ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಧ್ವಜಾರೋಹಣ ಮಾಡುವ ವೇಳೆ ಹಗ್ಗ ತುಂಡರಿಸಿ ಕಾಂಗ್ರೆಸ್ ಧ್ವಜ ಕೆಳಗೆ ಬಿದ್ದ ಘಟನೆ ನಡೆದಿದ್ದು ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕಿ ಪಕ್ಷದ 137 ನೇ ಸ್ಥಾಪನಾ ದಿನದಂದು ಧ್ವಜಾರೋಹಣ ಮಾಡಲು ತೆರಳಿದ್ದು ಧ್ವಜ ಧ್ವಜಸ್ಥಂಭದಿoದ ಕೆಳಕ್ಕೆ ಬಿದ್ದಿದೆ.
ಕಾಂಗ್ರೆಸ್ ಸಂಸ್ಥಾಪನಾ ದಿನ: ಸೋನಿಯಾ ಧ್ವಜಾರೋಹಣ ಮಾಡುವ ವೇಳೆ ಕೆಳಗೆ ಬಿದ್ದ ಕಾಂಗ್ರೆಸ್ ಧ್ವಜ pic.twitter.com/unp5wSslMe
— ಪರಣ್ಣ ಪತ್ತಾರ (@paranna88) December 28, 2021
“>
ದೆಹಲಿಯಲ್ಲಿ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸ್ವಲ್ಪ ಸಮಯಕ್ಕೆ ಮೊದಲು ಪಕ್ಷದ ಖಜಾಂಜಿ ಪವನ್ ಬನ್ಸಾಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ತ್ರಿವರ್ಣ ಧ್ವಜ ಹಿಡಿದು ಸೋನಿಯಾ ಪ್ರದರ್ಶನ ಮಾಡಿದ್ದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಈ ಧ್ವಜವನ್ನು ಮೇಲೇರಿಸಿದ್ದರು.
ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿರುವ ದೃಶ್ಯಾವಳಿಯ ವಿಡಿಯೋದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ಧ್ವಜಾ ರೋಹಣ ಮಾಡಲು ಸಹಾಯ ಮಾಡುತ್ತಾರೆ. ನೂರಾರು ಕಾರ್ಯಕರ್ತರು ನೋಡ ನೋಡುತ್ತಿದ್ದಂತೆ ಧ್ವಜ ಕಡಿದುಕೊಂಡು ಬೀಳುತ್ತದೆ. ಪಕ್ಷದ ಕಾರ್ಯಕರ್ತರು ಧ್ವಜವನ್ನು ಮತ್ತೆ ಏರಿಸಿ ಕಾರ್ಯಕ್ರಮವನ್ನು ಪುನರಾವರ್ತಿಸಿದರಂತೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ನ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
