fbpx
ಸಮಾಚಾರ

“ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ತುಂಬಾ ಕಷ್ಟ” ಯುವರತ್ನ ನಟಿ ಹೇಳಿದ್ದೇನು

ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ನಾಯಕಿಯಾಗಿ ನಟಿಸಿದ್ದ ನಟಿ ಸಾಯೇಷಾ ಸೈಗಲ್ ಅವರು ಈ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳು ಹುಟ್ಟಿದ ನಂತರ ತೂಕ ಇಳಿಸಿಕೊಂಡಿದ್ದಾರೆ. ತಾವು ವೇಟ್‍ ಲಾಸ್ ಮಾಡಲು ಪಟ್ಟಿರುವ ಕಷ್ಟದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಹೆರಿಗೆಯ ನಂತರ ದೇಹದಲ್ಲಿ ನಾನಾ ಬದಲಾವಣೆಗಳಾಗುತ್ತವೆ. ಬೊಜ್ಜು ಬೆಳೆಯುವ ಮೂಲಕ ದೇಹ ಗಾತ್ರ ಹೆಚ್ಚಾಗುತ್ತದೆ. ಅನೇಕ ಮಹಿಳೆಯರು ಯೋಗ, ಜಿಮ್ ಮುಂತಾದ ಮಾರ್ಗಗಳ ಮೂಲಕ ದೇಹದ ತೂಕ ಇಳಿಸಿಕೊಳ್ಳುತ್ತಾರೆ. ಇದೀಗ ಅದೇ ರೀತಿ ಯುವರತ್ನ ನಟಿ ಸುಯೆಶಾ ಕೂಡ ಜಿಮ್ ಮಾಡಿ ದೇಹತೂಕ ಕಡಿಮೆ ಮಾಡಿಕೊಂಡಿದ್ದಾರೆ.

 

 

“ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ನೀವು ಅಂದುಕೊಂಡಷ್ಟು ಸುಲಭ ಅಲ್ಲ. ನೀವು ಸ್ಥಿರವಾಗಿದ್ದು, ಶ್ರದ್ಧೆಯಿಂದ ವರ್ಕೌಟ್‍ನತ್ತ ಗಮನ ಹರಿಸಿದ್ರೆ ತೂಕ ಇಳಿಸಿಕೊಳ್ಳಬಹುದು. ಪ್ರತಿ ಮಹಿಳೆಯು ಕೂಡ ಸುಂದರವಾಗಿರುತ್ತಾಳೆ. ಕೊಬ್ಬಿನಿಂದ ಕೂಡಿರುವ ನಮ್ಮ ದೇಹವನ್ನು ಸಣ್ಣವಾಗಿಸುವುದರ ಜೊತೆಗೆ ಆರೋಗ್ಯಕರವಾಗಿರೋದು ನಮ್ಮ ಗುರಿಯಾಗಿರಬೇಕು.. ಪ್ರತಿಯೊಬ್ಬ ವ್ಯಕ್ತಿಯ ದೇಹ, ಆರೋಗ್ಯ ಸ್ಥಿತಿ ಕೂಡ ವಿಭಿನ್ನವಾಗಿರುತ್ತದೆ. ಈ ಫೋಟೋ ಫಿಟ್ನೆಸ್ ಮತ್ತು ನನ್ನ ಲೈಫ್‍ಸ್ಟೈಲ್‍ನನ್ನು ತೋರಿಸಿಕೊಡುತ್ತದೆ. ಇದು ನನಗೆ ಖುಷಿ ಕೊಡುತ್ತದೆ” ಎಂದು ಸಾಯೇಷಾ ಸೈಗಲ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

2019ರಲ್ಲಿ ಸಯೇಷಾ ಹಾಗೂ ಆರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ನೆಟ್ಟಿಗರು ಇವರ ಪ್ರೀತಿ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು. ಇವರಿಬ್ಬರೂ ಜೋಡಿಯಾಗಿ ‘ಟೆಡ್ಡಿ’ ,’ಗಜನಿಕಾಂತ್’ ಮತ್ತು ‘ಕಾಪ್ಟನ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top