fbpx
ಸಮಾಚಾರ

ಗುಟ್ಟಾಗಿ ನಿಶ್ಚಿತಾರ್ಥ​ ಮಾಡಿಕೊಂಡ ಅದಿತಿ ಪ್ರಭುದೇವ? ಕನಸು ನನಸಾಯ್ತು ಎಂದ ನಟಿ

ಚಂದನವನದ ಅಂದದ ಹುಡುಗಿ, ದಾವಣಗೆರೆ ಬೆಡಗಿ ಪಡ್ಡೆಹುಡ್ಗರ ನಿದ್ದೆ ಕೆಡೆಸಿದ್ದ ನಟಿ ಅದಿತಿ ಪ್ರಭುದೇವ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಅವರು ಹುಡಗನೊಬ್ಬನ ಜತೆ ಇರುವ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಉಂಗುರ ಹೈಲೈಟ್​ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಹೇಳುತ್ತಿದ್ದಾರೆ.

`ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಅದಿತಿ ತಮ್ಮ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. ಅದಿತಿ ಈ ರೀತಿ ಫೋಟೋ, ಕ್ಯಾಪ್ಷನ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಲವ್ ಸಿಂಬಲ್, ಶುಭಾಶಯಗಳು, ಸೂಪರ್ ಜೋಡಿ, ನಿಮ್ಮನ್ನ ಮದುವೆಯಾಗುವ ಹುಡುಗನಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಈ ವಿಚಾರದ ಬಗ್ಗೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡಿದೆ ಮೌನಕ್ಕೆ ಶರಣಾಗಿದ್ದಾರೆ. ಈ ಮೂಲಕ ಅದಿತಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎಂಬ ಗುಸುಗುಸು ಆರಂಭವಾಗಿದೆ. ನಿಜಕ್ಕೂ ಅವರು ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರಾ ಎನ್ನುವ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top