fbpx
ಸಮಾಚಾರ

ಹೆಂಡತಿಗೆ ಸೆಲ್ಫಿ ಕಳುಹಿಸಿ ಸೀಕ್ರೆಟ್ ಬಿಟ್ಟು ಕೊಟ್ಟ ಪತಿರಾಯ!

ಹೆಂಡತಿಗೆ ಸೆಲ್ಫಿ ಕಳಿಸಲು ಹೋಗಿ ತನ್ನ ಅಕ್ರಮ ಸಂಬಂಧದ ಬಗ್ಗೆ ಹೆಂಡತಿಗೆ ಕ್ಲೂ ಕೊಟ್ಟ ಗಂಡನ ಕರುಣಾಜನಕ ಕಥೆ ಇದು. ನಿಮಗೂ ಎಲ್ಲಾದರೂ ಈ ರೀತಿ ಸ್ಟೆಪ್ನಿ ಇದ್ರೆ ನೀವಂತೂ ಮಿಸ್ ಮಾಡದೆ ಈ ಸ್ಟೋರಿ ಓದಲೇಬೇಕು. ಗಂಡ ಕಳಿಸಿದ ಸೆಲ್ಫಿಯಿಂದಲೇ ಅವನೀಗ ಹಾದಿ ತಪ್ಪಿ ಬೇರೆಯವರ ಇನಿಯನಾಗಿದ್ದಾನೆ ಎಂದು ವಾಸನೆ ಹಿಡಿದ ಚಾಲಕಿ ಹೆಂಡತಿಯ ಬಗ್ಗೆ ನಿಮಗೇನನಿಸುತ್ತದೆ ಎಂದು ಈ ಸ್ಟೋರಿ ಓದಿದ ಬಳಿಕ ಪ್ರತಿಕ್ರಿಯಿಸಿ. ಪ್ರವಾಸದಲ್ಲಿದ್ದ ತನ್ನ ಪತಿ ತನ್ನ ಬಳಿ “ನನ್ನ ಕೋಟ್ ಹೆಗಿದೆ?” ಅಂತ ಕೇಳಿ ಹಂಚಿಕೊಂಡಿದ್ದ ಫೋಟೋ ಇದು. ಈ ಫೋಟೋದಿಂದಾಗಿ ನಾನವನಿಗೆ ಅಕ್ರಮ ಸಂಬಂಧವಿದೆ ಎಂದು ಕಂಡು ಹಿಡಿದೆ. ನೀವೂ ಇದನ್ನು ಕಂಡು ಹಿಡಿಯಬಲ್ಲಿರೇ? ಎಂದು ಮಹಿಳೆಯೊಬ್ಬಳು ತನ್ನ ಫಾಲೋವರ್ಸ್ಗಳನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಅನೇಕರು ಈ ಫೋಟೋದಲ್ಲಿರುವ ಕೆಲವು ಕ್ಲೂಗಳನ್ನು ಹೇಳಿ ಗೆಸ್ ಮಾಡಿದ್ದಾರೆ. ಕನ್ನಡಿಯ ಎದುರು ಮಹಿಳೆಯರು ಬಳಸುವ ಹೇರ್ ಸ್ಟ್ರೈಘಟ್ನೆರ್ ಕಾಣ್ತಿದೆ. ಜೊತೆಗೆ ಫೋಟೋದಲ್ಲಿರುವ ವ್ಯಕ್ತಿಯ ಬೆರಳುಗಳಲ್ಲಿರುವ ಉಂಗುರ ಕಾಣೆಯಾಗಿದೆ. ಮಹಿಳೆಯರು ಬಳಸುವ ಬಾಡಿ ವಾರ್ಶ ಟೇಬಲ್ ಮೇಲಿದೆ, ಬಾಚಣಿಗೆ ಇದೆ ಅಂತ ಅನೇಕರು ಕಮೆಂಟ್ ಹಾಕಿದ್ದಾರೆ.

 

ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು ಹೇರ್ ಸ್ಟ್ರೈಘಟ್ನೆರ್ ಬೇಕೆಂದಾಗ ಮಾತ್ರ ಬಳಸಬಹುದು. ಇದನ್ನು ಎಲ್ಲಾ ಹೋಟೆಲ್‌ಗಳಲ್ಲಿ ಇಟ್ಟಿರುತ್ತಾರೆ ಇದು ಟೇಬಲ್ ಮೇಲೆ ಹೆಗೆ ಬಂತು ಅಂತ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಇದರ ಬಗ್ಗೆ ಇನ್ನಷ್ಟು ತನಿಖೆಯಾಗಬೇಕು ಎಂದಿದ್ದಾರೆ. ಅಂತಿಮವಾಗಿ ಇದೆಲ್ಲಾ ಹೇಗೆ ಗೊತ್ತಾಯಿತು ಎನ್ನುವ ಪ್ರಶ್ನೆಗೆ ಮಹಿಳೆಯೇ ಪ್ರತಿಕ್ರಿಯೆ ನೀಡಿ ಉತ್ತರಿಸಿದ್ದಾಳೆ. ಮೊದಲು ಹೇರ್ ಸ್ಟ್ರೈಘಟ್ನೆರ್ ಅನ್ನು ನೋಡಿದೆ. ಆ ಬಳಿಕ ನೆಲದ ಮೇಲಿರೋ ಹ್ಯಾಂಡ್ ಬ್ಯಾಗ್. ಆತನ ಬ್ಯಾಗ್ ಅಲ್ಲ ಎಂಬುದು ಗೊತ್ತಿದ್ದರಿಂದ ಅದರ ಬಗ್ಗೆ ಕೇಳಿದ್ದೆ. ಅದಕ್ಕವರು ಅದು ನನ್ನ ರೂಮೇ ಅಲ್ಲ ಎಂದು ಪ್ರತಿಕ್ರಿಯಿಸಿದ. ಬೇರೆಯವರ ರೂಮಿಗೆ ನೀನು ಯಾಕೆ ಹೋದೆ, ಅಲ್ಲಿ ನೀನ್ಯಾಕೆ ಸೆಲ್ಫಿ ತೆಗೆದುಕೊಂಡೆ ಎಂದು ಮರುಪ್ರಶ್ನೆ ಹಾಕಿದರೆ ಉತ್ತರಿಸಲೇ ಇಲ್ಲ, ಹಾಗಾಗಿ ದೂರವಾದೆ ಎಂದು ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಗಂಡ ಹೆಂಡತಿಯ ನಡುವೆ ಬರಬೇಕಾಗಿದ್ದು ನಂಬಿಕೆ. ಆ ನಂಬಿಕೆ ಇದ್ದರೆ ಇಂತಹದ್ದು ನಡೆಯಲಾರದು. ಆದರೆ ಅತಿಯಾದ ನಂಬಿಕೆಯೂ ಒಳ್ಳೆಯದಲ್ಲ ಎಂಬುದಕ್ಕೂ ಈ ಘಟನೆ ಸಿಂಕ್ ಆಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top