fbpx
ಸಮಾಚಾರ

ಇನ್ಮುಂದೆ ರೈತರು ಮನೆಯಲ್ಲೇ ಕುಳಿತು ಬೆಳೆ ಸಮೀಕ್ಷೆ ಮಾಡಬಹುದು.

ಕೃಷಿ ಸಂಬಂಧಿತ  ಯಾವುದೇ ಯೋಜನೆಗಳನ್ನು ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ನಡೆಸುವುದು ಅತೀ ಮುಖ್ಯ. ಬೆಳೆ ಸಮೀಕ್ಷೆ ನಡೆಸದ ಹೊರತಾಗಿ ಯಾವುದೇ ಯೋಜನೆಗಳು ರೈತನ ಮನೆಯ ಬಾಗಿಲು ತಟ್ಟದು. ನೂರಾರು ಸಲ ಕಚೇರಿ ಅಲೆದು ಸಮಯ ವ್ಯರ್ಥಮಾಡಬೇಕಲ್ಲಾ ಇದಕ್ಕಾಗಿ ಎಂದು ಯೋಚಿಸುವ ರೈತರಿಗಾಗಿ ಇದೀಗ ಸರ್ಕಾರ ಹೊಸ ಆಪ್ ಬಿಡುಗಡೆಗೊಳಿಸಿದೆ. ರೈತರು ತಮ್ಮ ಸ್ವಂತ ಮೊಬೈಲ್ನಲ್ಲಿ  ಮನೆಯಲ್ಲಿ ಕುಳಿತು ತಮ್ಮ ಬೆಳೆಯ ಸಮೀಕ್ಷೆ ನಡೆಸಬಹುದಾಗಿದೆ. ಹೌದು ಇದೀಗ ಹಿಂಗಾರು ಬೆಳೆಗಳನ್ನು ಸಮೀಕ್ಷೆ ಮಾಡಲು ರೈತ ಕಚೇರಿ ಅಲೆಯಬೇಕಿಲ್ಲ, ಯಾವುದೇ ಅಧಿಕಾರಿಗಳನ್ನು ಕಾಯಬೇಕಿಲ್ಲ. ತಾನೇ ಸ್ವತಃ ತನ್ನ ಬೆಳೆಯ ಸಮೀಕ್ಷೆ ನಡೆಸಿ ಅದರಿಂದ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಆತ ಹೊಂದಿರಬೇಕಾಗಿದ್ದು ಕೇವಲ ಸ್ಮಾರ್ಟ್ ಫೊನ್ ಮಾತ್ರ.

ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ ಸೇರಿದಂತೆ ಹಲವು ಕೃಷಿ ಇಲಾಖೆಗಳ ಸಮೀಕ್ಷೆಗಳು ಇನ್ಮುಂದೆ ಇದೇ ಆಪ್ ಮೂಲಕ ನಡೆಯಲಿದೆ. ಪ್ರವಾಹ, ಬೆಳೆ ಹಾನಿ ಉಂಟಾದ ಸಂದರ್ಭದಲ್ಲಿ ಶೀಘ್ರವಾಗಿ ಅದರ ಸಮೀಕ್ಷೆ ಮಾಡಿ ಪರಿಹಾರ ಒದಗಿಸಲು ಸಹಾಯ ಮಾಡಬಲ್ಲದು. ತೋಟಗಾರಿಕಾ ಬೆಳೆಗಳ ನಿಯಮಕ್ಕನುಗುಣವಾಗಿ ಮತ್ತು ಇಲಾಖೆಯ ಷರತ್ತುಗಳನ್ವಯ ಬೆಳೆ ಪರಿಹಾರವನ್ನು ಒದಗಿಸಲಾಗುವುದು.

ಮೊಬೈಲ್ ಅಥವಾ ಆಪ್ ಬಗ್ಗೆ ಗೊತ್ತಿಲ್ಲದಿದ್ದರೆ? ಒಂದು ವೇಳೆ ನಿಮಗೆ ಆಪ್ ಬಗ್ಗೆ ಅಥವಾ ಆಪ್ ಉಪಯೋಗಿಸಲು ಗೊತ್ತಿಲ್ಲ ಅಂತಾದರೆ ಅದಕ್ಕಾಗಿ ನೇಮಕವಾದ ಇಲಾಖೆಯ ಅಧಿಕಾರಿಗಳ ಸಹಾಯವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆದುಕೊಳ್ಳಬಹುದು. ಅಧಿಕಾರಿಗಳನ್ನು ಸಂಪರ್ಕಿಸಲೂ ಬಹುದಾಗಿದೆ.

ಯಾವೆಲ್ಲಾ ಬೆಳೆಗಳನ್ನು ಅಪ್‌ಲೋಡ್ ಮಾಡಬಹುದು: ಹಣ್ಣಿನ ತೊಟ, ತರಕಾರಿ, ಹೂವು, ಔಷಧ ಹಾಗೂ ಸಾಂಬಾರು ಪದಾರ್ಥ, ಕೃಷಿ ಹಾಗೂ ರೇಷ್ಮೆ ಬೆಳೆಗಳು, ಬದುಗಳಲ್ಲಿ ನಾಟಿ ಮಾಡಿರುವ ಮರಗಳು, ಅರಣ್ಯ ಜಾತಿಯ ಕನಿಷ್ಠ 5 ಮರಗಳು ಮೇವು ಇತ್ಯಾದಿಗಳ ಫೋಟೋಗಳನ್ನು ಆಪ್‌ನಲ್ಲಿ ಅಪ್‌ಲೋಡ್ ಮಾಡಿ ಬೆಳೆ ಸಮೀಕ್ಷೆ ಮಾಡಬಹುದಾಗಿದೆ.

ಡೌನ್ಲೋಡ್ ಹೇಗೆ : 2021 ಹಿಂಗಾರು ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರ ನಿಯಮಗಳನ್ನು ಓದಿಕೊಂಡು ಫೋಟೋಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ಸಹಾಯವಾಣಿ ಬೆಳೆ ಸಮೀಕ್ಷೆ ಸಹಾಯವಾಣಿ 8448447715 ಗೆ ಕಾಲ್ ಮಾಡಿ ಸಹಾಯ ಪಡೆಯಬಹುದಾಗಿದೆ. ಜೊತೆಗೆ ಆಯಾ ತಾಲೂಕಿನ ಅಧಿಕಾರಿಗಲ ಸಹಾಯ ಪಡೆಯಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top