fbpx
ಸಮಾಚಾರ

ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲು

ಕೇವಲ ವಿವಾದಗಳ ಮೂಲಕ ಮುನ್ನಲೆ ಬಂದಿದ್ದ ಮಾಜಿ ಬಿಗ್ ಬಾಸ್ ಸ್ಪರ್ದಿ ಪ್ರಶಾಂರ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಮುಭಾವನೆ ಕೆರಳಿಸುವ ಪೋಸ್ಟ್​ ಹಾಕಿರುವ ಆರೋಪ ಪ್ರಶಾಂತ್ ಅವರ ಮೇಲಿದ್ದು ವಕೀಲ ಸಿ. ಲಕ್ಷ್ಮೀ ನಾರಾಯಣ ದೂರಿನ ಮೇರೆಗೆ ಎಫ್​ಐಆರ್​ ದಾಖಲು ಮಾಡಲಾಗಿದೆ. ಬೆಂಗಳೂರು ದಕ್ಷಿಣ ಸಿಇಎನ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

ಪ್ರಶಾಂತ್ ಸಂಬರಗಿ ಡಿಕೆಶಿ ಮತ್ತು ಡಿಕೆ ಸುರೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ಅವರನ್ನು ವಿರೋಧಿಸುವ ಭರದಲ್ಲಿ ಕೋಮು ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಲಕ್ಷ್ಮೀನಾರಾಯಣ್ ಎಂಬುವವರು ಸಂಬರಗಿ ವಿರುದ್ಧ ದಕ್ಷಿಣ ವಿಭಾಗ ಸೈಬರ್​​​ ಠಾಣೆಯಲ್ಲಿ ದೂರು ನೀಡಿದ್ಧರು.

 

 

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯ ಮಸೂದೆಯನ್ನು ಡಿ.ಕೆ. ಶಿವಕುಮಾರ್ ಅವರು ಹರಿದಿದ್ದರು. ಈ ಕುರಿತು ಸಂಬರಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಜೊತೆಗೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ಪೋಟೋ ಹಾಕಿ ಅವರ ತೇಜೋವಧೆ ಮಾಡುವ ಪೋಸ್ಟ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top