fbpx
ಸಮಾಚಾರ

ಮಗಳಿಗೆ ಲೈಂಗಿಕತೆ ಬಗ್ಗೆ ಬುದ್ಧಿ ಹೇಳಿಕೊಡ್ಬೇಡಿ, ನಿಮ್ಮ ಮಗನಿಗೆ ಕಲಿಸಿಕೊಡಿ: ಸಮಂತಾ ಹೀಗೆ ಹೇಳಿದ್ಯಾಕೆ?

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕಳೆದ ಮೂರ್ನಾಲ್ಕು ತಿಂಗಳಿನಿಂದ ತಮ್ಮ ಸಾಂಸಾರಿಕ ಜೀವನದ ಬಗ್ಗೆ ಮಾತ್ರ ಸುದ್ದಿಯಾಗಿದ್ದರು. ಪತಿ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ತೆರೆ ಮರೆಯಲ್ಲಿದ್ದ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನ ಹಾಕುತ್ತಾ ಸಕ್ರಿಯರಾಗಿದ್ದಾರೆ. ಇದೀಗ ಸಮಂತಾ ಮಹಿಳೆಯ ಲೈಂಗಿಕತೆಯ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

 

 

ಲೈಂಗಿಕತೆಯ ವಿಚಾರದಲ್ಲಿ ಮಗಳಿಗೆ ಬುದ್ಧಿ ಹೇಳುವ ಬದಲು ಮಹಿಳೆಯರನ್ನು ನಿಯಂತ್ರಿಸದಂತೆ ಮಗನಿಗೆ ಕಲಿಸಿಕೊಡಿ. ಏಕೆಂದರೆ ನಿಮ್ಮ ಮಗಳಿಗೆ ಲೈಂಗಿಕತೆಯ ಹಕ್ಕನ್ನು ನಿರಾಕರಿಸುವುದು, ಅವಳನ್ನು ವಸ್ತುವನ್ನಾಗಿಸುವ ಇನ್ನೊಂದು ಮಾರ್ಗವಾಗಿದೆ ಎಂದು ಇನ್‍ಸ್ಟಾಗ್ರಾಮ್ ಸ್ಟೋರಿಸ್‍ನಲ್ಲಿ ಸಮಂತಾ ತಿಳಿಸಿದ್ದಾರೆ.

ಸಮಂತಾ ಅವರು ಇತ್ತೀಚೆಗೆ ನಟ ನಾಗಚೈತನ್ಯರಿಂದ ವಿಚ್ಛೇದನ ಪಡೆದಿದ್ದು, ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕೆಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top