fbpx
ಸಮಾಚಾರ

ದೊಡ್ಮನೆಯ ದೊಡ್ಡತನ: ಪುನೀತ್ ಡೈರಿ ನೋಡಿ ಅಪ್ಪು ಪಡೆದಿದ್ದ 2.5 ಕೋಟಿ ಹಣ ಹಿಂದಿರುಗಿಸಿದ ಅಶ್ವಿನಿ ಪುನೀತ್​

ಕನ್ನಡದ ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಅವರು ಇಲ್ಲ ಎಂಬ ವಿಚಾರ ಅರಗಿಸಿಕೊಳ್ಳಲು ಇಡೀ ಕರ್ನಾಟಕಕ್ಕೆ ಸಾಧ್ಯವಾಗುತ್ತಿಲ್ಲ. ಅವರ ಫ್ಯಾಮಿಲಿ ಇನ್ನೂ ಆ ನೋವಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ, ಇತಂಹ ಸಮಯದಲ್ಲಿ ಆ ದೊಡ್ಮನೆ ಸೊಸೆಯ ದೊಡ್ಡ ಮನಸ್ಸು ಮಾಡಿರುವ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಪ್ಪು ಅವರಂತೆ ನೀವು ಮೇಡಂ ನಿಮಗೆ ಒಂದು ಸಲಾಂ ಅಂತ ಅಶ್ವಿನಿ ರಾಜ್​ಕುಮಾರ್ ಅವರಿಗೆ ಫ್ಯಾನ್ಸ್​ ಹೇಳುತ್ತಿದ್ದಾರೆ.

ಪುನೀತ್​​ ರಾಜ್​ಕುಮಾರ್​ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಸುಮಾರು ಸಿನಿಮಾಗಳಿಗೆ ಅಪ್ಪು ಕಾಲ್​ ಶೀಟ್​ ಕೊಟ್ಟಿದ್ರು. ಯಾವುದೇ ನಿರ್ಮಾಪಕರ ಹತ್ತಿರ ಅಡ್ವಾನ್ಸ್​​ ಪೇಮೆಂಟ್​​ಗಳನ್ನ ತೆಗೆದುಕೊಂಡ್ರು, ಅದನ್ನ ಒಂದು ಡೈರಿಯಲ್ಲಿ ಬರೆಯುವ ಅಭ್ಯಾಸವಿತ್ತು. ಹಾಗೇ ಒಬ್ಬ ನಿರ್ಮಾಪಕರ ಬಳಿ ಸಿನಿಮಾಕ್ಕಾಗಿ ಅಡ್ವಾನ್ಸ್​​ ಪೇಮೆಂಟ್ ಎಂದು​ ಎರಡೂವರೆ ಕೋಟಿ ತೆಗೆದುಕೊಂಡಿರೋದನ್ನು ಅಪ್ಪು ಆ ಡೈರಿಯಲ್ಲಿ ಬರೆದಿಟ್ಟಿದ್ದರು. ಈಗ ಅದನ್ನು ನೋಡಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​​, ಆ ನಿರ್ಮಾಪಕರಿಗೆ ಎರಡೂವರೆ ಕೋಟಿ ಹಣವನ್ನು ಹಿಂದಿರುಗಿಸಲು ಮುಂದಾಗಿದ್ದಾರೆ ಅಂತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ವೊಂದು ವೈರಲ್​ ಆಗ್ತಿದೆ.

 

 

ಈ ಬಗ್ಗೆ ಹಿರಿಯ ಪತ್ರಕರ್ತ ಶಶಿಧರ್​ ಭಟ್​ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ‘ಅವರು ಕನ್ನಡ ಸಿನಿಮಾ ನಿರ್ಮಾಪಕರು. ಅವರು ನನ್ನ ಪಕ್ಕ ಕುಳಿತಿದ್ದರು. ಆಗ ಅವರಿಗೆ ದೂರವಾಣಿ ಕರೆಯೊಂದು ಬಂತು. ದೂರವಾಣಿ ಕರೆ ಮಾಡಿದವರು, ‘ಪುನೀತ್​ ತಮ್ಮ ಡೈರಿಯಲ್ಲಿ ಬರೆದಿದ್ದಾರೆ. ನಿಮ್ಮಿಂದ ಸಿನಿಮಾ ಒಂದರ ಮುಂಗಡವಾಗಿ 2.50 ಕೋಟಿ ಪಡೆದಿದ್ದರಂತೆ. ನಾಳೆ ನೀವು ಮನೆಗೆ ಬಂದು ಈ ಹಣವನ್ನು ಪಡೆದುಕೊಂಡು ಹೋಗಿ’ ಎಂದರು ಆ ಮಹಿಳೆ. ಹೀಗೆ ಹೇಳಿದ‌ ಮಹಿಳೆ ಅಶ್ವಿನಿ ಪುನೀತ್ ರಾಜ್​ಕುಮಾರ್. ಇದು ಪ್ರಾಮಾಣಿಕತೆ. ಕನ್ನಡದ ಜನ ಈ ಕುಟುಂಬವನ್ನು ಪ್ರೀತಿಸುವುದು ಈ ಕಾರಣಕ್ಕಾಗಿ. ಕನ್ನಡಿಗರ ಆರಾಧ್ಯ ದೈವ ರಾಜ್ ಕುಟುಂಬ ಇರುವುದೇ ಹೀಗೆ’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ನಿರ್ಮಾಪಕರ ಹೆಸರನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top