fbpx
ಸಮಾಚಾರ

ಹೊಸ ವರ್ಷಕ್ಕೆ ಹೊಸ ಸಂತಸದ ಸುದ್ದಿ ಸ್ಟಾರ್ ನಿರ್ದೇಶಕ: ಮತ್ತೆ ಅಪ್ಪ ಆಗ್ತಿದ್ದಾರೆ ರಿಷಬ್ ಶೆಟ್ಟಿ

ಸ್ಯಾಂಡಲ್‍ವುಡ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಹೊಸ ವರ್ಷದ ಆರಂಭದಲ್ಲಿ ಅಭಿಮಾನಿಗಳ ಜೊತೆಗೆ ಒಂದು ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರ ಜೀವನದಲ್ಲಿ ಹೊಸ ಅತಿಥಿ ಆಗಮನವಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

 

 

ಹೊಸ ವರ್ಷಕ್ಕೆ ಹೊಸ ಸಂತಸವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ. ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು ಹಾಗೂ ಅವರ ಮುದ್ದಾದ ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರುತ್ತಿದ್ದಾರೆ.

ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು. 2019 ಏಪ್ರಿಲ್ 7 ರಂದು ರಿಶಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ರಣ್ವಿತ್ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top