fbpx
ಸಮಾಚಾರ

ಪುನೀತ್ ನಿಧನದ ನಂತರ ಸಮಾಜದಲ್ಲಾದ ಹತ್ತು ಬದಲಾವಣೆಗಳು

ಪುನೀತ್​ ರಾಜ್​ಕುಮಾರ್​ ನಿಧನರಾಗಿ ಇಂದಿಗೆ ಎರಡು ತಿಂಗಳು ಕಳೆದು ಹೋಗಿದೆ. ಅವರ ಸ್ಮರಣಾರ್ಥ ಅನೇಕ ಕೆಲಸಗಳು ನಡೆಯುತ್ತಿವೆ. ಅವರು ಅನೇಕ ಸಮಾಜಮುಖಿ ಕೆಲಸಗಳಲ್ಲಿ ಕೂಡ  ತೊಡಗಿಕೊಂಡಿದ್ದರು. ಹಾಗಾಗಿ ಅವರು ಅಗಲಿಕೆ ಇಂದ  ಇಡೀ ಕರ್ನಾಟಕವೇ ಬೆಚ್ಚು ಬೀಳುವಂತೆ  ಆಯಿತು. ಅಪ್ಪು ವಿಧಿವಶರಾದ ಬಳಿಕ ಅನೇಕ ಘಟನೆಗಳು ನಡೆದವು.

1. ಹೃದಯದ ಬಗ್ಗೆ ಹೆಚ್ಚಿತು ಕಾಳಜಿ: ಫಿಟ್ನೆಸ್​ಗೆ ಒತ್ತು ನೀಡುತ್ತಿದ್ದ ಪುನೀತ್. ಆದರೆ ಫಿಟ್ನೆಸ್ ಮಾಡುವ  ಸಂದರ್ಭದಲ್ಲಿ ಅವರಿಗೆ  ಹೃದಯಾಘಾತ ಆಗಿದೆ ಎಂಬ ಸುದ್ದಿ ಕೇಳಿ ಎಲ್ಲರಿಗೂ ಬೆಚ್ಚು ಬೀಳುವಂತೆ ಆಯಿತು. ನಂತರ ಎಲ್ಲರಿಗೂ ಹೃದಯದ ಬಗ್ಗೆ ಕಾಳಜಿ ಹೆಚ್ಚಾಯಿತು. ಮುಖ್ಯವಾಗಿ ಯುವಕರು ಹೃದಯದ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಬಂದರು.

2. ನೇತ್ರದಾನ ಮಾಡುವವರ ಸಂಖ್ಯೆ ಏರಿಕೆ: ಪುನೀತ್ ರಾಜಕುಮಾರ್ ಅವರ  ಕಣ್ಣುಗಳನ್ನು ಎರಡು ಅಲ್ಲ ನಾಲಕ್ಕು ಜನರಿಗೆ  ದಾನ ಮಾಡುವ ಮೂಲಕ ಪುನೀತ್​ ರಾಜ್​ಕುಮಾರ್​ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರಿಂದ ಪ್ರೇರಣೆ ಪಡೆದು ಈಗ ಅನೇಕರು ರಾಜ್ಯದಲ್ಲಿ  ಜನರು ಅದರಿಂದ ಪ್ರಭಾವಿತರಾಗಿದ್ದಾರೆ. ಇದರ ಕಾರಣ ದಿಂದಲೇ  ಕರ್ನಾಟಕದಲ್ಲಿ ನೇತ್ರದಾನ ಏರಿಕೆಯಾಗಿದೆ.

