fbpx
ಸಮಾಚಾರ

“ಅವರ ಜಗಳದ ಮದ್ಯೆ ನಾನು ಬರೋದಿಲ್ಲ” ಅಜೇಯ್ ರಾವ್-ಪ್ರೊಡ್ಯುಸರ್ ಜಗಳದ ನಗ್ಗೆ ನಾಯಕಿ ರಚಿತಾ ಹೇಳಿದ್ದೇನು ಗೊತ್ತಾ?

ಅಜಯ್​ ರಾವ್ ಮತ್ತು ರಚಿತಾ ರಾಮ್​ ನಟನೆಯಲ್ಲಿ ಮೂಡಿಬಂದಿರುವ ‘ಲವ್ ಯೂ ರಚ್ಚು’ ಸಿನಿಮಾ ಇದೆ ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿದೆ. ಇದೆ ಅಂಗವಾಗಿ ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ಆದರೆ, ನಾಯಕ ಅಜಯ್​ ರಾವ್​ ಮಾತ್ರ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

ಚಿತ್ರದ ಕುರಿತಾದ ಸುದ್ದಿಗೋಷ್ಠಿಗೆ ನಾಯಕನೇ ಬರಲಿಲ್ಲ ಎಂದರೆ ಹೇಗೆ? ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಚಿತ್ರತಂಡದ ಜತೆಗೆ ಅಜಯ್ ರಾವ್ ಅವರಿಗೆ ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇಷ್ಟು ದಿನ ನಿರ್ಮಾಪಕ ಹಾಗೂ ನಟನ ಮುನಿಸಿನ ಹಿಂದೆ ನೂರೆಂಟು ಕಥೆಗಳು ಹುಟ್ಟಿಕೊಂಡಿತ್ತು.ಈ ಬಗ್ಗೆ ಅಜಯ್​ ರಾವ್​ ಸಹ “ನನಗೆ ನಿರ್ಮಾಪಕರು ಮೇಲೆ ಮನಸ್ತಾಪ ಇದೆ” ಎಂದು ಹೇಳಿದ್ದರು. ಇದೀಗ ಈ ಬಗ್ಗೆ ನಟಿ ರಚಿತಾ ರಾಮ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಚಿತಾ ರಾಮ್​, “ಅವರಿಬ್ಬರ ಜಗಳದ ಮಧ್ಯೆ ನಾನು ಬರಲ್ಲ. ಯಾಕಂದ್ರೆ ಇಬ್ಬರ ಜಗಳದಲ್ಲಿ ಮೂರನೇಯವರು ಎಂಟ್ರಿಯಾಗೊದು ತಪ್ಪು. ಆವರ ಜಗಳ ತಾನಾಗೆ ಸರಿ ಆಗಬೇಕು ಅಂದ್ರೆ ಸ್ವಲ್ಪ ಟೈಮ್​ ತಗೊಳತ್ತೆ. ಹಾಗಂತ ನಾನು ಈ ವಿಷಯದಲ್ಲಿ ಯಾರಿಗೂ ಸರ್ಪೋಟ್​ ಮಾಡಲ್ಲ. ಸತ್ಯ ಎಲ್ಲಿ ಇರುತ್ತೋ ನಾನು ಅದರ ಪರವಾಗಿ ಇರ್ತಿನಿ” ಎಂದು ರಚಿತಾ ರಾಮ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top