fbpx
ಮನೋರಂಜನೆ

ವಿಷ್ಣುವರ್ಧನ್ ಮತ್ತು ಅನಿಲ್ ಕುಂಬ್ಳೆ ಸಂಬಂಧಿಕರಂತೆ: ಸರಿಗಮಪ ಶೋನಲ್ಲಿ ಕುತೂಹಲಕಾರಿ ವಿಚಾರ ಹಂಚಿಕೊಂಡ್ರು ಅನಿಲ್ ಕುಂಬ್ಳೆ

ಕನ್ನಡ ಚಿತ್ರರಂಗದ ಸಾಹಸಸಿಂಹ, ಮೇರು ನಟ ಡಾ. ವಿಷ್ಣುವರ್ಧನ್ ಮತ್ತು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಂಭಂದಿಕರಂತೆ. ಈ ವಿಚಾರವನ್ನು ನಾವ್ಯಾರೂ ಹೇಳಿದ್ದಲ್ಲ, ಬದಲಾಗಿ ಸ್ವತಃ ಅನಿಲ್ ಕುಂಬ್ಳೆ ಅವರೇ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಶೋನಲ್ಲಿ ಹೇಳಿದ್ದಾರೆ.

ಕ್ರಿಸ್ ಮಸ್ ವಾರಾಂತ್ಯದ ವಿಶೇಷ ಸಂಚಿಕೆಗೆ ಸರಿಗಮಪ ಕಾರ್ಯಕ್ರಮಕ್ಕೆ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಹಾಡುಗಳನ್ನು ಹಾಡುತ್ತಾ, ಅಲ್ಲಿನ ಸ್ಪರ್ಧಿಗಳು ಹಾಡುವ ಹಾಡುಗಳನ್ನ ರಂಜಿಸುತ್ತಾ ಪ್ರತಿಭೆಗಳಿಗೆ ಶಭಾಷ್ ಗಿರಿಯನ್ನು ನೀಡಿದರು. ಇದೆ ವೇಳೆ ಸಿನಿ ಜಗತ್ತಿನ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಜೊತೆಗಿರುವ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ. ಡಾ.ವಿಷ್ಣುವರ್ಧನ್ ಅವರು ಸ್ವಂತ ಅನಿಲ್ ಕುಂಬ್ಳೆ ಅವರ ತಾಯಿಯ ಕಸಿನ್ ಎಂಬ ವಿಚಾರವನ್ನು ಹಂಚಿಕೊಂಡರು.. ಕ್ರಿಕೆಟ್ ಕ್ಷೇತ್ರದಲ್ಲಿ ಅನಿಲ್ ಅವರ ಸಾಧನೆ ಕಂಡು ಅವರನ್ನು ಗೌರವಿಸಬೇಕೆಂದು ವಿಷ್ಣುವರ್ಧನ್ ಅವರು ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರಂತೆ. ಅನಿಲ್ ಅವರಿಗೆ ತಿಳಿಯದಂತೆ ಇಡೀ ಕುಟುಂಬದವರನ್ನು ಕರೆಯಿಸಿ ಎಲ್ಲರ ಎದುರು ಸನ್ಮಾನಿಸಿ ಗೌರವಿಸಿದ್ದರಂತೆ..

“ವಿಷ್ಣು ಅಂಕಲ್ ಕಾರ್ಯಕ್ರಮದಲ್ಲಿ ನನಗೆ ಒಂದು ಕ್ರಿಕೆಟ್ ಬ್ಯಾಟನ್ನು ಗಿಫ್ಟ್‌ ಆಗಿ ನೀಡಿದ್ದರು. ಈ ಬ್ಯಾಟ್ ಮೇಲೆ ಇಡೀ ಕುಟುಂಬಸ್ಥರು ಸಾಲುಗಳನ್ನು ಬರೆದು ಹಾರೈಸಿದ್ದಾರೆ. ಈದೆಲ್ಲಾ ಸಾಧ್ಯವಾಗಿದ್ದು ವಿಷ್ಣು ಅಂಕಲ್‌ ಅವರಿಂದ ಮಾತ್ರ ಈಗಲ್ಲೂ ನನ್ನ ಬಳಿ ಆ ಬ್ಯಾಟ್ ಇದೆ” ಎಂದು ಅನಿಲ್ ಕುಂಬ್ಳೆ ಖುಷಿಯಿಂದ ಹೇಳಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top