fbpx
ಸಮಾಚಾರ

ನೂರು ಜನರಿಗೆ ಒಟ್ಟು ₹10 ಲಕ್ಷ ಕೊಡ್ತಿದ್ದಾರೆ ವಿಜಯ್​ ದೇವರಕೊಂಡ: ನಿಮ್ಗೂ ಸಿಗುತ್ತೆ… ಹೀಗ್​ ಮಾಡಿ..

ಟಾಲಿವುಡ್‌ ನಟ ವಿಜಯ್ ದೇವರಕೊಂಡ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ 100 ಜನರಿಗೆ ತಲಾ ₹ 10 ಸಾವಿರ ಮೌಲ್ಯದ ಉಡುಗೊರೆ (ಅಥವಾ ಹಣ) ನೀಡುವುದಾಗಿ ಘೋಷಣೆ ಮಾಡಿದ್ದಾರೆ. ’ದೇವರು ಸಂತಾ’ ಹೆಸರಿನಲ್ಲಿ ₹ 10 ಲಕ್ಷ ಮೌಲ್ಯದ ಉಡುಗೊರೆ ನೀಡುತ್ತಿದ್ದಾರೆ.

ಈ ಬಗ್ಗೆ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಪೋಸ್ಟ್‌ ಮಾಡಿರುವ ಅವರು, ಯಾರು? ಹೇಗೆ? ಉಡುಗೊರೆ ಪಡೆಯಬಹುದು ಎಂಬ ಮಾಹಿತಿ ನೀಡಿದ್ದಾರೆ. ವಿಜಯ್‌ ದೇವರಕೊಂಡ ನಡೆಸುತ್ತಿರುವ ಬಟ್ಟೆ ಕಂಪೆನಿಯ ರೌಡಿ ಸಂಘದ 50 ಜನರಿಗೆ ಹಾಗೂ ಇತರೆ 50 ಮಂದಿ ಯಾರಿಗೆ ಬೇಕಾದರೂ ಜನರಿಗೆ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.ಜನವರಿ 1ರಂದು ಗಿಫ್ಟ್‌ ಅನ್ನು ವಿಜಯ್‌ ದೇವರಕೊಂಡ ಅವರೇ ನೀಡಲಿದ್ದಾರೆ ಎಂದು ಅವರ ಮ್ಯಾನೇಜರ್‌ ತಿಳಿಸಿದ್ದಾರೆ.

 

 

ನಟ ವಿಜಯ್‌ ದೇವರಕೊಂಡ ತಮ್ಮ ಟ್ವಿಟರ್‌ನಲ್ಲಿ, “ನನ್ನ ಇಲ್ಲಿಯವರೆಗಿನ ಪ್ರಯಾಣ ಮತ್ತು ನಾನು ಮಾಡಿದ ಹಣದಲ್ಲಿ ಸ್ವಲ್ಪ ನನ್ನ ಅಭಿಮಾನಿಗಳು ಮತ್ತು ಎಲ್ಲರ ಜೊತೆ ಈಗ ಹಂಚಿಕೊಳ್ಳುತ್ತಿದ್ದೇನೆ. 1 ಮಿಲಿಯನ್‌ ಕೊಡುಗೆ ನೀಡಲಿದ್ದೇನೆ. ಇದಕ್ಕೆ, ನೀವು ಒಂದು ಸಾಂಟಾ ಆಗಿ, ಯಾರೋ ಒಬ್ಬರಿಗೆ ನಾನು 10,000 ರೂ. ಉಡುಗೊರೆಯಾಗಿ ನೀಡಲು ಕಾರಣ ಹೇಳಿ ಬರೆದು ನನಗೆ ತಿಳಿಸಿ. ಹಾಗೆ, ಬಂದ ಹೆಸರುಗಳಲ್ಲಿ 100 ಹೆಸರುಗಳನ್ನು ಆಯ್ಕೆ ಮಾಡಿ ಜನವರಿ 1 ರಂದು ಪ್ರಕಟಿಸಿ ಆ ವ್ಯಕ್ತಿಗಳಿಗೆ ನಾನು ಒಬ್ಬೊಬ್ಬರಿಗೆ ತಲಾ 10,000 ರೂ. ಕೊಡುತ್ತೇನೆ.” ಎಂದು. ಒಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

ನೀವು ಗಿಫ್ಟ್ ಪಡೆಯಬಹುದು:
ಈ ಉಡುಗೊರೆ ಪಡೆಯಲು ಜನರು ತಮಗೆ ಹಣ ಯಾಕೆ ಬೇಕು? ಅದರ ಅವಶ್ಯಕತೆ ಏನು? ಎಂಬುದನ್ನು ಬರೆದು ತಿಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಅವರ ಖಾತೆಯ ಮೂಲಕವಾದರೂ ಬರೆದು ತಿಳಿಸಬಹುದಾಗಿದೆ. ಆಯ್ದ ನೂರು ಜನರಿಗೆ ಗಿಫ್ಟ್‌ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.ವಿಜಯ್‌ ಅವರು ಉಡುಗೊರೆಯನ್ನು ವಸ್ತು ಅಥವಾ ಹಣದ ರೂಪದಲ್ಲಿ ನೀಡಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top