fbpx
ಸಮಾಚಾರ

ಡಿಸೆಂಬರ್ 29: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಡಿಸೆಂಬರ್ 29, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ 4:11 pm
ನಕ್ಷತ್ರ : ಸ್ವಾತಿ 2:38 am
ಯೋಗ : ಸುಕರ್ಮ 1:18 am
ಕರಣ : ವಿಷ್ಟಿ 4:11 pm ಬಾವ 3:00 am

Time to be Avoided
ರಾಹುಕಾಲ : 12:21 pm – 1:46 pm
ಯಮಗಂಡ : 8:08 am – 9:33 am
ದುರ್ಮುಹುರ್ತ : 11:59 am – 12:44 pm
ವಿಷ : 9:25 am – 10:55 am
ಗುಳಿಕ : 10:57 am – 12:21 pm

Good Time to be Used
ಅಮೃತಕಾಲ : 6:24 pm – 7:54 pm

Other Data
ಸೂರ್ಯೋದಯ : 6:40 am
ಸುರ್ಯಾಸ್ತಮಯ : 6:02 pm
ರವಿರಾಶಿ : ಧನುಸ್
ಚಂದ್ರರಾಶಿ : ತುಲ

 

 

 

ಆತ್ಮವಿಶ್ವಾಸದಿಂದ ಬಂದ ಸಮಸ್ಯೆಗಳನ್ನು ಎದುರಿಸುವಿರಿ. ದಂಪತಿಗಳ ನಡುವೆ ಇದ್ದ ಮನಸ್ತಾಪ ದೂರವಾಗಲಿದೆ. ಉತ್ತಮ ತಿಳುವಳಿಕೆ ಮತ್ತು ಹೊಂದಾಣಿಕೆಯಿಂದ ಜೀವನ ಸುಮಧುರವಾಗಲಿದೆ. ಮಿತ್ರರ ಪ್ರಶಂಸೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚು ಮಾಡುವುದು.

 

ಬಹಳ ದಿನಗಳಿಂದ ಬಾಕಿ ಇದ್ದ ಕೆಲಸಗಳು ವೇಗವಾಗಿ ಸಾಗಲಿವೆ. ಸಾಮಾಜಿಕ ಮನ್ನಣೆ, ಗೌರವ ಹೆಚ್ಚಲಿದೆ. ಕೊಟ್ಟ ಮಾತನ್ನು ನಡೆಸಿಕೊಳ್ಳಲು ಪರದಾಡುವಿರಿ. ಯಾರು ಏನೇ ಸಲಹೆ ಸೂಚನೆಗಳನ್ನು ಕೊಟ್ಟರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಸ್ವಂತ ವಿಚಾರ ಮಾಡುವುದನ್ನು ಕಲಿಯಿರಿ.

 

ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದರ ಕಡೆ ವಿಶೇಷ ಗಮನ ಕೊಡಿರಿ. ಮತ್ತೊಬ್ಬರ ಜವಾಬ್ದಾರಿಯನ್ನು ಹೊರುವಾಗ ಎಚ್ಚರದಿಂದಿರಿ. ಇಲ್ಲವಾದಲ್ಲಿ ನೀವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ. ವಿಶೇಷವಾಗಿ ಕುಲದೇವತಾರಾಧನೆ ಮಾಡುವುದರಿಂದ ಆಪತ್ತುಗಳು ದೂರವಾಗುವವು. ಛಲದಿಂದ ಗುರಿ ಮುಟ್ಟಲು ಯತ್ನಿಸಿರಿ.

 

ಹೊಂದಾಣಿಕೆ ಮನೋಭಾವವನ್ನು ರೂಢಿಸಿಕೊಳ್ಳಿರಿ. ಕೆಲವೊಮ್ಮೆ ಸನ್ನಿವೇಶಗಳು ನಿಮ್ಮ ವಿರುದ್ಧವಾಗುವುದು. ಅತಿಮುಖ್ಯ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಉತ್ತಮ.

