fbpx
ಭವಿಷ್ಯ

ಡಿಸೆಂಬರ್ 31: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಡಿಸೆಂಬರ್ 31, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಮಾರ್ದಶಿರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದ್ವಾದಶೀ 10:39 am
ನಕ್ಷತ್ರ : ಅನುರಾಧ 10:04 pm
ಯೋಗ : ಶೂಲ 6:00 pm
ಕರಣ : ತೈತುಲ 10:39 am ಗರಿಜ 9:00 pm

Time to be Avoided
ರಾಹುಕಾಲ : 10:58 am – 12:22 pm
ಯಮಗಂಡ : 3:11 pm – 4:35 pm
ದುರ್ಮುಹುರ್ತ : 9:00 am – 9:45 am, 12:45 pm – 1:30 pm
ವಿಷ : 3:01 am – 4:26 am
ಗುಳಿಕ : 8:09 am – 9:33 am

Good Time to be Used
ಅಮೃತಕಾಲ : 12:45 pm – 2:11 pm
ಅಭಿಜಿತ್ : 12:00 pm – 12:45 pm

Other Data
ಸೂರ್ಯೋದಯ : 6:41 am
ಸುರ್ಯಾಸ್ತಮಯ : 6:04 pm
ರವಿರಾಶಿ : ಧನುಸ್
ಚಂದ್ರರಾಶಿ : ವೃಶ್ಚಿಕ

 

ಹಿರಿಯರ ಆರೋಗ್ಯದತ್ತ ಗಮನವಿರಲಿ. ಬಂಧು ಬಾಂಧವರೊಂದಿಗೆ ಹಿತಮಿತವಾಗಿ ಮಾತನಾಡಿ ದೂರದೃಷ್ಟಿಯಿಂದ ಹಮ್ಮಿಕೊಳ್ಳುವ ಕೆಲಸಗಳಿಗೆ ಸ್ನೇಹಿತರಿಂದ ಬೆಂಬಲ ವ್ಯಕ್ತವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿರಿ. ನಿಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಹಣವೂ ಕೀರ್ತಿಯನ್ನು ಹಿಂಬಾಲಿಸಿ ಬರುವುದು.

ನೀವು ಹಿಡಿದ ಹಾದಿ ಸತ್ಯವಾದುದು. ಈ ಬಗ್ಗೆ ಯಾರೂ ನಿಮ್ಮ ಬಗ್ಗೆ ದೂರುವುದಿಲ್ಲ. ನ್ಯಾಯೋಚಿತವಾದ ಮಾರ್ಗವು ಯಾವಾಗಲು ಪ್ರಶಂಸೆಗೆ ಒಳಗಾಗುವುದು. ಎಲ್ಲವೂ ನೀವು ನಂಬಿದ ದೈವದ ಕೃಪೆಯಾಗಿರುವುದು.

ನಿಮ್ಮನ್ನು ನೀವು ಮಾತಿನ ಬಲದಿಂದ ಗೆಲ್ಲಿಸಿಕೊಳ್ಳಬಹುದಾದರು ಅತಿಯಾದ ಮಾತು ಸಮಸ್ಯೆಯನ್ನು ತಂದೊಡ್ಡುವುದು. ಅತಿಯಾದ ಮಾತಿನಿಂದ ಸ್ನೇಹಿತರೊಂದಿಗೆ ವಿರಸ ಉಂಟಾಗುವುದು. ಆಂಜನೇಯ ಸ್ತೋತ್ರ ಪಠಿಸಿ.

 

ಜನರನ್ನು ಪ್ರೀತಿಸಲು ಕಲಿಯಿರಿ. ಇದು ನಿಮಗೆ ಕಷ್ಟದ ವಿಷಯವಂತೂ ಅಲ್ಲ. ಇದರಿಂದ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನೀವು ಗುರುತಿಸುಲ್ಪಡುವಿರಿ. ನೆರೆಹೊರೆಯವರೊಡನೆ ಜಗಳ ಮನಸ್ತಾಪಗಳು ಬೇಡ.

