fbpx
ಸಮಾಚಾರ

ಬುರ್ಖಾ ಧರಿಸಿ ಪ್ರೇಕ್ಷಕರ ಮಧ್ಯೆಯೇ ಕುಳಿತು ತಮ್ಮ ಸಿನಿಮಾ ವೀಕ್ಷಿಸಿದ ಸಾಯಿ ಪಲ್ಲವಿ: ವಿಡಿಯೋ ವೈರಲ್

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ನಟನೆಯ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಕಳೆದ ವಾರವಷ್ಟೇ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‘ಶ್ಯಾಮ್ ಸಿಂಗ ರಾಯ್’ ಚಿತ್ರದಲ್ಲಿ ರೋಸಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿರುವ ಸಾಯಿ ಪಲ್ಲವಿ ತಮ್ಮ ಗುರುತು ಮರೆಮಾಚಲು ‘ಬುರ್ಖಾ’ ಧರಿಸಿ ಹೈದರಾಬಾದ್‌ನ ಜನನಿಬಿಡ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದಾರೆ.

 

 

View this post on Instagram

 

A post shared by @filmy_ka_adda

 

‘ಶ್ಯಾಮ್ ಸಿಂಗ ರಾಯ್’ ನಲ್ಲಿನ ತನ್ನ ನೃತ್ಯ ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಹರ್ಷೋದ್ಗಾರ ಮಾಡುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ತುಂಬಾ ಜನಸಂದಣಿ ಇದ್ದರೂ ಸಿನಿಮಾ ನೋಡುತ್ತಿದ್ದ ಅವರನ್ನು ಯಾರೂ ಗುರುತಿಸಲಿಲ್ಲ. ಬುರ್ಖಾ ಧರಿಸಿಕೊಂಡು ಬಂದು ಸಿನಿಮಾ ನೋಡುತ್ತಿರುವ ಸಂಪೂರ್ಣ ವಿಡಿಯೋವನ್ನು ಫಿಲ್ಮಿ ಕಾ ಅಡ್ಡ ಎಂಬ ಇನ್ ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮನೆಗೆ ಹೋಗುವ ಮುನ್ನ ಬುರ್ಖಾದ ಮುಖಗವಚವನ್ನು ತೆರೆದು ಮುಖ ತೋರಿಸಿ ನಂತರ ತಮ್ಮ ಕಾರಿನಲ್ಲಿ ಹೋಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top