fbpx
ಸಮಾಚಾರ

ಅದಿತಿ ಪ್ರಭುದೇವ ನಿಶ್ಚಿತಾರ್ಥ​ ಮಾಡಿಕೊಂಡ ಹುಡುಗ ಯಾರು ಗೊತ್ತಾ? ಮದುವೆ ಯಾವಾಗ: ಇಲ್ಲಿದೆ ಮಾಹಿತಿ

ಚಂದನವನದ ಅಂದದ ಹುಡುಗಿ, ದಾವಣಗೆರೆ ಬೆಡಗಿ ಪಡ್ಡೆಹುಡ್ಗರ ನಿದ್ದೆ ಕೆಡೆಸಿದ್ದ ನಟಿ ಅದಿತಿ ಪ್ರಭುದೇವ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಅವರು ಹುಡಗನೊಬ್ಬನ ಜತೆ ಇರುವ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ಉಂಗುರ ಹೈಲೈಟ್​ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಹೇಳುತ್ತಿದ್ದಾರೆ.

`ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಅದಿತಿ ತಮ್ಮ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. ಅದಿತಿ ಈ ರೀತಿ ಫೋಟೋ, ಕ್ಯಾಪ್ಷನ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಲವ್ ಸಿಂಬಲ್, ಶುಭಾಶಯಗಳು, ಸೂಪರ್ ಜೋಡಿ, ನಿಮ್ಮನ್ನ ಮದುವೆಯಾಗುವ ಹುಡುಗನಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಅದಿತಿಯ ಕೈ ಹಿಡಿದ ಹುಡುಗ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆತನ ಹೆಸರು ‘ಯಶಸ್​’. ಕಾಫಿ ತೋಟದ ಮಾಲೀಕನಾದ ಯಶಸ್ ಚಿಕ್ಕಮಗಳೂರಿನ ಹುಡುಗ. ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಇವರು ಕೆಲ ದಿನಗಳ ಹಿಂದಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ರೈತನನ್ನೇ ಮದುವೆ ಆಗಬೇಕು ಅಂದುಕೊಂಡಿದ್ದ ಅದಿತಿ ಪ್ರಭುದೇವ ಕೂಡ ಅಂದುಕೊಂಡಂತೆ ರೈತನನ್ನೇ ಮದುವೆಯಾಗುತ್ತಿದ್ದಾರೆ. ಮದುವೆ ಆಗೋ ಹುಡುಗ ರೈತ ಅಂದ್ರೆ ಮೂಗು ಮುರಿಯುತ್ತಾ ತಾಂತ್ರಿಕ ಕೃತಕ ಜೀವನ ಬಯಸುತ್ತಿರುವಾಗ, ಒಬ್ಬ ಹೀರೋಯಿನ್ ಆದ್ರೂ ರೈತನನ್ನು ಮದುವೆಯಾಗುತ್ತಿರುವುದು ನಿಜಕ್ಕೂ ಎಲ್ಲರು ಮೆಚ್ಚಲೇ ಬೇಕಾದ ವಿಚಾರ.

ಮದುವೆ ಯಾವಾಗ?
“ಈ ಬಗ್ಗೆ ಹೆಚ್ಚಾಗಿ ಏನು ಹೇಳಲು ಇದು ಸಮಯ ಅಲ್ಲ. ಆದರೆ ಅವರೊಂದಿಗೆ ನಾನು ಕಮಿಟ್ ಆಗಿದ್ದೇನೆ. ಮದುವೆ ಬಗ್ಗೆ ಯೋಚಿಸಲು ಇನ್ನೂ ಸಾಕಷ್ಟು ಸಮಯ ಇದೆ. ಸದ್ಯಕ್ಕೆ ನಾನು ಅವರೊಂದಿಗೆ ಪ್ರೀತಿಯಲ್ಲಿ ಇದ್ದೇನೆ” ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top