ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಜನವರಿ 9 ರಿಂದ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಇನ್ನು, ಮೇಕೆದಾಟು ಪಾದಯಾತ್ರೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದು, ಚಿತ್ರರಂಗದ ಬೆಂಬಲ ಕೋರಿದ್ದಾರೆ.
ಈ ವೇಳೆ ಮನವಿ ಪತ್ರದ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಡಿ.ಕೆ.ಶಿವಕುಮಾರ್ ಆಹ್ವಾನಿಸಿ ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ಬಳಿಕ ಮಾತನಾಡಿದ ಡಿಕೆಎಸ್, ಈ ಹೋರಾಟ ಯಾವುದೇ ಪಕ್ಷಕ್ಕಾಗಲಿ ಮತ್ತು ವ್ಯಕ್ತಿಗಾಗಲಿ ಸೇರಿದ್ದಲ್ಲ, ಇದು ನಮ್ಮ ಹಕ್ಕಿನ ಹೋರಾಟ. ಮೇಕೆದಾಟು ನಮ್ಮ ಹಕ್ಕು ಅದನ್ನು ದಕ್ಕಿಸಿಕೊಳ್ಳೋದಿಕ್ಕೆ ಈ ಪಾದಯಾತ್ರೆ ಮಾಡ್ತಿದ್ದೇವೆ. ಹಾಗಾಗಿ ಚಿತ್ರರಂಗದ ಎಲ್ಲರೂ ಇದರಲ್ಲಿ ಒಕ್ಕೊರಲಿನಿಂದ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.
‘ಚಿತ್ರೋದ್ಯಮಕ್ಕೆ ವಾಣಿಜ್ಯ ಮಂಡಳಿಯೇ ಬೇರು. ಕಲಾವಿದರು, ನಿರ್ಮಾಪಕರು, ಪ್ರದರ್ಶಕರು ಎಲ್ಲರೂ ಇಲ್ಲಿಯೇ ಬಂದು ನ್ಯಾಯ ಕೇಳಬೇಕು. ಸುದೀಪ್, ಶಿವರಾಜ್ಕುಮಾರ್, ಯಶ್, ದರ್ಶನ್ ಸೇರಿದಂತೆ ಎಲ್ಲ ನಟರಿಗೂ ವಾಣಿಜ್ಯ ಮಂಡಳಿ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಆದರೆ ಯಾರಿಗೂ ಬಲವಂತ ಮಾಡುವುದಿಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನು ಚಿತ್ರರಂಗರದ ಸ್ಟಾರ್ ನಟರಾದ ಶಿವಣ್ಣ, ಸುದೀಪ್, ಯಶ್, ಮತ್ತು ದರ್ಶನ್ ಅವ್ರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ತಾವು ಕನ್ನಡ ನಾಡು ನುಡಿಯ ಹೋರಾಟ ಅಂತಾ ಬಂದಾಗ ತಾವು ಸದಾ ಮುಂದೆ ನಿಂತು ಬೆಂಬಲ ನೀಡಿದ್ದೀರಾ. ಹಾಗೆಯೇ ಈ ಹೋರಾಟದಲ್ಲಿ ಕೂಡ ನೀವು ಭಾಗವಹಿಸಬೇಕು. ನಾನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲೇಬೇಕು ಅಂತಾ ಬಲವಂತ ಮಾಡೋಲ್ಲ, ಆದ್ರೆ ಮನವಿಯನ್ನ ಮಾಡ್ತೇನೆ. ಹೀಗಾಗಿ ಅವರು ಸೇರಿದಂತೆ ಈಡೀ ಚಿತ್ರರಂಗ ನಮ್ಮ ಹೋರಾಟದಲ್ಲಿ ಭಾಗವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
