fbpx
ಸಮಾಚಾರ

ತಾಯಿಯಾಗ್ತಿದ್ದಾರೆ ಕಾಜಲ್ ಅಗರ್ವಾಲ್: ಸಿಹಿ ಸುದ್ದಿ ಹಂಚಿಕೊಂಡ ಕಾಜಲ್ ಪತಿ

‘ಮಗಧೀರ’ ಖ್ಯಾತಿಯ ನಟಿ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದು ನಟಿ ಕಾಜಲ್ ಅಗರ್ವಾಲ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಬಗ್ಗೆ ಅವರ ಪತಿ ಗೌತಮ್ ಕಿಚ್ಲು ದೃಢಪಡಿಸಿದ್ದಾರೆ.

 

 

View this post on Instagram

 

A post shared by Gautam Kitchlu (@kitchlug)

 

ಕಾಜಲ್, ಗೌತಮ್ ಹೇಳಿದ್ದೇನು?
ಪತಿಯ ಜೊತೆಗಿನ ಫೋಟೋ ಹಂಚಿಕೊಂಡಿರುವ ಗೌತಮ್ ಅವರು, “2022ರನ್ನು ಎದುರು ನೋಡುತ್ತಿದ್ದೇವೆ” ಎಂದು ಕ್ಯಾಪ್ಶನ್ ನೀಡಿರುವ ಅವರು ಗರ್ಭಿಣಿ ಇಮೋಜಿ ಹಂಚಿಕೊಂಡಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಅವರು “ಹೊಸ ಆರಂಭವನ್ನು ಎದುರು ನೋಡುತ್ತಿದ್ದೇವೆ. 2021ಕ್ಕೆ ಧನ್ಯವಾದಗಳು, ಜ್ಞಾನ, ಪ್ರೀತಿ, ಕಾಳಜಿ ಮೂಲಕ 2022 ಬರಮಾಡಿಕೊಳ್ಳೋಣ” ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಕಾಜಲ್ ಹಾಗೂ ಗೌತಮ್ 2020ರ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೌತಮ್ ಉದ್ಯಮಿಯಾಗಿದ್ದಾರೆ. ಕಾಜಲ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2004ರಲ್ಲಿ. ತಮ್ಮ ಅಭಿನಯದ ಮೂಲಕವಾಗಿ ಟಾಲಿವುಡ್‍ನಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾರೆ. ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಕಾಜಲ್ ಅಗರ್ವಾಲ್ ಇದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top