿರುದ್ದ ದಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಚೊಚ್ಚಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ಪ್ರವೇಶ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕೊಹ್ಲಿ ತಿರುಗಿ ನೋಡಿದ್ದೇ ಇಲ್ಲ. ಇದೀಗ ವಿಶ್ವದ ಅತ್ಯುತ್ತಮ ಬ್ಯಾಟರ್ ಎಂದೇ ಕೋಹ್ಲಿ ಅವರನ್ನು ಪರಿಗಣಿಸಲಾಗಿದೆ. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್  ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯಲು ಕೊಹ್ಲಿ ಅವರೇ ಅರ್ಹರು ಎಂದು ಎಲ್ಲರೂ ನಂಬಿದ್ದರು. ಆದರೆ ಭರವಸೆಯ ಈ ಟೆಸ್ಟ್ ನಾಯಕ ತನ್ನ ದೇಶಕ್ಕಾಗಿ ಶತಕ ಗಳಿಸಿ 2  ವರ್ಷಗಳಿಗಿಂತ ಹೆಚ್ಚು ಕಳೆದಿದೆ.

ಚೊಚ್ಚಲ ಪಂದ್ಯದಿಂದ  ಹಿಡಿದು ಕೊಹ್ಲಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಗಳಿಸಿರುವ (ಟೆಸ್ಟ್ನಲ್ಲಿ 27 ಮತ್ತು ಏಕದಿನದಲ್ಲಿ 42) ಕೊಹ್ಲಿ ಲೀಲಾಜಾಲವಾಗಿ ಶತಕಗಳನ್ನು ಬಾರಿಸುವುತ್ತಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಶತಕ ಗಳಿಸಿಲ್ಲ. ಭಾರತ ಟೆಸ್ಟ್ ನಾಯಕನ ಮೇಲೆ ಒತ್ತಡ ಜಾಸ್ತಿಯಾಗಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. 2019 ರಲ್ಲಿ ಈಡನ್ ಗಾರ್ಡನ್ಸ್ನಲ್ಲಿ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಅವರು ಬಾರಿಸಿದ ಶತಕವೇ ಅವರ ಕೊನೆಯ ಶತಕವಾಗಿದೆ. ಆ ಪಂದ್ಯದಲ್ಲಿ ಅವರು 138 ರನ್ ಗಳಿಸಿದರು ಮತ್ತು ಪಿಂಕ್ ಬಾಲ್ ಟೆಸ್ಟ್ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯರಾಗಿದ್ದರು. ಆದರೆ ಸುಮಾರು 28  ತಿಂಗಳ ಕಾಲ ಶತಕ ವಂಚಿತರಾದ ನಂತರವೂ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಇನ್ನೂ ಪ್ರಭಾವಶಾಲಿಯಾಗಿದೆ.

ಕೊಹ್ಲಿಯ ಇತ್ತೀಚಿನ ಫಾರ್ಮ್ ಮತ್ತು ಎಲ್ಲಾ ಮೂರು ಮಾದರಿಯ ಕ್ರಿಕೆಟ್ನಲ್ಲಿನ ಸರಾಸರಿ ಟಿ-20 ವಿಶ್ವಕಪ್ ನಂತರ ಕೊಹ್ಲಿ ಏಕದಿನ ನಾಯಕತ್ವದಿಂದ ಕೆಳಗಿಳಿದರು ಆದರೆ ಅವರು ಸೀಮಿತ ಓವರ್ ಮಾದರಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದರು. ಪ್ರಸ್ತುತ ಟಿ-20ಯಲ್ಲಿ 23  ಇನ್ನಿಂಗ್ಸ್ ಆಡಿರುವ ಅವರು 59.76 ರ ಅದ್ಭುತ ಸರಾಸರಿ ಹೊಂದಿದ್ದಾರೆ. ಏಕದಿನ – ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಕೊನೆಯ ಶತಕವನ್ನು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದರು. ಅಲ್ಲಿ 114 ರನ್ ಗಳಿಸಿ ಅಜೇಯರಾಗಿ ಗಳಿಸಿದರು. ಸಚಿನ್ ತೆಂಡೂಲ್ಕರ್ ಅವರ ೪೯ ಶತಕಗಳ ದಾಖಲೆಗೆ ಕೊಹ್ಲಿ ಕೇವಲ 6 ಶತಕ ಹಿಂದಿದ್ದಾರೆ. ಆದರೆ42 ಶತಕ ಗಳಿಸಿರುವ ಕೋಹ್ಲಿ ಅವರು ಏಕದಿನ ಶತಕವಿಲ್ಲದೆ 28ತಿಂಗಳುಗಳನ್ನು ಕಳೆದಿರುವುದರಿಂದ ನಿಜಕ್ಕೂ ಬೇಸರದ ಸಂಗತಿ. ಕೊಹ್ಲಿ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ (2017 ಮತ್ತು 2018) ಆರು ಶತಕಗಳನ್ನು ಗಳಿಸಿದರು ಮತ್ತು 2019 ರಲ್ಲಿ ಮೂರು ಶತಕ ಗಳಿಸಿದ್ದರು. ಅವರು ಕೊನೆಯ ವರ್ಷದಲ್ಲಿ 43.26 ಸರಾಸರಿಯನ್ನು ಹೊಂದಿದ್ದಾರೆ. ಟೆಸ್ಟ್- ಬಾಂಗ್ಲಾದೇಶದ ವಿರುದ್ಧದ ಕೊನೆಯ ಟೆಸ್ಟ್ ನಿಂದ ಕೊಹ್ಲಿಯ ಬ್ಯಾಟಿಂಗ್‌ನಲ್ಲಿ ದೊಡ್ಡ ಪ್ರಭಾವ ಅಥವಾ ಹೊಡೆತಗಳು ಕಾಣಸಿಕ್ಕಿಲ್ಲ. 12 ಪಂದ್ಯಗಳ 21 ಇನ್ನಿಂಗ್ಸ್ಗಳಲ್ಲಿ 28.15 ಸರಾಸರಿಯೊಂದಿಗೆ 563 ರನ್ ಗಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top