fbpx
ಸಮಾಚಾರ

ಶಾಸಕ ರಾಜೂಗೌಡ ತಂದೆ ನಿಧನ

ಭಾರತೀಯ ಜನತಾ ಪಾರ್ಟಿ ಶಾಸಕ ರಾಜೂ ಗೌಡ ಅವರ ತಂದೆ ಇಹಲೋಕ ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕ ರಾಜೂಗೌಡ ತಂದೆ ಶಂಭನ ಗೌಡ(75) ನಿಧನರಾಗಿದ್ದಾರೆ.

ಕಳೆದ 7-8 ತಿಂಗಳುಗಳಿಂದ ಶಂಭನಗೌಡರು ಪಾರ್ಶ್ವವಾಯುನಿಂದ ಬಳಲಲುತ್ತಿದ್ದರು. ಇಂದು ಸುರಪುರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತ ಶಂಭನಗೌಡರು ಪುತ್ರ ರಾಜೂಗೌಡ, ಹಣಮಂತ್ರಾಯಗೌಡ ಮತ್ತು ಮಗಳು ಮೈತ್ರಾದೇವಿಯನ್ನು ಅಗಲಿದ್ದಾರೆ.

ಅಬಕಾರಿ ಇಲಾಖೆಯಲ್ಲಿ 35 ವರ್ಷ ಸೇವೆಸಲ್ಲಿಸಿ, ಶಂಭನ ಗೌಡ ಸ್ವಯಂ ನಿವೃತ್ತಿ ಹೊಂದಿದ್ದರು. ಅಂತ್ಯಕ್ರಿಯೆ ನಾಳೆ ಸ್ವಗ್ರಾಮ ಕೊಡೇಕಲ್‍ನಲ್ಲಿ ನಡೆಯಲಿದೆ ಎಂದು ಶಾಸಕ ರಾಜೂಗೌಡ ಕುಟುಂಬಸ್ಥರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top