3. ಫ್ಯಾನ್ಸ್​ ವಾರ್​ ಕೈಬಿಡಲು ನಿರ್ಧಾರ: ಚಿತ್ರರಂಗದಲ್ಲಿ ಸ್ಟಾರ್​ ಅಭಿಮಾನಿಗಳ ನಡುವೆ ಕಿತ್ತಾಟ  ಕಚ್ಚಾಟ ಇದ್ದೇ ಇರುತ್ತದೆ. ಆದರೆ ಪುನೀತ್​ ರಾಜಕುಮಾರ್ ಹಗಲಿದ ಬಳಿಕ ಎಲರಲ್ಲಿ ಈಗ  ಮನಪರಿವರ್ತನೆ ಆದಂತೆ ಆಗಿದೆ . ಜೀವನ ನಶ್ವರ ಎಂಬ ಭಾವ ಎಲ್ಲಾ ಅಭಿಮಾನಿಗಳನ್ನು ಆವರಿಸಿದೆ . ಇನ್ಮುಂದೆ ಸ್ಟಾರ್​ ವಾರ್​ ಬೇಡ ಎಂದು ಫ್ಯಾನ್ಸ್​ ಪೇಜ್​ಗಳಲ್ಲಿ ಪೋಸ್ಟ್​ ಕೂಡ ಹಾಕಲಾಗಿದೆ. ಇದು ಒಂದು  ಚಿತ್ರರಂಗದವರಿಗೆ  ಒಳ್ಳೆಯ ಬೆಳವಣಿಗೆ ಆಗಿದೆ.

4. ಅಪ್ಪುಗೆ ಕರ್ನಾಟಕ ರತ್ನ ಘೋಷಣೆ: ಯುವರತ್ನ ರಾಜಕುಮಾರ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಅವರ ಕೆಲಸಗಳನ್ನು ಪರಿಗಣಿಸಿ ಕರ್ನಾಟಕ ರತ್ನ ಪ್ರಶಸ್ತಿ   ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

5. ಜನಪರ ಕಾರ್ಯಗಳ ಬಗ್ಗೆ ಜನರ ಆಸಕ್ತಿ: ಪುನೀತ್​ ಅವರು ಮಾಡುತ್ತಿದ್ದ  ಕೆಲಸ ಕಾರ್ಯಗಳು ಬೆಳಕಿಗೆ ಬಂದ ನಂತರ  ಅಭಿಮಾನಿಗಳ ಮೇಲೆ ತುಂಬಾ  ಪ್ರಭಾವ ಬೀರಿದೆ. ಬಡ ಮಕ್ಕಳಿಗೆ ನೋಟ್​ಬುಕ್​ ಕೊಡುವುದು ಅನೇಕ ಆಶ್ರಮಗಳಿಗೆ ಸಹಾಯ ಮಾಡುವುದು ಹಾಗೆಯೇ  ಶಿಕ್ಷಣಕ್ಕೆ ಸಹಾಯ ಮಾಡುವುದು ಹೀಗೆ ಅನೇಕ ಮುಂತಾದ ಜನಪರ ಕಾರ್ಯಗಳನ್ನು ಮಾಡಲು ಈಗ ಅಭಿಮಾನಿಗಳು ನಾವು ಇತರ ಕಾರ್ಯಗಳನ್ನು ಮಾಡುತ್ತೆವೆ ಎಂದು  ಮುಂದೆಬರುತ್ತಿದ್ದಾರೆ.

6. ರಸ್ತೆ, ವೃತ್ತಗಳಿಗೆ ಅಪ್ಪು ಹೆಸರು: ಕೊಪ್ಪಳ, ಶಿವಮೊಗ್ಗ, ಬೆಂಗಳೂರು ಹಾಗೆಯೇ ಅನೇಕ ಊರುಗಳಲ್ಲಿ  ರಸ್ತೆಗಳಿಗೆ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಇಡಲಾಯಿತು . ಪವರ್ ಸ್ಟಾರ್ ಪುನೀತ್ ರಾಜಕುಮಾರ್  ಹೆಸರನ್ನು ಅಜರಾಮರ ಆಗಿಸುವ ಪ್ರಯತ್ನ ನಡೆದಿದೆ.

