ಜನವರಿ 3, 2022 ಸೋಮವಾರ
ವರ್ಷ : 1943, ಪ್ಲಾವ
ತಿಂಗಳು : ಪುಷ್ಯ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಪ್ರತಿಪತ್ : Jan 03 12:03 am – Jan 03 08:32 pm; ದ್ವಿತೀಯಾ : Jan 03 08:32 pm – Jan 04 05:19 pm
ನಕ್ಷತ್ರ : ಪೂರ್ವಾಷಾಢ: Jan 02 04:23 pm – Jan 03 01:33 pm; ಉತ್ತರಾಷಾಢ: Jan 03 01:33 pm – Jan 04 10:57 am
ಯೋಗ : ವ್ಯಾಘಾತ: Jan 03 05:29 am – Jan 04 01:24 am; ಹರ್ಷನ: Jan 04 01:24 am – Jan 04 09:37 pm
ಕರಣ : ಕಿಮ್ಸ್ತುಗ್ನ: Jan 03 12:03 am – Jan 03 10:16 am; ಬಾವ: Jan 03 10:16 am – Jan 03 08:32 pm; ಬಾಲವ: Jan 03 08:32 pm – Jan 04 06:52 am
Time to be Avoided
ರಾಹುಕಾಲ : 8:10 AM to 9:35 AM
ಯಮಗಂಡ : 10:59 AM to 12:24 PM
ದುರ್ಮುಹುರ್ತ : 12:46 PM to 01:31 PM, 03:01 PM to 03:46 PM
ವಿಷ : 08:41 PM to 10:06 PM
ಗುಳಿಕ : 1:48 PM to 3:12 PM
Good Time to be Used
ಅಮೃತಕಾಲ : 09:19 AM to 10:43 AM, 05:14 AM to 06:40 AM
ಅಭಿಜಿತ್ : 12:01 PM to 12:46 PM
Other Data
ಸೂರ್ಯೋದಯ : 6:46 AM
ಸುರ್ಯಾಸ್ತಮಯ : 6:01 PM
ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಹೆಂಡ ಕುಡಿದರು ಎಂದೇ ಪಿತೂರಿ ಎಬ್ಬಿಸುವರು. ಹಾಗಾಗಿ ಯಾವುದೇ ಕಾರ್ಯ ಮಾಡುವ ಮೊದಲು ಸ್ಥಾನಬಲ ಮುಖ್ಯ. ಯಾವುದೇ ಸೂಕ್ತ ನಿರ್ಧಾರ ತಳೆಯುವ ಮುನ್ನ ಎರಡು ಬಾರಿ ಯೋಚಿಸಿ.
ಅಡಕೆ ಕದ್ದ ಮಾನ ಆನೆ ಕೊಟ್ಟರೂ ಸರಿಹೋಗದು ಎಂಬ ಗಾದೆ ಮಾತು ನೆನಪಾಗುವುದು. ಆದರೂ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲವೂ ಸುಗಮವಾಗುವವು.
ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ತೀರ್ಮಾನ ಅಪಹಾಸ್ಯಕ್ಕೆ ಗುರಿ ಆಗುವ ಸಂದರ್ಭ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಅಧಿಕ ಖರ್ಚಿನ ದಾರಿ ಎದುರಾಗುವುದು.
ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.
ಕ್ಷಲ್ಲಕರನ್ನು ನೀವು ದೂರವಿಡುವುದೇ ಒಳ್ಳೆಯದು. ನಿಮ್ಮ ಪ್ರಗತಿಯನ್ನು ಕಂಡು ಕುರುಬುವ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತಾರೆ. ಅವರನ್ನು ಉದಾಸೀನ ಮಾಡುವುದೇ ಲೇಸು.
ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಮಾತಿನಲ್ಲಿ ನಯ, ವಿನಯ ಇರಲಿ.
ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ಸ್ನೇಹಿತರು ನಿಮ್ಮೊಂದಿಗೆ ಹೆಜ್ಜೆ ಹಾಕುವರು.
ನಿಮ್ಮ ಕುರಿತಾಗಿ ಅಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.
ವಿರಸವೇ ಮರಣ ಸರಸವೇ ಜೀವನ ಎನ್ನುವಂತೆ ಎಲ್ಲರೊಂದಿಗೆ ವಿನೋದವಾಗಿ ಸ್ನೇಹಪೂರ್ಣವಾಗಿ ವರ್ತಿಸುವ ಗುಣವೇ ನಿಮ್ಮನ್ನು ಅತ್ಯುನ್ನತ ಸ್ಥಾನಕ್ಕ ಕೊಂಡೊಯ್ಯುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.
ಕಬ್ಬು ಸಿಹಿ ಇದೆ ಎಂದು ಸಿಪ್ಪೆಯ ಸಹಿತ ಅಗೆಯಲು ಆಗುವುದಿಲ್ಲ. ಅಂತೆಯೆ ಕೆಲವು ವಿಚಾರಗಳ ಬಗ್ಗೆ ಮೂಲಕ್ಕೆ ಕೈಹಾಕಲು ಮುಂದಾಗದಿರಿ. ಇದರಿಂದ ನೋವಿಗೆ ದಾರಿ ಆಗುವುದು. ಅರಿತು ಆಳಿದರೆ ಆರು ವರ್ಷ ಮರೆತು ಬಾಳಿದರೆ ಮೂರು ವರ್ಷ ಎಂಬುದು ನೆನಪಿರಲಿ.
ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಸಂಭಾಳಿಸಿ.ಆಪತ್ತು ಎದುರಾಗುವ ಮುನ್ನ ಅದರ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವುದು ಒಳ್ಳೆಯದು.
ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಅಪಾರವಾಗಿವೆ. ಅವರು ಅವನ್ನು ಬಹಿರಂಗವಾಗಿಯೂ ಪ್ರಕಟಗೊಳಿಸುವರು. ಇದರಿಂದ ನಿಮಗೆ ಆತ್ಮತೃಪ್ತಿಯೂ ಮತ್ತು ಧನ್ಯತಾಭಾವವೂ ಮೂಡುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
