ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಮತ್ತು ಧನುಷ್ ಅಭಿನಯದ, ‘ಅತ್ರಂಗಿ ರೇ’ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವಿರೋಧ ಎದುರಿಸುತ್ತಿದೆ. ಡಿಸೆಂಬರ್ 24 ರಂದು ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾದ ಚಿತ್ರವು ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ ಎಂದು ಹಿಂದೂ ಪರ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಚಿತ್ರದಲ್ಲಿ ಇರುವುದೇನು?
ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಚಿತ್ರದಲ್ಲಿ ಸಜ್ಜದ್ ಅಲಿ ಖಾನ್ ಎಂಬ ಮುಸ್ಲಿಂ ವ್ಯಕ್ತಿಯ ಪಾತ್ರವನ್ನು ಮಾಡಿದ್ದಾರೆ. ಮತ್ತೊಂದೆಡೆ, ಸಾರಾ ಅಲಿ ಖಾನ್ ಅವರು ರಿಂಕು ರಘುವಂಶಿ ಎಂಬ ಹಿಂದೂ ಹುಡುಗಿ ಪಾತ್ರವನ್ನು ಮಾಡಿದ್ದಾರೆ. ಸಾರಾ ಅಲಿ ಖಾನ್ ಅವರು ಸಜ್ಜದ್ ಅಲಿ ಖಾನ್ ಅವರನ್ನು ಪ್ರೀತಿಸುತ್ತಾರೆ. ರಿಂಕು (ಸಾರಾ) ಅವರಿಗೆ ಕುಟುಂಬದವರು ವಿಷು (ಧನುಷ್) ನನ್ನು ಬಲವಂತವಾಗಿ ಮದುವೆಯಾಗುವುದನ್ನು ತೋರಿಸುತ್ತದೆ, ಆದರೆ ಅವಳು ತನ್ನ ಗೆಳೆಯ ಸಜ್ಜದ್ ಅಲಿ ಖಾನ್ ನನ್ನೇ ಪ್ರೀತಿಸುತ್ತಾಳೆ. ಮತ್ತು ಸಜ್ಜದ್ ಅಲಿ ಖಾನ್ ಗಾಗಿ ಹುಡುಕಾಡುತ್ತಾಳೆ.
Hiñdu girl proudly saying she loves a Mîyan bhai and calls it a true löve story..
This is how böllyDawóod softly propagating love jíhád in our society..#Boycott_Atrangi_Re pic.twitter.com/0NJDLRy3Ny— Ravi Tiwari 🇮🇳 (@Ravitiwarii_) December 28, 2021
ಟ್ವಿಟರ್ನಲ್ಲಿ ಅತ್ರಾಂಗಿ ರೇ ವಿರುದ್ಧ ಪೋಸ್ಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಚಿತ್ರವನ್ನು ನಿಷೇಧಿಸಬೇಕೆಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಟ್ವಿಟ್ಟರ್ ಬಳಕೆದಾರರು “‘ಲವ್ ಜಿಹಾದ್’ ಅನ್ನು ಹಿಂದಿ ಚಲನಚಿತ್ರಗಳಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಮತ್ತು ಮುಸ್ಲಿಂ ನಟರು ಹಿಂದೂ ನಟಿಯರನ್ನು ಮದುವೆಯಾಗಿ ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ‘ಲವ್ ಜಿಹಾದ್’ಗೆ ಕಡಿವಾಣ ಹಾಕಬೇಕಾದರೆ ಮೊದಲು ಹಿಂದಿ ಸಿನಿಮಾ ನಿರ್ಮಾಣಕ್ಕೆ ಲಗಾಮು ಹಾಕಬೇಕು. ” ಎಂದು ಬರೆದಿದ್ದಾರೆ.
#Boycott_Atrangi_Re
Anti – Hindu Bollywood !!The nepotism in Bollywood since many years, deliberate sidetracking of the Hindu artists, incessant production of anti-Hindu movies, to expose the ongoing anti-Hindu conspiracy for decades. pic.twitter.com/gqPB1vvaFA
— Pooja (@pooja88740115) December 28, 2021
#Boycott_Atrangi_Re
Govarmant strict action and ban all those movies which intentionally hurt Hindu religion. ✊ pic.twitter.com/pHLktbuBMQ— Akash (@Akash29455678) December 28, 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