7. ಸಮಾಧಿಗೆ ಹರಿದುಬಂದ ಜನಸಾಗರ: ಯಾವುದೇ ಸೆಲೆಬ್ರಿಟಿಯ ಆದರೂ ಅಂತಿಮ ದರ್ಶನಕ್ಕೆ ಜನಸಾಗರ ಹರಿದುಬರುವುದು ನಾವು ನೋಡಿದೀವಿ ಅದು  ಸಹಜ ಕೂಡ ಆದರೆ  ಪುನೀತ್​ ವಿಚಾರದಲ್ಲಿ ಅಭಿಮಾನಿಗಳ ಪ್ರೀತಿ ಬಹಳಾ  ವಿಶೇಷ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ನೋಡಲು ಲಕ್ಷಾಂತರ ಜನರು  ಅಪಾರ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದರು

8. ಪುನೀತ್​ ನಿವಾಸಕ್ಕೆ ಪರಭಾಷೆ ಸ್ಟಾರ್​ಗಳ ಭೇಟಿ: ಎಲ್ಲ ಚಿತ್ರರಂಗದ ಸ್ಟಾರ್ ಗಳ  ಜೊತೆ ಪುನೀತ್​  ಅವರು ಅಪಾರ  ಸ್ನೇಹ ಹೊಂದಿದ್ದರು.  ಅಪ್ಪು ಇನ್ನಿಲ್ಲ ಎಂಬ  ಸುದ್ದಿ ತಿಳಿದ ಮೇಲೆ ಎಲ್ಲರಿಗೂ ಶಾಕ್​ ಆಯಿತು. ತೆಲುಗು, ತಮಿಳು ಮತ್ತು ಬೇರೆ  ಬೇರೆ ಚಿತ್ರ ರಂಗದ  ಅನೇಕ ಸ್ಟಾರ್​ ಕಲಾವಿದರು ಪುನೀತ್​ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬಕ್ಕೆ  ಸಾಂತ್ವನ ಹೇಳುವ ಪ್ರಯತ್ನ ಮಾಡಿದರು.

9. ಜಿಮ್​ ಬಗ್ಗೆ ಭಯ: ಪುನೀತ್ ಅವರಿಗೆ  ಹೃದಯಾಘಾತ ಆಗಿದ್ದು ಜಿಮ್ ನಲ್ಲಿ ವರ್ಕೌಟ್ ಮಡಿದ ಕಾರದಿಂದಾಗಿ ಎಂದು ತಿಳಿದ ನಂತರ ಅನೇಕ ಪೋಷಕರು ಭಯಕ್ಕೆ ಒಳಗಾಗಿ  ತಮ್ಮ ಮಕ್ಕಳನ್ನು ಜಿಮ್​ಗೆ ಕಳಿಸಲು ಹಿಂದೆ ಸರಿಯುತ್ತಿದರೆ.  ಆ ಕಾರಣದಿಂದ ಯುವಕರು ಜಿಮ್ ಕಡೆ ಹೋಗುವುದು ಈಗ  ಕಮ್ಮಿ ಆಗಿದೆ.

10. ಗಂಧದ ಗುಡಿ ಬಗ್ಗೆ ಮೂಡಿದೆ ಬೆಟ್ಟದಷ್ಟು ನಿರೀಕ್ಷೆ: ಪುನೀತ್​ ಅವರಿಗೆ ಗಂಧದ ಗುಡಿ ಬಗ್ಗೆ ತುಂಬಾ ಕನಸು ಇತ್ತು ಆದರೆ ನಿಧನದ ಬಳಿಕ ಇದರ ಟೀಸರ್​ ಬಿಡುಗಡೆ ಆಯಿತು. ಕರುನಾಡ ಪ್ರಕೃತಿ ವೈಭವವನ್ನು ತೆರೆದಿಡುವ ಅದ್ಭುತ  ಸಾಕ್ಷ್ಯಚಿತ್ರ ಇದಾಗಿದೆ. ಅದನ್ನು ಕಂಡು ಎಲ್ಲರಲ್ಲಿ  ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ಅವರಂಥ ದಿಗ್ಗಜ ನಿರ್ದೇಶಕರು ಕೂಡ ‘ಗಂಧದ ಗುಡಿ’ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ  ಚಿತ್ರಕ್ಕೆ ಭಾರಿ ನಿರೀಕ್ಷೆ ಕೂಡ  ಸೃಷ್ಟಿ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top