ಕನ್ನಡದ ರಾಬರ್ಟ್ ಚಿತ್ರದ ‘ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ ‘ಕಣ್ಣೇ ಅದಿರಿಂದಿ’ ಸೇರಿದಂತೆ ಅನೇಕ ತೆಲುಗು ಹಾಡುಗಳ ಮೂಲಕ ಮನೆಮಾತಾಗಿದ್ದ ಆಂಧ್ರದ ಗ್ರಾಮೀಣ ಸೊಗಡಿನ ಗಾಯಕಿ ಮಂಗ್ಲಿ. ಸದ್ಯ ಅವರ ಅಭಿಮಾನಿ ಬಳಗ ಇನ್ನಷ್ಟು ಜಾಸ್ತಿ ಆಗಿದೆ ಎಂದು ಹೇಳಬಹುದು. ಅವರು ಹೋದಲೆಲ್ಲಾ ಅವರ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಲು ಹರಸಾಹಸ ಪಡುತ್ತಾರೆ. ಹೀಗೆ ಮಂಗ್ಲಿ ಅವರನ್ನು ಸೆಲ್ಫಿ ಕೇಳಿಕೊಂಡು ಬಂದ ಯುವಕರು ಕಿರಿಕ್ ಮಾಡಿದ್ದಾರೆ. ಗಾಯಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗೆ ಮಾಡಿದರವನ್ನು ಅಟ್ಟಾಡಿಸಿಕೊಂಡು ಹೋಗಿ ಗಾಯಕಿ ವಾರ್ನಿಂಗ್ ಕೊಟ್ಟಿದ್ದಾರೆ.
#SingerMangli has once again made headlines, she serious on people, who surrounded her for take selfies at a function. #Mangli#Prakasham #AndhraPradesh
pic.twitter.com/AKcXnxLbqn— Repeeatuu (@repeeatuu) December 28, 2021
ಮಂಗ್ಲಿ ಅವರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ಪಟ್ಟಣಕ್ಕೆ ಕಾರ್ಯಕ್ರಮ ನಿಮಿತ್ತ ತೆರಳಿದಾಗ ಮುಜುಗರದ ಪ್ರಸಂಗವೊಂದು ಜರುಗಿದೆ. ಕಾರ್ಯಕ್ರಮ ಮುಗಿಸಿ ಕಾರು ಹತ್ತಲು ಹೋಗುವಾಗ ಅಲ್ಲಿಯೇ ಇದ್ದ ಯುವಕರ ಗುಂಪು ಸೆಲ್ಫಿಗಾಗಿ ಮಂಗ್ಲಿ ಅವರನ್ನು ಸುತ್ತುವರಿದಿದ್ದಾರೆ. ಯುವಕರ ಗುಂಪು ತುಂಬಾ ಹತ್ತಿರಕ್ಕೆ ಬಂದಿದ್ದರಿಂದ ಅವರು ಮುಜುಗರಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲದೆ ಯುವಕರ ಅಸಭ್ಯ ವರ್ತನೆ ನೋಡಿ ತಾಳ್ಮೆ ಕಳೆದುಕೊಂಡ ಮಂಗಲಿ ಜೋರು ಧ್ವನಿಯಲ್ಲಿ ಕೂಗಾಡಿದ್ದಲ್ಲದೆ, ಕೈಯಿಂದ ಹೊಡೆಯಲು ಯತ್ನಿಸಿದ್ದಾರೆ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