 

 

ನಿಮ್ಮ ಬುದ್ಧಿವಂತಿಕೆ ಹಾಗೂ ಚಾಣಾಕ್ಷ ತನದಿಂದಾಗಿ ಶತ್ರುಗಳ ಪಿತೂರಿ ಬಯಲಾಗಲಿದೆ. ಮತ್ತಾರದೋ ತಂಟೆ ಬಗೆಹರಿಸಲು ಹೋಗಿ ನೀವು ಹಣ ಕಳೆದುಕೊಳ್ಳುವಿರಿ. ಬರಲಿರುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸುವಿರಿ.

 

 

ನಿಮ್ಮ ಆದರ್ಶಗಳು ನಿಮ್ಮ ಕಾರ್ಯಸಾಧನೆಗೆ ಮೆಟ್ಟಿಲುಗಳಾಗುವುದು. ಸಾಮಾಜಿಕ ಸ್ಥಾನಮಾನ, ಗೌರವ ಹೆಚ್ಚಾಗಲಿದೆ. ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮಗಿದೆ. ಪ್ರೀತಿಪಾತ್ರರು ನಿಮಗೆ ಸಮಯೋಚಿತ ಸಲಹೆ ನೀಡುವರು.

 

 

ಕುಲದೇವರಿಗೆ ಹೋಗಿ ಬರುವುದರಿಂದ ಕೆಲಸಗಳು ಸುಗಮವಾಗಿ ಸಾಗುವುದು. ಜೀವನದಲ್ಲಿ ಕಾಣಬೇಕೆಂದಿರುವ ಯಶಸ್ಸು ನಿಮ್ಮ ನಿಷ್ಠೆ ಹಾಗು ಪರಿಶ್ರಮದ ಮೇಲೆ ಅವಲಂಬಿಸಿದೆ. ಮನೆಯಲ್ಲಿನ ಖರ್ಚು-ವೆಚ್ಚಗಳ ಕಡೆ ಗಮನ ಕೊಡುವುದು ಒಳ್ಳೆಯದು.

 

 

ಯಾವುದೇ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳುವುದಕ್ಕಿಂತ ಮನೆಯವರೊಂದಿಗೆ ಚರ್ಚಿಸಿ ತೆಗೆದುಕೊಳ್ಳುವುದರಿಂದ ಮಾಡುವ ಕೆಲಸಕ್ಕೆ ಒಂದು ಉತ್ತಮ ರೂಪುರೇಷೆ ಬರಲಿದೆ.

ಅವಕಾಶಗಳು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರಲಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿರಿ. ನಿಮ್ಮ ಆಸೆ ಹಾಗೂ ಆಕಾಂಕ್ಷೆಗಳಿಗೆ ಪುಷ್ಟಿ ದೊರೆಯಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.

 

 

ನಿಮ್ಮ ಜವಾಬ್ದಾರಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುವುದು.ಮತ್ಯಾರದೋ ಒತ್ತಡಕ್ಕೆ ಒಳಗಾಗಿ ನಿಮ್ಮತನವನ್ನು ಕಳೆದುಕೊಳ್ಳದಿರಿ.

 

ಬಹಳ ಕಾಲದಿಂದ ಅಸಾಧ್ಯವಾಗಿದ್ದ ಕೆಲಸ ಮುಗಿಯಲಿದೆ. ನಿರುತ್ಸಾಹದಿಂದ ಏನೂ ಪ್ರಯೋಜನವಿಲ್ಲ. ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿರಿ. ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ.

 

ಅಪರೂಪದ ವ್ಯಕ್ತಿ ಪರಿಚಯದಿಂದಾಗಿ ನಿಮ್ಮ ಜೀವನದಲ್ಲಿ ಭಾರೀ ಬದಲಾವಣೆ ಕಂಡು ಬರುವುದು. ಆರ್ಥಿಕ ಸ್ಥಿತಿಗತಿಯಲ್ಲಿ ಅಲ್ಪ ಹಿನ್ನಡೆ ಕಂಡು ಬರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top