fbpx
ಸಮಾಚಾರ

ತಂಡದಿಂದ ಸ್ಥಾನ ಕಳೆದುಕೊಳ್ಳುವ ಆತಂಕ; ಎಚ್ಚರಿಕೆಯ ಬ್ಯಾಟಿಂಗ್​ಗೆ ರಹಾನೆ ಹಿಡಿದ ದಾರಿ ಯಾವುದು ಗೊತ್ತಾ? ವಿಡಿಯೋ ವೈರಲ್

ಟೀಮ್ ಇಂಡಿಯಾ ಟೆಸ್ಟ್ ಆಟಗಾರ ಅಜಿಂಕ್ಯ ರಹಾನೆಗೆ ಇದು ವೃತ್ತಿ ಜೀವನದಲ್ಲಿ ಅತ್ಯಂತ ಕೆಟ್ಟ ಕಾಲ ಎಂದು ಹೇಳಬಹುದು. ಏಕೆಂದರೆ ಸತತ ವೈಫಲ್ಯದಿಂದ ಫಾರ್ಮ್ ಕಳೆದುಕೊಂಡಿರುವ ರಹಾನೆ ಇತ್ತೀಚಿಗೆ ತಮ್ಮ ಉಪನಾಯಕ ಪಟ್ಟವನ್ನು ಕಳೆದುಕೊಂಡರು. ಅಷ್ಟೇ ಅಲ್ಲದೆ ಯ್ವ ಆಟಗಾರರ ಅತ್ಯತ್ತಮ ಪ್ರದರ್ಶನ ನೀಡುತ್ತಿರುವುದು ರಹನೆಯವರ ಸ್ಥಾನಕ್ಕೆ ಕುತ್ತು ತಂದಿದೆ. ಹಾಗಾಗಿಯೇ ರಹಾನೆಯವರಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಹತ್ವದ್ದಾಗಿದೆ.

 

 

ಟೀಕಾಕಾರರ ಬಾಯಿಗೆ ಆಹಾರವಾಗಿರುವ ಟೀಂ ಇಂಡಿಯಾ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಲೇಬೇಕೆಂಬ ಪಣತೊಟ್ಟಿದ್ದರು. ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ತನ್ನ ಸ್ಥಾನ ಉಳಿಸುಕೊಳ್ಳುವಲ್ಲಿ ರಹಾನೆ ಇನ್ನಿಂಗ್ಸ್ ಬಹಳ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಪ್ರತಿ ಎಸೆತವನ್ನ ಅತ್ಯಂತ ಜಾಗರೂಕತೆಯಿಂದ ಎದುರಿಸುತ್ತಿದ್ದ ಅಜಿಂಕ್ಯ ರಹಾನೆ ” ವಾಚ್ ದಿ ಬಾಲ್” ಎಂದು ತಮ್ಮಲ್ಲೇ ಗೊಣಗುತ್ತಿದ್ದರು.

ಬಾಲ್ ನೋಡಿ ನಂತರ ಅದನ್ನು ಹೊಡಿ
ಸೆಂಚುರಿಯನ್ ಟೆಸ್ಟ್‌ನ ಮೊದಲ ದಿನದಂದು ರಹಾನೆ ಬ್ಯಾಟಿಂಗ್ ಮಾಡುತ್ತಿರುವ ಕಿರು ಕ್ಲಿಪ್ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ಚೆಂಡನ್ನು ಮೊದಲು ನೋಡಿ ನಂತರ ಅದನ್ನು ಹೊಡಿ ಎಂದು ನಿರಂತರವಾಗಿ ಗೊಣಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಂದಹಾಗೆ ರಹಾನೆಯವರು 102 ಎಸೆತಗಳನ್ನ ಎದುರಿಸಿದ ಅಜಿಂಕ್ಯಾ 9 ಸೊಗಸಾದ ಬೌಂಡರಿಗಳ ಜೊತೆಗೆ 48 ರನ್ ಕಲೆಹಾಕಿ ಔಟ್ ಆಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top