 

ಮಾತುಮಾತಿಗೂ ನಿಮ್ಮ ಯಶಸ್ಸಿನ ಬಗ್ಗೆ ಜಂಭ ಕೊಚ್ಚಿಕೊಳ್ಳುವುದು ಬೇಡ. ಅತಿಯಾದದ್ದು ಎಲ್ಲವೂ ವಿಷವಾಗುವ ಸಂದರ್ಭವಿರುವುದು. ನಿಮ್ಮ ಜಾಣ್ಮೆಯ ಬಗ್ಗೆ ಜನರಿಗೆ ಅರಿವಿದೆ. ಅದನ್ನು ಪದೇ ಪದೇ ನಿರೂಪಿಸುವ ಅಗತ್ಯವಿಲ್ಲ.

 

ಹಾಸಿಗೆ ಇದ್ದಷ್ಟೆ ಕಾಲು ಚಾಚುವುದು ಸದಾ ಕ್ಷೇಮ. ಹಾಗಾಗಿ ಇಂದು ನೀವು ನಿಮ್ಮ ಇತಿಮಿತಿಗಳನ್ನು ಅರಿತು ಕುಟುಂಬದ ಸದಸ್ಯರೊಡನೆ ಸಮಾಲೋಚಿಸಿ. ಬಾಯಿ ತಪ್ಪಿ ಆಡಿದ ಮಾತು ನಿಮ್ಮ ಗೌರವಕ್ಕೆ ಚ್ಯುತಿ ತರುವುದು.

 

ಎದುರಾಳಿಯ ಬಲಾಬಲ ತಿಳಿದು ಹೋರಾಡಿದಲ್ಲಿ ನೀವು ಯಶಸ್ಸನ್ನು ಹೊಂದುವಿರಿ. ಈ ಬಗ್ಗೆ ಸ್ವಲ್ಪ ಉದಾಸೀನ ತೋರಿದರೂ ಸಹ ಶತ್ರುವಿನ ಪ್ರಾಬಲ್ಯ ಜಾಸ್ತಿ ಆಗುವುದು. ಕೌಟುಂಬಿಕ ಜೀವನದಲ್ಲಿನ ಸಮಸ್ಯೆ ನಿವಾರಣೆಗಾಗಿ ಈಶ್ವರ ದೇವರ ಧ್ಯಾನ ಮಾಡಿ.

 

ಮಾತಿಗೂ ಕೃತಿಗೂ ಅಂತರವನ್ನು ಮಾಡದಿರಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಉಂಟಾಗುವ ಸಂಭವ ಹಾಗೂ ಹಳೆಯ ಗೆಳೆಯರ ಭೇಟಿ ಸಂಭವ ಇರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಹೊರಗಿನ ಜನರೆದುರು ನೀವು ಪ್ರತಿಭಾವಂತ ವ್ಯಕ್ತಿಯಾಗಿದ್ದಿರಿ. ಆದರೆ ಕೌಟುಂಬಿಕ ಜೀವನದಲ್ಲಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವಲ್ಲಿ ವಿಫಲರಾಗಿರುವಿರಿ. ಹಿರಿಯರ ಸಲಹೆ ಸಹಕಾರಗಳನ್ನು ಪಡೆಯಿರಿ. ಮತ್ತು ಅಹಂನಿಂದ ಹೊರಬನ್ನಿ.

 

ಉತ್ತಮವಾದುದನ್ನು ಕ್ಲಿಷ್ಟತೆ ಇದ್ದರು ಸರಳವಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನಿಮಗೆ ದಯಪಾಲಿಸಿರುವರು. ನಿಮ್ಮಿಂದ ಮಾರ್ಗದರ್ಶನ ಪಡೆದವರು ಇಂದು ನಿಮ್ಮನ್ನು ಕೊಂಡಾಡುವರು.

ಸಡ್ಡೆಯಿಂದ ಕಾಣುವವರನ್ನು ದ್ವೇಷಿಸಬೇಡಿ. ಅವರಿಂದಲೂ ಕೆಲವೊಮ್ಮೆ ಮಹತ್ತರ ಕೆಲಸಗಳು ಆಗುತ್ತವೆ. ಸಹೋದರರ ಸಂಗಡ ಮನಸ್ತಾಪ ಬೇಡ. ಆಂಜನೇಯ ಮಂತ್ರವನ್ನು ಪಠಿಸಿ. ಆಸ್ತಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top